ಹೇಮಾ ಮಾಲಿನಿ ಅಭಿನಯದ ಈ ಚಿತ್ರವನ್ನು ವಾಜಪೇಯಿ 25 ಬಾರಿ ನೋಡಿದ್ದರಂತೆ!

ಡ್ರೀಮ್ ಗರ್ಲ್ ಹೇಮಾ ಮಾಲಿನಿ ಅಭಿಮಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ.

Last Updated : Aug 16, 2018, 01:23 PM IST
ಹೇಮಾ ಮಾಲಿನಿ ಅಭಿನಯದ ಈ ಚಿತ್ರವನ್ನು ವಾಜಪೇಯಿ 25 ಬಾರಿ ನೋಡಿದ್ದರಂತೆ! title=
Pic: Instagram

ನವದೆಹಲಿ: ಬಿಜೆಪಿಯ ಹಿರಿಯ ನಾಯಕ  ಹಾಗೂ ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಅರೋಗ್ಯ ಸ್ಥಿತಿ ಚಿಂತಾಜನಕವಾಗಿದೆ. ಅಟಲ್ ಜೀ ರಾಜಕಾರಣಿ ಮಾತ್ರವಲ್ಲ, ಅವರೊಬ್ಬ ಕವಿ, ಹೆಸರಾಂತ ಪತ್ರಕರ್ತ, ಶ್ರೇಷ್ಠ ವಾಗ್ಮಿ, ಚಿಂತಕ, ದಾರ್ಶನಿಕರೂ ಹೌದು. ಅವರು ಹಿಂದಿ ಭಾಷೆಯಲ್ಲಿ ಅನೇಕ ಕವಿತೆಗಳನ್ನು ರಚಿಸಿದ್ದಾರೆ. ವಾಜಪೇಯಿ ಅವರು ಓದುವುದು ಮತ್ತು ಬರೆಯುವುದರ ಜೊತೆಗೆ ಸಿನಿಮಾ ನೋಡುವುದನ್ನೂ ಬಹಳ ಇಷ್ಟಪಡುತ್ತಿದ್ದರಂತೆ. ಅದುವೇ ಹೇಮಾ ಮಾಲಿನಿ ಅವರ ಸಿನಿಮಾಗಳನ್ನು ಹೆಚ್ಚಾಗಿ ಇಷ್ಟಪಡುತ್ತಿದ್ದರಂತೆ. ಹೇಮಾ ಮಾಲಿನಿ ಅವರ ಸಂದರ್ಶನದಲ್ಲಿ, ವಾಜಪೇಯಿ ಅವರ ದೊಡ್ಡ ಅಭಿಮಾನಿ ಎಂಬುದನ್ನು ಬಹಿರಂಗ ಪಡಿಸಿದರು.

ಭಾರತೀಯ ಜನತಾ ಪಾರ್ಟಿ ಸಂಸದೆ ಹೇಮಾ ಮಾಲಿನಿ, ಕಳೆದ ವರ್ಷ ಮಥುರಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಬಗೆಗಿನ ಈ ರಹಸ್ಯವನ್ನು ಬಿಚ್ಚಿಟ್ಟರು. ಅಟಲ್ ಬಿಹಾರಿ ವಾಜಪೇಯಿ ಅವರು ತಮ್ಮ ಒಂದು ಚಿತ್ರವನ್ನು 25 ಬಾರಿ ವೀಕ್ಷಿಸಿದ್ದಾರೆ. ಅದು 1972ರಲ್ಲಿ ಬಂದ 'ಸೀತಾ ಮತ್ತು ಗೀತಾ' ಚಿತ್ರ ಎಂದು ಅವರು ತಿಳಿಸಿದರು.

ಈ ಸಮಯದಲ್ಲಿ ಹೇಮಾ ಮಾಲಿನಿ ಈ ಇಡೀ ಕಥೆಯನ್ನು ಉಲ್ಲೇಖಿಸುತ್ತಾ, ನನಗೆ ಈಗಲೂ ನೆನಪಿದೆ, ನಾನು ಭಾಷಣದಲ್ಲಿ ಅಟಲ್ ಬಿಹಾರಿ ವಾಜಪೇಯಿ ಬಗ್ಗೆ ಮಾತನಾಡುತ್ತೇನೆ ಎಂದು ಅಧಿಕಾರಿಗಳಿಗೆ ತಿಳಿಸಿದೆ. ಆದರೆ ಅವರನ್ನು ಭೇಟಿ ಮಾಡಿಯೇ ಇರಲಿಲ್ಲ. ಒಂದು ದಿನ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಭೇಟಿ ಮಾಡುವಂತಹ ಅವಕಾಶ ನನಗೆ ಸಿಕ್ಕಿತು. ಆದರೆ ಅಟಲ್ ಬಿಹಾರಿ ವಾಜಪೇಯಿ ಅವರು ಮಾತನಾಡಲು ಸ್ವಲ್ಪ ಹಿಂಜರಿಯುತ್ತಿದ್ದರು ಎಂದು ನಾನು ಭಾವಿಸಿದೆ. ಆಗ ಏನು ವಿಷಯ, ಅಟಲ್ ಜೀ, ಏಕೆ ಸರಿಯಾಗಿ ಮಾತನಾಡುತ್ತಿಲ್ಲ? ಎಂದು ನಾನು ಒಬ್ಬ ಮಹಿಳೆಯನ್ನು ಕೇಳಿದೆ. ಆಗ ಅಟಲ್ ಜೀ ನಿಮ್ಮ ದೊಡ್ಡ ಅಭಿಮಾನಿ ಎಂದು ಅವರು ಹೇಳಿದರು. 1972ರಲ್ಲಿ ತೆರೆಕಂಡ ನಿಮ್ಮ 'ಸೀತಾ ಮತ್ತು ಗೀತಾ' ಸಿನಿಮಾವನ್ನು ಅವರು 25 ಬಾರಿ ನೋಡಿದ್ದಾರೆ. ಹಾಗಾಗಿ ಆಕಸ್ಮಿಕವಾಗಿ ನಿಮ್ಮನ್ನು ಭೇಟಿ ಮಾಡುತ್ತಿರುವುದರಿಂದ ಅವರು ನಿಮ್ಮೊಂದಿಗೆ ಮಾತನಾಡಲು ಹಿಂಜರಿಯುತ್ತಿದ್ದಾರೆ ಎಂದು ಆ ಮಹಿಳೆ ತಿಳಿಸಿದರು ಎಂದು ಹೇಮಾ ಇಡೀ ಅಟಲ್ ಜೀ ಅವರೊಂದಿಗಿನ ತಮ್ಮ ಭೇಟಿಯ ಬಗ್ಗೆ ವಿವರಿಸಿದರು.

 1972 ರಲ್ಲಿ ತೆರೆಕಂಡ 'ಸೀತಾ ಮತ್ತು ಗೀತಾ' ಚಿತ್ರದಲ್ಲಿ ಹೇಮಾ ಮಾಲಿನಿ ದ್ವಿಪಾತ್ರದಲ್ಲಿ ನಟಿಸಿದ್ದರು. ಹೇಮಾ ಮಾಲಿನಿ ಈ ಚಿತ್ರಕ್ಕಾಗಿ ಅತ್ಯುತ್ತಮ ನಟಿ ಫಿಲ್ಮ್ಫೇರ್ ಪ್ರಶಸ್ತಿಯನ್ನು ಪಡೆದರು. ಈ ಚಲನಚಿತ್ರವನ್ನು ರಮೇಶ್ ಸಿಪ್ಪಿ ನಿರ್ದೇಶಿಸಿದ್ದರು.

Trending News