Gemini Shankaran Passes Away: 'ಜೇಮಿನಿ ಸರ್ಕಸ್' ಸಂಸ್ಥಾಪಕ ಜೇಮಿನಿ ಶಂಕರನ್ ಇನ್ನಿಲ್ಲ

Gemini Circus Founder Passes Away: ಶಂಕರನ್ ಅವರು 1924 ರಲ್ಲಿ ಜನಿಸಿದ್ದರು. ಪ್ರಸಿದ್ಧ ಸರ್ಕಸ್ ಕಲಾವಿದ ಕೀಲೇರಿ ಕುಂಞಿಕಣ್ಣನ್ ಅವರಿಂದ ಮೂರು ವರ್ಷಗಳ ಕಾಲ ಅವರು ಸರ್ಕಸ್ ತರಬೇತಿ ಪಡೆದುಕೊಂಡಿದ್ದರು. ಜೀವನೋಪಾಯಕ್ಕಾಗಿ ಅವರು ತಮ್ಮ ಪ್ರದೇಶದಲ್ಲಿ ದಿನಸಿ ಅಂಗಡಿಯನ್ನು ಸಹ ತೆರೆದಿದ್ದರು, ಆದರೆ ಅಪಾರ ನಷ್ಟವನ್ನು ಎದುರಿಸಿದ ನಂತರ ಅವರು ಅಂಗಡಿಯನ್ನು ಮುಚ್ಚಬೇಕಾಯಿತು.  

Written by - Nitin Tabib | Last Updated : Apr 24, 2023, 06:07 PM IST
  • ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶಂಕರನ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ,
  • ಭಾರತೀಯ ಸರ್ಕಸ್ ಅನ್ನು ಆಧುನೀಕರಿಸುವಲ್ಲಿ ಶಂಕರನ್ ದೊಡ್ಡ ಪಾತ್ರವನ್ನು ವಹಿಸಿದ್ದಾರೆ
  • ಮತ್ತು ವಿದೇಶಿ ಕಲಾವಿದರು ಮತ್ತು ಅವರ ಸಾಹಸಗಳು ಅವರ ಸರ್ಕಸ್ ಭಾಗವಾಗಿದ್ದವು.
Gemini Shankaran Passes Away: 'ಜೇಮಿನಿ ಸರ್ಕಸ್' ಸಂಸ್ಥಾಪಕ ಜೇಮಿನಿ ಶಂಕರನ್ ಇನ್ನಿಲ್ಲ title=

Gemini Shankaran Demise: ಸಿಂಹಗಳು, ಆನೆಗಳು, ಕೋಡಂಗಿಗಳು, ಕಲಾವಿದರು ಗಾಳಿಯಲ್ಲಿ ಅದ್ಭುತ ಸಾಹಸಗಳನ್ನು ಪ್ರದರ್ಶಿಸುತ್ತಾರೆ ಮತ್ತು ಅಪಾಯಕಾರಿ ಸಾಹಸಗಳನ್ನು ಸುಲಭವಾಗಿ ಮಾಡುತ್ತಾರೆ. ಆ ಜಾಗ ಯಾವುದು ನಿಮಗೆ ಗೊತ್ತಾ? ಯಸ್.. ನಾವು ಬಾಲಿವುಡ್ ಚಿತ್ರದ ಬಗ್ಗೆ ಮಾತನಾಡುತ್ತಿಲ್ಲ, ನಾವು ಸರ್ಕಸ್ ಬಗ್ಗೆ ಮಾತನಾಡುತ್ತಿದ್ದೇವೆ. ನಗರಗಳ ಗೋಡೆಗಳ ಮೇಲೆ ಅಂಟಿಸಿದ ಸರ್ಕಸ್‌ನ ಪೋಸ್ಟರ್‌ಗಳು ಮತ್ತು ಪ್ರತಿದಿನ ಮೂರ್ನಾಲ್ಕು ಪ್ರದರ್ಶನಗಳು ಪ್ರೇಕ್ಷಕರನ್ನು ಒಂದು ಕಾಲದಲ್ಲಿ ಭಾರಿ ಆಕರ್ಷಿಸುತ್ತಿದ್ದವು. 80-90ರ ದಶಕದಲ್ಲಿ ಹುಟ್ಟಿದವರಿಗೆ ಸರ್ಕಸ್ ಒಂದು ದೊಡ್ಡ ಮನರಂಜನೆಯಾಗಿತ್ತು.

ನಾವು ಸರ್ಕಸ್ ಕುರಿತು ಮಾತನಾಡುತ್ತಿದ್ದು ಮತ್ತು ಜೇಮಿನಿ ಸರ್ಕಸ್ ಹೆಸರೇ ಬರುವುದಿಲ್ಲ ಎಂಬುದು ಆಗಲು ಸಾಧ್ಯವೇ ಇಲ್ಲ.  ಹೌದು ಈ ಸರ್ಕಸ್ಸಿನ ಜೊತೆಗೆ ಎಷ್ಟು ಜನರ ಅದೆಷ್ಟೋ ಬಾಲ್ಯದ ನೆನಪುಗಳು ಅಂಟಿಕೊಂಡಿವೆಯೋ ಗೊತ್ತಿಲ್ಲ. ಆದರೆ ಜನರಿಗೆ ಫುಲ್ ಮನರಂಜನೆ ನೀಡಿದ ಆ ಜೆಮಿನಿ ಸರ್ಕಸ್ ಸಂಸ್ಥಾಪಕ ಜೆಮಿನಿ ಶಂಕರನ್ ಭಾನುವಾರ ರಾತ್ರಿ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 99 ವರ್ಷ ವಯಸ್ಸಾಗಿತ್ತು. ಅವರಿಗೆ ವೃದ್ಧಾಪ್ಯಕ್ಕೆ ಸಂಬಂಧಿಸಿದ ಅನೇಕ ಕಾಯಿಲೆಗಳು ಇದ್ದವು. ಹೀಗಾಗಿ ಅವರನ್ನು  ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಕೊನೆಯುಸಿರೆಳೆದಿದ್ದಾರೆ.

ಸೈನ್ಯದಿಂದ ನಿವೃತ್ತಿ ನಂತರ ಸರ್ಕಸ್ ಕಂಪನಿ ತೆರೆದಿದ್ದರು
ಶಂಕರನ್ ಅವರು 1924 ರಲ್ಲಿ ಜನಿಸಿದ್ದರು. ಪ್ರಸಿದ್ಧ ಸರ್ಕಸ್ ಕಲಾವಿದ ಕೀಲೇರಿ ಕುಂಞಿಕಣ್ಣನ್ ಅವರಿಂದ ಮೂರು ವರ್ಷಗಳ ತರಬೇತಿ ಪಡೆದಿದ್ದರು. ಜೀವನೋಪಾಯಕ್ಕಾಗಿ ಅವರು ತಮ್ಮ ಪ್ರದೇಶದಲ್ಲಿ ದಿನಸಿ ಅಂಗಡಿಯನ್ನು ಸಹ ತೆರೆದಿದ್ದರು, ಆದರೆ ಅಪಾರ ನಷ್ಟವನ್ನು ಎದುರಿಸಿದ ನಂತರ ಅವರು ಅಂಗಡಿಯನ್ನು ಮುಚ್ಚಬೇಕಾಯಿತು. ನಂತರ ಅವರು ಸೈನ್ಯಕ್ಕೆ ಸೇರಿದರು. ಎರಡನೆಯ ಮಹಾಯುದ್ಧದ ನಂತರ ಅವರು ನಿವೃತ್ತರಾದರು.

ಇದನ್ನೂ ಓದಿ-Harassment: ಲೈಂಗಿಕ ಶೋಷಣೆಗೆ ಗುರಿಯಾದ ಮತ್ತೊರ್ವ ನಟಿ, ವೈಯಕ್ತಿಕ ಮೊಬೈಲ್ ಸಂಖ್ಯೆಗೆ ಖಾಸಗಿ ಅಂಗಗಳ ಫೋಟೋ ಕಳುಹಿಸುತ್ತಿರುವ ಜನ!

ದೇಶದ ವಿವಿಧ ಸರ್ಕಸ್ ಗುಂಪುಗಳೊಂದಿಗೆ ಕೆಲಸ ಮಾಡಿದ ನಂತರ, ಅವರು 1951 ರಲ್ಲಿ ವಿಜಯಾ ಸರ್ಕಸ್ ಕಂಪನಿಯನ್ನು ಖರೀದಿಸಿದರು ಮತ್ತು ಅದನ್ನು ಜೆಮಿನಿ ಸರ್ಕಸ್ ಎಂದು ಮರುನಾಮಕರಣ ಮಾಡಿದರು. ನಂತರ ಅವರು ತಮ್ಮ ಎರಡನೇ ಕಂಪನಿ ಜಂಬೋ ಸರ್ಕಸ್ ಅನ್ನು ಪ್ರಾರಂಭಿಸಿದರು. ಶಂಕರನ್ ಅವರು  ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ದೇಶದ ಸರ್ಕಸ್ ಕ್ಷೇತ್ರದಲ್ಲಿ ಶಂಕರನ್ ಅವರ ಕೊಡುಗೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಇದನ್ನೂ ಓದಿ-Harassment: ಲೈಂಗಿಕ ಶೋಷಣೆಗೆ ಗುರಿಯಾದ ಮತ್ತೊರ್ವ ನಟಿ, ವೈಯಕ್ತಿಕ ಮೊಬೈಲ್ ಸಂಖ್ಯೆಗೆ ಖಾಸಗಿ ಅಂಗಗಳ ಫೋಟೋ ಕಳುಹಿಸುತ್ತಿರುವ ಜನ!

ಸಿಎಂ ವಿಜಯನ್ ಹೇಳಿದ್ದೇನು?
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶಂಕರನ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ, ಭಾರತೀಯ ಸರ್ಕಸ್ ಅನ್ನು ಆಧುನೀಕರಿಸುವಲ್ಲಿ ಶಂಕರನ್ ದೊಡ್ಡ ಪಾತ್ರವನ್ನು ವಹಿಸಿದ್ದಾರೆ ಮತ್ತು ವಿದೇಶಿ ಕಲಾವಿದರು ಮತ್ತು ಅವರ ಸಾಹಸಗಳು ಅವರ ಸರ್ಕಸ್ ಭಾಗವಾಗಿದ್ದವು. ಪ್ರಗತಿಪರ ದೃಷ್ಟಿಕೋನ ಹೊಂದಿದ್ದ ಶಂಕರನ್ ಅವರೊಂದಿಗೆ ತಾವು ನಿಕಟ ಸಂಬಂಧ ಹೊಂದಿರುವುದಾಗಿ ಸಿಎಂ ಹೇಳಿದ್ದಾರೆ. ಶಂಕರನ್ ಅವರು ಅನೇಕ ಪ್ರಧಾನಿಗಳು, ರಾಷ್ಟ್ರಪತಿಗಳು ಮತ್ತು ಇತರ ಪ್ರಸಿದ್ಧ ವ್ಯಕ್ತಿಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದರು. ಶಂಕರನ್ ಅವರ ನಿಧನವು ದೇಶದ ಸರ್ಕಸ್ ಕಲೆಗೆ ದೊಡ್ಡ ನಷ್ಟವಾಗಿದೆ ಎಂದು ವಿಜಯನ್ ಹೇಳಿದ್ದಾರೆ. ಅವರ ಪಾರ್ಥಿವ ಶರೀರವನ್ನು ಅವರ ನಿವಾಸದಲ್ಲಿ ಇರಿಸಲಾಗುವುದು ಇದರಿಂದ ಜನರು ಅವರಿಗೆ ಗೌರವ ಸಲ್ಲಿಸಬಹುದು. ಮಂಗಳವಾರ ಪಯ್ಯಂಬಲಂ ಕಡಲತೀರದಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News