ಬೆಂಕಿ ಅವಘಡ: ಆರು ತಿಂಗಳ ಮಗು ಸೇರಿ ಒಂದೇ ಕುಟುಂಬದ ಐವರು ಬಲಿ

ಮಾಯಾವತಿ ಕಾಲೊನಿಯಲ್ಲಿ ನಡೆದ ಬೆಂಕಿ ಅವಘಡದಲ್ಲಿ ಆರು ತಿಂಗಳ ಮಗು ಸೇರಿ ಒಂದೇ ಕುಟುಂಬದ ಐವರು ಸಜೀವ ದಹನವಾದ ಧಾರುಣ ಘಟನೆ ನಡೆದಿದೆ. 

Last Updated : May 1, 2019, 12:39 PM IST
ಬೆಂಕಿ ಅವಘಡ: ಆರು ತಿಂಗಳ ಮಗು ಸೇರಿ ಒಂದೇ ಕುಟುಂಬದ ಐವರು ಬಲಿ title=

ಲಕ್ನೋ: ಶಾರ್ಟ್ ಸರ್ಕ್ಯುಟ್ ನಿಂದಾಗಿ ನಡೆದ ಬೆಂಕಿ ಅವಘಡದಲ್ಲಿ ಒಂದೇ ಕುಟುಂಬದ ಐದು ಮಂದಿ ಸಾವನ್ನಪ್ಪಿದ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ. 

ಉತ್ತರಪ್ರದೇಶದ ಲಖನೌದಲ್ಲಿರುವ ಇಂದಿರಾನಗರದ ಮಾಯಾವತಿ ಕಾಲೊನಿಯಲ್ಲಿ ಈ ಬೆಂಕಿ ಅವಘಡ ನಡೆದಿದ್ದು, ನಿದ್ರಿಸುತ್ತಿದ್ದ ಆರು ತಿಂಗಳ ಮಗು ಸೇರಿ ಒಂದೇ ಕುಟುಂಬದ ಐವರು ಸಜೀವ ದಹನವಾದ ಧಾರುಣ ಘಟನೆ ನಡೆದಿದೆ. 

ಮಾಯಾವತಿ ಕಾಲೊನಿಯ ಮನೆಯೊಂದರಲ್ಲಿ ಶಾರ್ಟ್​ ಸರ್ಕ್ಯೂಟ್​ನಿಂದಾಗಿ ಬೆಂಕಿ ಹೊತ್ತಿಕೊಂಡಿದ್ದು, ಮನೆಯ ಪಕ್ಕದಲ್ಲೇ ಇದ್ದ ಗ್ಯಾಸ್​ ಗೋಡಾನ್​ಗೂ ಹಬ್ಬಿ ಅವಘಡದ ಪ್ರಮಾಣ ಹೆಚ್ಚಿದೆ. ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ.

Trending News