ಹಣದುಬ್ಬರದ ಮಧ್ಯೆ ಸಾರ್ವಜನಿಕರಿಗೆ ಬಿಗ್ ರಿಲೀಫ್: CNG ಬೆಲೆಯಲ್ಲಿ 8 ರೂ. ಇಳಿಕೆ, PNG ದರ ಹೀಗಿದೆ

CNG-PNG Price: ದೇಶೀಯವಾಗಿ ತಯಾರಿಸಿದ ಅನಿಲ ಬೆಲೆಗಳಲ್ಲಿನ ಕಡಿತದ ಲಾಭವನ್ನು ಸಿ ಎನ್‌ ಜಿ-ಪಿ ಎನ್‌ ಜಿ ಗ್ರಾಹಕರಿಗೆ ವರ್ಗಾಯಿಸಲು ಸಂತೋಷವಾಗಿದೆ ಎಂದು ಎಂಜಿಎಲ್ ಹೇಳಿಕೆಯಲ್ಲಿ ತಿಳಿಸಿದೆ. ಈ ನಿರ್ಧಾರದ ಅಡಿಯಲ್ಲಿ, ಮುಂಬೈ ಮೆಟ್ರೋಪಾಲಿಟನ್ ಪ್ರದೇಶ ಮತ್ತು ಹತ್ತಿರದ ಪ್ರದೇಶಗಳಲ್ಲಿ ಸಿ ಎನ್‌ ಜಿ ಬೆಲೆಯಲ್ಲಿ ಕೆಜಿಗೆ 8 ರೂ ಮತ್ತು ಪಿ ಎನ್‌ ಜಿ ಪ್ರತಿ ಕ್ಯೂಬಿಕ್ ಮೀಟರ್‌ಗೆ ರೂ 5 ಕಡಿಮೆ ಮಾಡಲಾಗುತ್ತಿದೆ.

Written by - Bhavishya Shetty | Last Updated : Apr 7, 2023, 11:56 PM IST
    • ಮಹಾನಗರ ಗ್ಯಾಸ್ ತನ್ನ ಪರವಾನಗಿ ಪ್ರದೇಶದಲ್ಲಿ ಈ ಕಡಿತವನ್ನು ಮಾಡಿದೆ
    • ಮುಂಬೈನಲ್ಲಿ ಸಿ ಎನ್‌ ಜಿ ಬೆಲೆಯಲ್ಲಿ ಕೆಜಿಗೆ 8 ರೂ ಮತ್ತು ಪಿ ಎನ್‌ ಜಿ ಬೆಲೆಯಲ್ಲಿ ರೂ 5 ಕಡಿತಗೊಳಿಸಿದೆ
    • ಸಿ ಎನ್‌ ಜಿ-ಪಿ ಎನ್‌ ಜಿ ಗ್ರಾಹಕರಿಗೆ ವರ್ಗಾಯಿಸಲು ಸಂತೋಷವಾಗಿದೆ ಎಂದು ಎಂಜಿಎಲ್ ಹೇಳಿಕೆಯಲ್ಲಿ ತಿಳಿಸಿದೆ
ಹಣದುಬ್ಬರದ ಮಧ್ಯೆ ಸಾರ್ವಜನಿಕರಿಗೆ ಬಿಗ್ ರಿಲೀಫ್: CNG ಬೆಲೆಯಲ್ಲಿ 8 ರೂ. ಇಳಿಕೆ, PNG ದರ ಹೀಗಿದೆ title=
CNG Price

CNG-PNG Price: ಹಣದುಬ್ಬರದಿಂದ ಕಂಗೆಟ್ಟಿದ್ದ ಜನತೆಗೆ ಬಿಗ್ ರಿಲೀಫ್ ಸಿಕ್ಕಿದೆ. ಶುಕ್ರವಾರ, GAIL ಇಂಡಿಯಾದ ಅಂಗಸಂಸ್ಥೆಯಾದ ಮಹಾನಗರ ಗ್ಯಾಸ್ (MGL), ಮುಂಬೈನಲ್ಲಿ ಸಿ ಎನ್‌ ಜಿ ಬೆಲೆಯಲ್ಲಿ ಕೆಜಿಗೆ 8 ರೂ ಮತ್ತು ಪಿ ಎನ್‌ ಜಿ ಬೆಲೆಯಲ್ಲಿ ರೂ 5 ಕಡಿತಗೊಳಿಸಿದೆ. ಮಹಾನಗರ ಗ್ಯಾಸ್ ತನ್ನ ಪರವಾನಗಿ ಪ್ರದೇಶದಲ್ಲಿ ಈ ಕಡಿತವನ್ನು ಮಾಡಿದೆ. ದೇಶೀಯವಾಗಿ ತಯಾರಿಸಿದ ನೈಸರ್ಗಿಕ ಅನಿಲದ ಬೆಲೆ ನಿಗದಿಗೆ ಹೊಸ ವ್ಯವಸ್ಥೆಯನ್ನು ಘೋಷಿಸಿದ ನಂತರ MGL ಈ ಕ್ರಮ ಕೈಗೊಂಡಿದೆ. ಈ ಘೋಷಣೆಯ ನಂತರ, ಸರ್ಕಾರವು ಸಿ ಎನ್‌ ಜಿ ಮತ್ತು ಪಿ ಎನ್‌ ಜಿ ಹೊಸ ಬೆಲೆಗಳನ್ನು ಶುಕ್ರವಾರ ಪ್ರಕಟಿಸಿತು.

ಇದನ್ನೂ ಓದಿ: IPL ಮಧ್ಯೆಯೇ ಟೀಂ ಇಂಡಿಯಾದ ಈ ಸ್ಫೋಟಕ ಆರಂಭಿಕ ಆಟಗಾರ ಮೇಲೆ ಕೇಸು ದಾಖಲು!

ದೇಶೀಯವಾಗಿ ತಯಾರಿಸಿದ ಅನಿಲ ಬೆಲೆಗಳಲ್ಲಿನ ಕಡಿತದ ಲಾಭವನ್ನು ಸಿ ಎನ್‌ ಜಿ-ಪಿ ಎನ್‌ ಜಿ ಗ್ರಾಹಕರಿಗೆ ವರ್ಗಾಯಿಸಲು ಸಂತೋಷವಾಗಿದೆ ಎಂದು ಎಂಜಿಎಲ್ ಹೇಳಿಕೆಯಲ್ಲಿ ತಿಳಿಸಿದೆ. ಈ ನಿರ್ಧಾರದ ಅಡಿಯಲ್ಲಿ, ಮುಂಬೈ ಮೆಟ್ರೋಪಾಲಿಟನ್ ಪ್ರದೇಶ ಮತ್ತು ಹತ್ತಿರದ ಪ್ರದೇಶಗಳಲ್ಲಿ ಸಿ ಎನ್‌ ಜಿ ಬೆಲೆಯಲ್ಲಿ ಕೆಜಿಗೆ 8 ರೂ ಮತ್ತು ಪಿ ಎನ್‌ ಜಿ ಪ್ರತಿ ಕ್ಯೂಬಿಕ್ ಮೀಟರ್‌ಗೆ ರೂ 5 ಕಡಿಮೆ ಮಾಡಲಾಗುತ್ತಿದೆ.

ಇದನ್ನೂ ಓದಿ: IPL 2023: ಹೀನಾಯ ಸೋಲಿನ ಬಳಿಕ RCBಯಿಂದ ಹೊರಬಿದ್ದ ಆಟಗಾರ: ಈ ಮಾರಕ ಬೌಲರ್ ಗ್ರ್ಯಾಂಡ್ ಎಂಟ್ರಿ!

ಮಧ್ಯರಾತ್ರಿಯಿಂದ ಜಾರಿಗೆ ಬರಲಿರುವ ಈ ನಿರ್ಧಾರದ ನಂತರ, ಸಿ ಎನ್‌ ಜಿ ಪ್ರತಿ ಕೆಜಿಗೆ 79 ರೂ.ಗೆ ಮತ್ತು ಪಿ ಎನ್‌ ಜಿ ಪ್ರತಿ ಎಸ್‌ಸಿಎಂಗೆ 49 ರೂ.ಗೆ ಲಭ್ಯವಿರುತ್ತದೆ. ಏಪ್ರಿಲ್ 1 ರಿಂದ, ಎಪಿಎಂ ಗ್ಯಾಸ್ ಬೆಲೆಯು ಭಾರತೀಯ ಕಚ್ಚಾ ಬ್ಯಾಸ್ಕೆಟ್‌ನ ಮಾಸಿಕ ಸರಾಸರಿಯ 10 ಪ್ರತಿಶತದಷ್ಟು ಇರುತ್ತದೆ. ಆದರೆ ಅಂತಹ ದರವನ್ನು ಪ್ರತಿ ಮಿಲಿಯನ್ ಬ್ರಿಟಿಷ್ ಥರ್ಮಲ್ ಯೂನಿಟ್‌ಗೆ $6.5 ಕ್ಕೆ ಮಿತಿಗೊಳಿಸಲಾಗುವುದು. ಪ್ರಸ್ತುತ ಗ್ಯಾಸ್ ಬೆಲೆ ಪ್ರತಿ mmBtu ಗೆ $8.57 ಆಗಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News