ಯಮುನಾನಗರ (ಹರಿಯಾಣ): ಯಮುನಾನಗರದ ಸಿಟಿ ಸೆಂಟರ್ ಪಾರ್ಕ್ ಪ್ರದೇಶದಲ್ಲಿ ಗುರುವಾರ ಗುಜರಿ ಸಾಮಗ್ರಿ ತುಂಬಿಟ್ಟಿದ್ದ ಗೋದಾಮಿನಲ್ಲಿ (fire gutted a scrap godown) ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಒಂದೇ ಕುಟುಂಬದ ನಾಲ್ವರು ಸಜೀವ ದಹನಗೊಂಡಿದ್ದಾರೆ. ಅಲ್ಲದೆ, ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತರನ್ನು ಬಿಹಾರದ ಮಧುಬನ್ ಜಿಲ್ಲೆ(Madhuban Dist)ಯ ನಿವಾಸಿ ನಿಯಾಮುದಿನ್ (37), ಅವರ ಪುತ್ರಿ ಫಿಜಾ (12), ಮತ್ತು ಇಬ್ಬರು ಪುತ್ರರಾದ ಚಾಂದ್ ಮತ್ತು ರೆಹಾನ್ (3) ಎಂದು ಗುರುತಿಸಲಾಗಿದೆ. ನಿಯಾಮುದ್ದೀನ್ ಅವರ ಪತ್ನಿ ನಸೀಮಾ ಸುಟ್ಟ ಗಾಯಗಳೊಂದಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ. ನಸೀಮಾ ಅವರು ಯಮುನಾನಗರದ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ : ಪ್ರಮುಖ ಪ್ರತಿಪಕ್ಷದ ಪಾತ್ರ ನಿರ್ವಹಣೆಯಲ್ಲಿ ಕಾಂಗ್ರೆಸ್ ವಿಫಲ- ಮಾಜಿ ಸಿಎಂ ಮುಕುಲ್ ಸಂಗ್ಮಾ
ನಿನ್ನೆ ಮಧ್ಯರಾತ್ರಿ 1.30ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಗೋಡೌನ್(Godown)ನಿಂದ ದಟ್ಫ ಹೊಗೆ ಬರುತ್ತಿರುವುದನ್ನು ನೋಡಿದ ನೆರೆಹೊರೆಯವರು ಪೊಲೀಸರು ಮತ್ತು ಅಗ್ನಿಶಾಮಕ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಬಳಿಕ ಸ್ಥಳಕ್ಕೆ ಬಂದ ಸಿಬ್ಬಂದಿ ಅಕ್ಕಪಕ್ಕದ ಮನೆಗಳ ಮೇಲ್ಛಾವಣಿಯಿಂದ ಮತ್ತು ಗೋದಾಮಿನ ಹಿಂಭಾಗದ ಗೋಡೆ ಒಡೆದು ಒಳ ಪ್ರವೇಶಿಸಿದ ಪೊಲೀಸರು(Police) ಮತ್ತು ಅಗ್ನಿಶಾಮಕ ದಳದ ತಂಡಗಳು ಗೋಡೌನ್‌ನೊಳಗೆ ಕಾರ್ಮಿಕರಿಗಾಗಿ ವಿವಿಧ ಕ್ವಾರ್ಟರ್‌ಗಳಲ್ಲಿ ವಾಸಿಸುತ್ತಿದ್ದ ನಾಲ್ಕು ಕುಟುಂಬಗಳ 17 ಜನರನ್ನು ರಕ್ಷಿಸಿದ್ದಾರೆ. ಅಲ್ಲದೇ, ದುರ್ಘಟನೆಯಲ್ಲಿ ಸುಟ್ಟುಹೋದ ನಾಲ್ವರ ಮೃತದೇಹಗಳನ್ನು ಹೊರತೆಗೆಯಲಾಗಿದೆ.
ಪ್ರತ್ಯಕ್ಷದರ್ಶಿಯೊಬ್ಬರು ಹೇಳುವ ಪ್ರಕಾರ್, ರಕ್ಷಣಾ ಕಾರ್ಯಾಚರಣೆಯ ವೇಳೆ ಎಲ್ಲರೂ ಹೊರಬರುವಲ್ಲಿ ಯಶಸ್ವಿಯಾದರು ಆದರೆ ನಿಯಾಮುದಿನ್ ಮತ್ತು ಅವರ ಮಕ್ಕಳು ಬೆಂಕಿಗೆ(Fire) ಆಹುತಿಯಾದರು ಎಂದು ಹೇಳಿದರು. ಮೃತ ನಿಯಾಮುದಿನ್ ಯಮುನಾನಗರದ ಪ್ಲೈವುಡ್ ಕಾರ್ಖಾನೆಯಲ್ಲಿ (Plywood factory) ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ಮತ್ತು ಅವರು ತಮ್ಮ ಕುಟುಂಬದೊಂದಿಗೆ ಗೋಡೌನ್‌ನಲ್ಲಿ ಬಾಡಿಗೆಗೆ ಇದ್ದರು ಎಂದು ತಿಳಿದುಬಂದಿದೆ.
ಇದನ್ನೂ ಓದಿ : ದೇಶದಲ್ಲಿ ಗಗನಕ್ಕೇರುತ್ತಿದೆ ತರಕಾರಿ ಬೆಲೆ : ಆದ್ರೆ ಇಲ್ಲಿ ಕಡಿಮೆ ಬೆಲೆಗೆ ಸಿಗುತ್ತೆ ಟೊಮೇಟೊ-ಈರುಳ್ಳಿ!
ಆರು ಅಗ್ನಿಶಾಮಕ ದಳಗಳು ಬೆಂಕಿಯನ್ನು ನಿಯಂತ್ರಿಸಲು ಹರಸಾಹಸಪಟ್ಟರು. ಅವರು ಹಲವಾರು ಗಂಟೆಗಳ ನಂತರ ಬೆಂಕಿ ನಂದಿಸಲಾಯಿತು ಎಂದು ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.