Taj Mahal Plea: ಹೈಕೋರ್ಟ್‌ ಮೆಟ್ಟಿಲೇರಿದ ʼತಾಜ್‌ಮಹಲ್‌ ಇತಿಹಾಸʼ: ಏನಿದು ಪ್ರಕರಣ!

ಅರ್ಜಿದಾರರಾದ ಡಾ. ರಜನೀಶ್ ಸಿಂಗ್ ಅವರು ವಕೀಲ ರುದ್ರ ವಿಕ್ರಮ್ ಸಿಂಗ್ ಮೂಲಕ ಕಾನೂನಿನ ಪ್ರಕಾರ ಸಲ್ಲಿಸಿದ ಮನವಿಯಲ್ಲಿ, "ತಾಜ್ ಮಹಲ್ ತೇಜೋ ಮಹಾಲಯ ಎಂದು ಕರೆಯಲ್ಪಡುವ ಶಿವ ದೇವಾಲಯವಾಗಿದೆ. ಇಲ್ಲಿನ ನೈಜ ಇತಿಹಾಸ ತಿಳಿಯಲು ಸತ್ಯಶೋಧನಾ ಸಮಿತಿಯನ್ನು ರಚಿಸಬೇಕು" ಎಂದು ಮನವಿಯಲ್ಲಿ ಉಲ್ಲೇಖಿಸಿದ್ದರು.   

Written by - Bhavishya Shetty | Last Updated : May 15, 2022, 11:03 AM IST
  • ಹೈಕೋರ್ಟ್‌ ಮೆಟ್ಟಿಲೇರಿದ ತಾಜ್‌ಮಹಲ್‌ ವಿವಾದ
  • ತಾಜ್‌ನ ಇತಿಹಾಸ ಪರಿಶೀಲಿಸಲು ಸಮಿತಿ ರಚಿಸಿ ಎಂದು ಮನವಿ
  • ತಾಜ್ ಮಹಲ್‌ನಲ್ಲಿ ಹಿಂದೂ ದೇವರ ವಿಗ್ರಹವಿದೆ ಎನ್ನುತ್ತಿರುವ ಸಂಘಟನೆಗಳು
Taj Mahal Plea: ಹೈಕೋರ್ಟ್‌ ಮೆಟ್ಟಿಲೇರಿದ ʼತಾಜ್‌ಮಹಲ್‌ ಇತಿಹಾಸʼ: ಏನಿದು ಪ್ರಕರಣ!  title=
Taj Mahal

ತಾಜ್ ಮಹಲ್‌ನ ನಿಜವಾದ ಇತಿಹಾಸ ಪರಿಶೀಲಿಸಲು ಸತ್ಯಶೋಧನಾ ಸಮಿತಿಯನ್ನು ರಚಿಸುವಂತೆ ಕೋರಿ ಬಿಜೆಪಿ ನಾಯಕ ರಜನೀಶ್ ಸಿಂಗ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ಮೇ 12ರಂದು ವಜಾಗೊಳಿಸಿದೆ. ಸ್ಮಾರಕದ ಆವರಣದಲ್ಲಿ ಹಿಂದೂ ದೇವರಿಗೆ ಸಂಬಂಧಿಸಿ ಕೆಲ ವಿಗ್ರಹಗಳಿವೆ ಎಂಬ ಶಂಕೆ ಇದೆ. ಈ ಹಿನ್ನೆಲೆಯಲ್ಲಿ ತಾಜ್‌ಮಹಲ್‌ ಒಳಗಿರುವ ಸುಮಾರು 20ಕ್ಕೂ ಹೆಚ್ಚು ಸೀಲ್ ಮಾಡಿದ ಕೋಣೆಗಳನ್ನು ತೆರೆಯಲು ಅನುಮತಿ ನೀಡುವಂತೆ ಅರ್ಜಿ ಸಲ್ಲಿಸಿದ್ದರು. 

ಇದನ್ನು ಓದಿ: ಹಿಂದಿ ಭಾಷೆಯ ಪರವಾಗಿ ಬ್ಯಾಟ್ ಬೀಸಿದ ಶಿವಸೇನಾ..!

ಅರ್ಜಿದಾರರಾದ ಡಾ. ರಜನೀಶ್ ಸಿಂಗ್ ಅವರು ವಕೀಲ ರುದ್ರ ವಿಕ್ರಮ್ ಸಿಂಗ್ ಮೂಲಕ ಕಾನೂನಿನ ಪ್ರಕಾರ ಸಲ್ಲಿಸಿದ ಮನವಿಯಲ್ಲಿ, "ತಾಜ್ ಮಹಲ್ ತೇಜೋ ಮಹಾಲಯ ಎಂದು ಕರೆಯಲ್ಪಡುವ ಶಿವ ದೇವಾಲಯವಾಗಿದೆ. ಇಲ್ಲಿನ ನೈಜ ಇತಿಹಾಸ ತಿಳಿಯಲು ಸತ್ಯಶೋಧನಾ ಸಮಿತಿಯನ್ನು ರಚಿಸಬೇಕು" ಎಂದು ಮನವಿಯಲ್ಲಿ ಉಲ್ಲೇಖಿಸಿದ್ದರು. 

ಅರ್ಜಿಯಲ್ಲಿ ಇದ್ದದ್ದೇನು? 
“ಹಲವು ವರ್ಷಗಳಿಂದ ತಾಜ್ ಮಹಲ್‌ಗೆ ಸಂಬಂಧಿಸಿದ ವಿವಾದವು ನಡೆಯುತ್ತಿದೆ.  ಕೆಲವು ಹಿಂದೂ ಸಂಘಟನೆಗಳು, ಪ್ರಸಿದ್ಧ ಸಂತರು ಈ ಸ್ಮಾರಕವನ್ನು ಹಳೆಯ ಶಿವ ದೇವಾಲಯವೆಂದು ಹೇಳುತ್ತಿದ್ದಾರೆ. ಇದಕ್ಕೆ ಅನೇಕ ಇತಿಹಾಸಕಾರರು ಮತ್ತು ಪುರಾಣಗಳು ಸಾಕ್ಷಿಯನ್ನು ಒದಗಿಸುತ್ತದೆ. ಆದಾಗ್ಯೂ, ಅನೇಕ ಇತಿಹಾಸಕಾರರು ಇದನ್ನು ಮೊಘಲ್ ಚಕ್ರವರ್ತಿ ಷಹಜಹಾನ್ ನಿರ್ಮಿಸಿದ ತಾಜ್ ಮಹಲ್ ಎಂದು ಹೇಳುತ್ತಾರೆ. ತೇಜೋ ಮಹಾಲಯವು ಜ್ಯೋತಿರ್ಲಿಂಗದಲ್ಲಿ (ನಾಗನಾಥೇಶ್ವರ) ಒಂದಾಗಿ ಕಂಡುಬರುತ್ತದೆ ಎಂದು ಕೆಲವರು ನಂಬುತ್ತಾರೆ" ಎಂದು ಹೇಳಲಾಗಿದೆ. 

"ಎರಡು ಧರ್ಮಗಳ ನಡುವೆ ಘರ್ಷಣೆಗೆ ಕಾರಣವಾಗುವ ವಿವಾದಗಳನ್ನು ಕೊನೆಗೊಳಿಸುವುದು ನಮ್ಮ ಸಾಮೂಹಿಕ ಜವಾಬ್ದಾರಿ ಎಂದು ಹೇಳಲಾಗಿದೆ. ವಿಶ್ವ ಪ್ರಾಮುಖ್ಯತೆಯ ಸ್ಮಾರಕವನ್ನು ಐತಿಹಾಸಿಕ ವಂಚನೆಗೆ ಬಲಿಯಾಗಲು ಅನುವು ಮಾಡಿಕೊಡಬಾರದು. ತಾಜ್ ಮಹಲ್ ಅನ್ನು ತಪ್ಪಾಗಿ ಪ್ರೇಮ ಸಮಾಧಿ ಎಂದು ಗುರುತಿಸಿದ್ದರೆ ಅದನ್ನು ಭಾರತೀಯ ಸಂಪ್ರದಾಯ ಮತ್ತು ಪರಂಪರೆಯ ಉಲ್ಲಂಘನೆಯಾಗುತ್ತದೆ" ಎಂದು ಹೇಳಲಾಗಿದೆ. 

"ಸಮಾಧಿಯ ನಿರ್ಮಾಣವು ಪೂರ್ಣಗೊಳ್ಳಲು 22 ವರ್ಷಗಳನ್ನು ತೆಗೆದುಕೊಂಡಿದೆ ಎಂಬ ಅಂಶವು ವಾಸ್ತವವನ್ನು ಮೀರಿದೆ ಮತ್ತು ಸಂಪೂರ್ಣವಾಗಿ ಅಸಂಬದ್ಧವಾಗಿದೆ. ಕ್ರಿ.ಶ. 1212 ರಲ್ಲಿ ತೇಜೋ ಮಹಾಲಯವನ್ನು ರಾಜಾ ಪರಮರ್ದಿ ದೇವ್ ನಿರ್ಮಿಸಿದ್ದಾನೆ.  ಇದನ್ನು ಜೈಪುರದ ಹಿಂದಿನ ಆಡಳಿತಗಾರ ರಾಜ ಮಾನ್ ಸಿಂಗ್ ಅವರು ಆನುವಂಶಿಕವಾಗಿ ಪಡೆದಿದ್ದಾರೆ. ಅವರ ನಂತರ ಈ ಆಸ್ತಿಯನ್ನು ರಾಜಾ ಜೈ ಸಿಂಗ್ ನಿರ್ವಹಿಸುತ್ತಿದ್ದರು. ಆದರೆ ಅದನ್ನು ಷಹಜಹಾನ್ 1632 ರಲ್ಲಿ ಸ್ವಾಧೀನಪಡಿಸಿಕೊಂಡರು. ನಂತರ ಅದನ್ನು ಷಹಜಹಾನ್ ಅವರ ಪತ್ನಿಯ ಸ್ಮಾರಕವಾಗಿ ಪರಿವರ್ತಿಸಲಾಯಿತು" ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. 

ಇದನ್ನು ಓದಿ: Gyanvapi mosque :ಬಿಗಿ ಭದ್ರತೆಯೊಂದಿಗೆ ನಡೆದ ವಿವಾದಿತ ಜ್ಞಾನವಾಪಿ ಮಸೀದಿ ಸಮೀಕ್ಷೆ

22 ಕೊಠಡಿಗಳನ್ನು ತೆರೆಯಬೇಕು ಎನ್ನಲು ಕಾರಣವೇನು?: 
ಮಾಹಿತಿ ಹಕ್ಕು ಕಾಯ್ದೆಯ ಮೂಲಕ ಎಎಸ್‌ಐ, ಆಗ್ರಾದ ಪ್ರತಿಕ್ರಿಯೆಯ ಪ್ರಕಾರ, ತಾಜ್ ಮಹಲ್‌ನ 22 ಕೊಠಡಿಗಳನ್ನು ಭದ್ರತಾ ಕಾರಣಗಳಿಗಾಗಿ ಲಾಕ್ ಮಾಡಲಾಗಿದೆ. ಆದರೆ ತಾಜ್ ಮಹಲ್: ದಿ ಟ್ರೂ ಸ್ಟೋರಿಯ ಲೇಖಕರಾದ ಪಿ ಎನ್ ಓಕ್ ಅವರಂತಹ ಇತಿಹಾಸಕಾರರು ಈ ಕೊಠಡಿಗಳಲ್ಲಿ ಸ್ಮಾರಕದ ಮೇಲಿನ ಮತ್ತು ಕೆಳಗಿನ ಭಾಗಗಳಲ್ಲಿ ಶಿವ ದೇವಾಲಯವಿದೆ ಎಂದು ಹೇಳುತ್ತಾರೆ. ಓಕ್ ತನ್ನ ಪುಸ್ತಕದಲ್ಲಿ, ಈ ಸ್ಮಾರಕವನ್ನು ಕ್ರಿ.ಶ. 1155 ರಲ್ಲಿ ನಿರ್ಮಿಸಲಾಗಿದೆ ಎಂದು ಉಲ್ಲೇಖಿಸಿದ್ದಾನೆ. ತೇಜೋ ಮಹಾಲಯದ ಪ್ರತಿಪಾದನೆಯನ್ನು ಅವರು ಮುಂದುವರಿಸುತ್ತಾರೆ ಎಂದು ಅರ್ಜಿಯಲ್ಲಿ ನಮೂದಿಸಲಾಗಿದೆ 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News