ಭಾರತಕ್ಕೂ ಬಂತು ಬ್ಯೂಟಿ ಸರ್ವಿಂಗ್ ರೋಬೋಟ್ ! ಏನಿದರ ವಿಶೇಷ ಅಂತೀರಾ ?

ಈಗ ತಂತ್ರಜ್ಞಾನ ಎಲ್ಲಿಯವರೆಗೂ ಬಂದಿದೆ ಅಂದ್ರೆ ಇನ್ಮುಂದೆ ಅತಿಥಿಗಳಿಗೆ ಫುಡ್ ಸರ್ವ್ ಮಾಡಬೇಕೆಂದರೆ ಯಾರ ಅವಶ್ಯಕತೆಯೂ ಇಲ್ಲ, ಕೇವಲ ರೋಬೋಟ್ ವೊಂದಿದ್ದರೆ ಎಲ್ಲವನ್ನು ಕೂಡ ಮಾಡಬಹುದು ಎನ್ನುವುದು ಈಗ ನಿಜವಾಗುತ್ತಿದೆ.

Last Updated : Feb 9, 2019, 01:11 PM IST
ಭಾರತಕ್ಕೂ ಬಂತು ಬ್ಯೂಟಿ ಸರ್ವಿಂಗ್ ರೋಬೋಟ್ ! ಏನಿದರ ವಿಶೇಷ ಅಂತೀರಾ ?  title=
photo:ANI

ನವದೆಹಲಿ: ಈಗ ತಂತ್ರಜ್ಞಾನ ಎಲ್ಲಿಯವರೆಗೂ ಬಂದಿದೆ ಅಂದ್ರೆ ಇನ್ಮುಂದೆ ಅತಿಥಿಗಳಿಗೆ ಫುಡ್ ಸರ್ವ್ ಮಾಡಬೇಕೆಂದರೆ ಯಾರ ಅವಶ್ಯಕತೆಯೂ ಇಲ್ಲ, ಕೇವಲ ರೋಬೋಟ್ ವೊಂದಿದ್ದರೆ ಎಲ್ಲವನ್ನು ಕೂಡ ಮಾಡಬಹುದು ಎನ್ನುವುದು ಈಗ ನಿಜವಾಗುತ್ತಿದೆ.

ಹೌದು, ಈ ಹಿಂದೆ ಇದು ಸಾಧ್ಯವಿಲ್ಲ ಎನ್ನುವಂತಹ ಸಂಗತಿಗಳು ಈಗ ತಂತ್ರಜ್ಞಾನದ ಮೂಲಕ ಎಲ್ಲವನ್ನು ಸಾಧ್ಯವಾಗುವಂತೆ ಮಾಡುತ್ತಿದೆ.ಇದಕ್ಕೆ ಪೂರಕವೆನ್ನುವಂತೆ ರೋಬೋ ಕಿಚನ್ ಇದೆ ಮೊದಲ ಬಾರಿಗೆ ಹೈದರಾಬಾದ್ ರೆಸ್ಟೋರೆಂಟ್ ವೊಂದರಲ್ಲಿ  ಸರ್ವರ್ ಆಗಿ ಈ ರೋಬೋಟ್ ಗಳು ಕಾರ್ಯ ನಿರ್ವಹಿಸುತ್ತಿವೆ.

ಈಗ ರೋಬೋಟ್ ಗಳಿಗೆ ನೀಡಿರುವ ಹೆಸರೇನು ಗೊತ್ತೇ ಬ್ಯೂಟಿ ಸರ್ವಿಂಗ್ ರೋಬೋಟ್. ಈ ರೋಬೋಟ್ ಗೆ ಒಮ್ಮೆ ಸತತ ಮೂರು ಗಂಟೆಗಳ ಕಾಲ ಚಾರ್ಜಿಂಗ್ ಮಾಡಿದರೆ ಸಾಕು ದಿನವಿಡಿ ಬಳಸಬಹುದು ಎನ್ನಲಾಗಿದೆ.ರೋಬೋ ಕಿಚನ್ ರೆಸ್ಟೋರೆಂಟ್ ಮುಖ್ಯ ಪಾಲುದಾರರಾದ ಮಣಿಕಾಂತ್ ಹೇಳುವಂತೆ " ಗ್ರಾಹಕರಿಗೆ ಫುಡ್ ದರ ಪಟ್ಟಿಯನ್ನು ನೀಡಿದಾಗ ಆ ಮೆನು ನಿಂದ ಅವರು ಆರ್ಡರ್ ಮಾಡುತ್ತಾರೆ, ಆ ಆರ್ಡರ್ ಕಿಚನ್ ನ್ನು ತಲುಪುತ್ತದೆ. ಇದಾದ ನಂತರ ರೋಬೋಟ್ ಫುಡ್ ನ್ನು ಸರ್ವ ಮಾಡುತ್ತದೆ ಎಂದು ತಿಳಿಸಿದರು.

Trending News