ನವದೆಹಲಿ : ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ದಿನೇಶ್ ಮೊಂಗಿಯಾ (Dinesh Mongia), ಇಂದು ಭಾರತೀಯ ಜನತಾ ಪಕ್ಷಕ್ಕೆ (BJP) ಸೇರ್ಪಡೆಗೊಂಡಿದ್ದಾರೆ. ದಿನೇಶ್ ಮೊಂಗಿಯಾ ಕ್ರಿಕೆಟ್ ನಂತರ ರಾಜಕೀಯದ ಪಿಚ್‌ನಲ್ಲಿ ಬಿಜೆಪಿ ಪರ ಬ್ಯಾಟಿಂಗ್ ಮಾಡಲಿದ್ದಾರೆ.
2 ವರ್ಷಗಳ ಹಿಂದೆ ನಿವೃತ್ತರಾಗಿದ್ದ ದಿನೇಶ್ ಮೊಂಗಿಯಾ :
ದಿನೇಶ್ ಮೊಂಗಿಯಾ (Dinesh Mongia)17 ಸೆಪ್ಟೆಂಬರ್ 2019 ರಂದು ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತರಾದರು. ಟೀಂ ಇಂಡಿಯಾದಲ್ಲಿ (Team India) ಆಲ್ ರೌಂಡರ್ ಪಾತ್ರದಲ್ಲಿ ದಿನೇಶ್ ಮೊಂಗಿಯಾ ಮಿಂಚಿದ್ದಾರೆ. ದಿನೇಶ್ ಮೊಂಗಿಯಾ ಎಡಗೈ ಬ್ಯಾಟ್ಸ್‌ಮನ್ ಮತ್ತು ಸ್ಪಿನ್ ಬೌಲರ್ ಆಗಿದ್ದರು.
Former cricketer Dinesh Mongia joins Bharatiya Janata Party in Delhi. pic.twitter.com/ChOa6wrDEr
— ANI (@ANI) December 28, 2021
ಇದನ್ನೂ ಓದಿ : Weird News:ಮನುಷ್ಯನಂತೆ ಕಾಣುವ ಮರಿಗೆ ಜನ್ಮ ನೀಡಿದ ಮೇಕೆ.!
2003 ರಲ್ಲಿ ವಿಶ್ವಕಪ್ ತಂಡದ ಭಾಗವಾಗಿದ್ದ ದಿನೇಶ್ ಮೊಂಗಿಯಾ :
ದಿನೇಶ್ ಮೊಂಗಿಯಾ ಅವರು 2003 ರಲ್ಲಿ ಭಾರತ ಕ್ರಿಕೆಟ್ ತಂಡದ ವಿಶ್ವಕಪ್ (Cricket world cup) ತಂಡದ ಭಾಗವಾಗಿದ್ದರು. ದಿನೇಶ್ ಮೊಂಗಿಯಾ ಸುಮಾರು 5 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ್ದಾರೆ. ದಿನೇಶ್ ಮೊಂಗಿಯಾ ಆಸ್ಟ್ರೇಲಿಯಾ ವಿರುದ್ಧ ಚೊಚ್ಚಲ ಪಂದ್ಯವನ್ನಾಡಿದ್ದರು. 2001 ರಲ್ಲಿ ಮೊದಲ ಬಾರಿಗೆ ಅಂತರರಾಷ್ಟ್ರೀಯ ಪಂದ್ಯವನ್ನು ಆಡಿದರು. ತಮ್ಮ ವೃತ್ತಿಜೀವನದಲ್ಲಿ 57 ಏಕದಿನ ಪಂದ್ಯಗಳನ್ನು ಆಡಿರುವ ದಿನೇಶ್ ಮೊಂಗಿಯಾ, 1230 ರನ್ ಗಳಿಸಿದ್ದಾರೆ. ಇದಲ್ಲದೇ ದಿನೇಶ್ ಮೊಂಗಿಯಾ ಬೌಲಿಂಗ್ ನಲ್ಲಿ 14 ವಿಕೆಟ್ ಪಡೆದಿದ್ದಾರೆ.
ದಿನೇಶ್ ಮೊಂಗಿಯಾ ಸ್ಮರಣೀಯ ಇನ್ನಿಂಗ್ಸ್ :
ದಿನೇಶ್ ಮೊಂಗಿಯಾ ತಮ್ಮ ಅಂತರಾಷ್ಟ್ರೀಯ ವೃತ್ತಿ ಜೀವನದಲ್ಲಿ ಶತಕ ಬಾರಿಸಿದ್ದರು. ಅವರು ಗುವಾಹಟಿಯಲ್ಲಿ ಜಿಂಬಾಬ್ವೆ (Zimbabwe) ವಿರುದ್ಧ ಅಜೇಯ 159 ರನ್ ಬಾರಿಸಿದ್ದಾರೆ. ಈ ಇನ್ನಿಂಗ್ಸ್‌ನಲ್ಲಿ ದಿನೇಶ್ ಮೊಂಗಿಯಾ 17 ಬೌಂಡರಿ ಮತ್ತು 1 ಸಿಕ್ಸರ್ ಬಾರಿಸಿದ್ದಾರೆ. ದಿನೇಶ್ ಮೊಂಗಿಯಾ ತಮ್ಮ ವೃತ್ತಿಜೀವನದಲ್ಲಿ ಕೇವಲ ಒಂದು ಟಿ20 ಪಂದ್ಯವನ್ನು ಆಡಿದ್ದಾರೆ. ಆದರೆ, ದಿನೇಶ್ ಮೊಂಗಿಯಾ ಟೆಸ್ಟ್ ತಂಡದಲ್ಲಿ (Test cricket) ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ.
ಇದನ್ನೂ ಓದಿ : Congress foundation day: ಸೋನಿಯಾ ಗಾಂಧಿ ಧ್ವಜಾರೋಹಣ ಮಾಡುವ ವೇಳೆ ಕೆಳಗೆ ಬಿದ್ದ ಕಾಂಗ್ರೆಸ್ ಪಕ್ಷದ ಧ್ವಜ
ಒಂದು ಸಿನಿಮಾದಲ್ಲಿಯೂ ಕಾಣಿಸಿಕೊಂಡಿರುವ ದಿನೇಶ್ ಮೊಂಗಿಯಾ :
ದಿನೇಶ್ ಮೊಂಗಿಯಾ ಒಂದು ಚಿತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ. 2014 ರಲ್ಲಿ, ದಿನೇಶ್ ಮೊಂಗಿಯಾ 'ಕಬಾಬ್ ಮೇ ಹಡ್ಡಿ ' ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವು ಫ್ಲಾಪ್ ಆಗಿದ್ದು, ಅವರ ನಟನಾ ವೃತ್ತಿಜೀವನಕ್ಕೂ ಬ್ರೇಕ್ ಬಿತ್ತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.