ಕರ್ನಾಟಕ ಉಪ ಚುನಾವಣೆ : ಗ್ಯಾರಂಟಿ ಕೈ ಏಟಿಗೆ ಮುದುಡಿದ ತಾವರೆ, ದಳ ವಿದಳ

ಕರ್ನಾಟಕದಲ್ಲಿ ಮೂರು ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಸಾಧಿಸಿದ್ದು, ಬಿಜೆಪಿ ಹಾಗೂ ಜೆಡಿಎಸ್ ಸೋಲಿನ ಸುಳಿಯಲ್ಲಿ ಸಿಕ್ಕು ಮುಜುಗರ ಅನುಭವಿಸಿದೆ.

Written by - Prashobh Devanahalli | Edited by - Manjunath N | Last Updated : Nov 23, 2024, 02:05 PM IST
  • ವಕ್ಫ್, ವಾಲ್ಮೀಕಿ ಹಗರಣ, ಮುಡಾ ಹಗರಣ, ಗ್ಯಾರಂಟಿ ಸಮಸ್ಯೆಗಳು ಹಾಗೂ ಅಬಕಾರಿ ಹಗರಣ ಮತಗಳನ್ನ ಸೆಳೆಯಲು ವಿಫಲವಾಗಿದೆ.
  • ಹಾಗೂ ಕಾಂಗ್ರೆಸ್ ಉಪಚುನಾವಣೆಯಲ್ಲಿ ಗೆಲುವು ಪಕ್ಷದ ಹುಮ್ಮಸ್ಸು ಇಮ್ಮಡಿಗೊಳಿಸಿದೆ.
ಕರ್ನಾಟಕ ಉಪ ಚುನಾವಣೆ : ಗ್ಯಾರಂಟಿ ಕೈ ಏಟಿಗೆ ಮುದುಡಿದ ತಾವರೆ, ದಳ ವಿದಳ title=

ಬೆಂಗಳೂರು : ಕರ್ನಾಟಕದಲ್ಲಿ ಮೂರು ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಸಾಧಿಸಿದ್ದು, ಬಿಜೆಪಿ ಹಾಗೂ ಜೆಡಿಎಸ್ ಸೋಲಿನ ಸುಳಿಯಲ್ಲಿ ಸಿಕ್ಕು ಮುಜುಗರ ಅನುಭವಿಸಿದೆ.

ಮಾಜಿ ಸಿಎಂ ಪುತ್ರರನ್ನ ಒಪ್ಪದ ಮತದಾರ : ಕ್ಷೇತ್ರದ ಹಿಡಿತ ಕಳೆದುಕೊಂಡ ಹಿರಿಯ ನಾಯಕರು

ನಿಖಿಲ್ ಕುಮಾರಸ್ವಾಮಿಗೆ ಸಿಗದ ಚನ್ನಪಟ್ಟಣ : 

ಮಾಜಿ ಸಿಎಂ ಹಾಗೂ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಸೋಲನ್ನು ಅನುಭವಿಸಿದ್ದರಿಂದಾಗಿ ಈಗ ಉಪಚುನಾವಣೆಯಲ್ಲಿ ಜೆಡಿಎಸ್ಗೆ ಮುಖಭಂಗವಾಗಿದೆ.ಆ ಮೂಲಕ ಒಟ್ಟಾರೆಯಾಗಿ ಸತತ ಮೂರನೇ ಬಾರಿಗೆ ಸೋಲನ್ನು ಅನುಭವಿಸಿದ್ದಾರೆ. ಇನ್ನೊಂದೆಡೆಗೆ ಬಿಜೆಪಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಪಕ್ಷಾಂತರ ಮಾಡಿದ್ದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ 25 ಸಾವಿರಕ್ಕೂ ಹೆಚ್ಚು ಅಂತರದಿಂದ ಗೆಲುವು ಸಾಧಿಸಿದ್ದಾರೆ. 

ಇದನ್ನೂ ಓದಿ: ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತುಗೆ ಆಘಾತ !! ಸಂಡೂರಿನಲ್ಲಿ ಅನ್ನಪೂರ್ಣ ತುಕಾರಾಂ ಭರ್ಜರಿ ಗೆಲುವು..!

ಭರತ್ ಬೊಮ್ಮಾಯಿ ಸೋಲು : ಹಣದ ಬಲದ ಗೆಲುವು 

ಇನ್ನು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ್ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ಕೂಡ ಸೋಲಿನ ರುಚಿ ಅನುಭವಿಸಿದ್ದು, ಬಸವರಾಜ್ ಬೊಮ್ಮಾಯಿ ಶಾಸಕರಾಗಿ ಆಯ್ಕೆ ಆಗಿ ಬಿಜೆಪಿ ಭದ್ರಕೋಟೆ ಎಂದು ಕರೆಸಿಕೊಂಡಿದ್ದ ಶಿಗ್ಗಾವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಪಠಾಣ್ ಜಯ ಸಾಧಿಸಿದ್ದಾರೆ.ಈಗ ಮಾಜಿ ಮುಖ್ಯಮಂತ್ರಿ ಪ್ರತ್ರಿನಿಧಿಸುವ ಕ್ಷೇತ್ರವು ಕೈ ತಪ್ಪಿರುವುದು ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದೆ.

ಸಂಡೂರಿನಲ್ಲಿ ಮುಂದುವರೆದ ಕಾಂಗ್ರೆಸ್ ಸೌಂಡ್ :

ದೇಶದ ಮೊದಲ ಚುನಾವಣೆಯಿಂದಲೂ ಕಾಂಗ್ರೆಸ್ ಭದ್ರಕೋಟೆ ಆಗಿದ್ದ ಸಂಡೂರನ್ನು ಕೈ ವಶಪಡಿಸಿಕೊಂಡಿದೆ.ವಿಪಕ್ಷಗಳ ಅಸ್ತ್ರವಾಗಿದ್ದ ವಕ್ಫ್, ವಾಲ್ಮೀಕಿ ಹಗರಣ, ಮುಡಾ ಹಗರಣ, ಗ್ಯಾರಂಟಿ ಸಮಸ್ಯೆಗಳು ಹಾಗೂ ಅಬಕಾರಿ ಹಗರಣ ಮತಗಳನ್ನ ಸೆಳೆಯಲು ವಿಫಲವಾಗಿದೆ. ಹಾಗೂ ಕಾಂಗ್ರೆಸ್ ಉಪಚುನಾವಣೆಯಲ್ಲಿ ಗೆಲುವು ಪಕ್ಷದ ಹುಮ್ಮಸ್ಸು ಇಮ್ಮಡಿಗೊಳಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News