Five State Elections 2022: ಬೆಳಗ್ಗೆ 6 ರಿಂದ ರಾತ್ರಿ 10 ಪ್ರಚಾರ ನಡೆಸಲು ಅನುಮತಿ ನೀಡಿದ ECI, ಪಾದಯಾತ್ರೆಗಳ ಮೇಲಿನ ನಿರ್ಬಂಧವೂ ತೆರವು

ECI Order - ಭಾರತೀಯ ಚುನಾವಣಾ ಆಯೋಗವು (Election Commission Of India) ಶನಿವಾರ ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

Written by - Nitin Tabib | Last Updated : Feb 12, 2022, 10:28 PM IST
  • ನಿಯಮಗಳಲ್ಲಿ ಸಡಿಲಿಕೆ ನೀಡಿದ ಚುನಾವಣಾ ಆಯೋಗ
  • ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ಪ್ರಚಾರ ನಡೆಸಬಹುದು
  • 5 ರಾಜ್ಯಗಳಲ್ಲಿ ಚುನಾವಣಾ ಹಿನ್ನೆಲೆ
Five State Elections 2022: ಬೆಳಗ್ಗೆ 6 ರಿಂದ ರಾತ್ರಿ 10 ಪ್ರಚಾರ ನಡೆಸಲು ಅನುಮತಿ ನೀಡಿದ ECI, ಪಾದಯಾತ್ರೆಗಳ ಮೇಲಿನ ನಿರ್ಬಂಧವೂ ತೆರವು title=
Five State Elections 2022 (File Photo)

ECI Order - ಭಾರತೀಯ ಚುನಾವಣಾ ಆಯೋಗವು (Election Commission Of India) ಶನಿವಾರ ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಅದರಂತೆ ಪಾದಯಾತ್ರೆ ಮೇಲಿನ ನಿಷೇಧವನ್ನು ತೆರವುಗೊಳಿಸಲಾಗಿದೆ. ಪ್ರಚಾರದ ಅವಧಿಯನ್ನೂ ಎರಡು ಗಂಟೆಗಳವರೆಗೆ ವಿಸ್ತರಿಸಲಾಗಿದೆ. ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಎಲ್ಲಾ ಸೂಚನೆಗಳನ್ನು ಅನುಸರಿಸಿ ಬೆಳಗ್ಗೆ 6 ರಿಂದ ರಾತ್ರಿ 10 ರವರೆಗೆ ಪ್ರಚಾರ ನಡೆಸಬಹುದಾಗಿದೆ. 

ಚುನಾವಣಾ ಪ್ರಚಾರದ ಸಮಯ ಮಿತಿಯನ್ನು ಸಡಿಲಿಸುವುದರೊಂದಿಗೆ, ಸ್ಥಳದ ಸಾಮರ್ಥ್ಯದ ಆಧಾರದ ಮೇಲೆ ರ‍್ಯಾಲಿಗಳಿಗೂ ಆಯೋಗ (Election Commission) ಅನುಮತಿ ನೀಡಿದೆ. ದೇಶಾದ್ಯಂತ ಮತ್ತು ಮತದಾನದ ರಾಜ್ಯಗಳಲ್ಲಿ ಪ್ರಕರಣಗಳಲ್ಲಿ "ಗಮನಾರ್ಹ ಇಳಿಕೆ" ಯನ್ನು ಉಲ್ಲೇಖಿಸಿ ಆಯೋಗವು COVID ನಿರ್ಬಂಧಗಳನ್ನು ತೆಗೆದುಹಾಕಿದೆ. ರಾಜಕೀಯ ಪಕ್ಷಗಳಿಗೆ ಸಡಿಲಿಕೆಯನ್ನು ಪ್ರಕಟಿಸಿದ ಆಯೋಗವು ಹೇಳಿಕೆಯಲ್ಲಿ, "ಕೇಂದ್ರ ಆರೋಗ್ಯ ಕಾರ್ಯದರ್ಶಿಯಿಂದ ಪಡೆದ ಮಾಹಿತಿಯ ಪ್ರಕಾರ, ಕೋವಿಡ್ನ ಗ್ರೌಂಡ್ ರಿಯಾಲಿಟಿ ಗಮನಾರ್ಹವಾಗಿ ಸುಧಾರಿಸಿದೆ ಮತ್ತು ದೇಶದಲ್ಲಿ ಪ್ರಕರಣಗಳು ವೇಗವಾಗಿ ಕಡಿಮೆಯಾಗುತ್ತಿವೆ." ಎಂದು ಹೇಳಿದೆ.

ಇದನ್ನೂ ಓದಿ -ದೇಶದ ಇದುವರೆಗಿನ ಅತಿ ದೊಡ್ಡ ಬ್ಯಾಂಕ್ ಫ್ರಾಡ್! 28 ಬ್ಯಾಂಕುಗಳಿಗೆ 22,842 ಕೋಟಿ ರೂ.ಗಳ ಪಂಗನಾಮ

ಚುನಾವಣಾ ಪ್ರಚಾರವನ್ನು ಇನ್ನು ಮುಂದೆ ಬೆಳಗ್ಗೆ 8 ರಿಂದ ರಾತ್ರಿ 8 ರ ಬದಲಿಗೆ ಬೆಳಗ್ಗೆ 6 ರಿಂದ ರಾತ್ರಿ 10 ರವರೆಗೆ ನಡೆಸಬಹುದು ಎಂದು ಚುನಾವಣಾ ಆಯೋಗ (ECI) ಹೇಳಿದೆ. ಜಿಲ್ಲಾ ಅಧಿಕಾರಿಗಳು ಸೀಮಿತ ಸಂಖ್ಯೆಯ ವ್ಯಕ್ತಿಗಳೊಂದಿಗೆ ಪಾದಯಾತ್ರೆಗೆ ಅನುಮತಿ ನೀಡಲಿದ್ದಾರೆ. ಆಯೋಗವು ನಿರ್ಬಂಧಗಳನ್ನು ತೆಗೆದುಹಾಕುವಾಗ "ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳ ಹೆಚ್ಚಿನ ಭಾಗವಹಿಸುವಿಕೆಯ ಅಗತ್ಯ" ವನ್ನು ಒತ್ತಿ ಹೇಳಿದೆ.

ಇದನ್ನೂ ಓದಿ-IPL Auction: ವೇದಿಕೆಯ ಮೇಲೆ ಕುಸಿದು ಬಿದ್ದ Hugh Edmeades, ಏನಿದು ಪೋಸ್ಚುರಲ್ ಹೈಪೋಟೆನ್ಶನ್?

ಕೋವಿಡ್-19 ಪ್ರಕರಣಗಳ ಹೆಚ್ಚಳವನ್ನು ಉಲ್ಲೇಖಿಸಿ, ಚುನಾವಣಾ ಆಯೋಗ ಜನವರಿ 8 ರಂದು ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ, ಪಂಜಾಬ್ ಮತ್ತು ಮಣಿಪುರಕ್ಕೆ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸುವಾಗ ಭೌತಿಕ ರ‍್ಯಾಲಿಗಳು, ರೋಡ್ ಶೋಗಳು ಮತ್ತು ಪಾದಯಾತ್ರೆಗಳನ್ನು ನಿಷೇಧಿಸಿತ್ತು.

ಇದನ್ನೂ ಓದಿ-ಹೊಸ ಅವತಾರದಲ್ಲಿ‌ ಡೈರೆಕ್ಟರ್ ಪ್ರೇಮ್:‌ ‘ಏಕ್‌ ಲವ್‌ ಯಾ’ ಟ್ರೈಲರ್‌ ಕ್ರೇಜ್..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News