ಹಾಡುಹಗಲೇ ದೆಹಲಿ ಪೋಲಿಸರಿಂದ 4 ಕ್ರಿಮಿನಲ್ ಗಳನ್ನು ಎನ್ಕೌಂಟರ್ ಗೈದು ಹತ್ಯೆ

    

Last Updated : Jun 9, 2018, 08:01 PM IST
ಹಾಡುಹಗಲೇ ದೆಹಲಿ ಪೋಲಿಸರಿಂದ 4 ಕ್ರಿಮಿನಲ್ ಗಳನ್ನು ಎನ್ಕೌಂಟರ್ ಗೈದು ಹತ್ಯೆ title=
Photo courtesy: ANI

ನವದೆಹಲಿ: ಶನಿವಾರದಂದು ದೆಹಲಿ ಪೊಲೀಸರು ಎನ್ಕೌಂಟರ್ ಮೂಲಕ ರಾಜೇಶ್ ಭಾರತಿ ಗ್ಯಾಂಗ್  ನಾಲ್ಕು ಕ್ರಿಮಿನಲ್ ಗಳನ್ನು ಹತ್ಯೆಗೈದಿದ್ದಾರೆ.ಇದೇ ವೇಳೆ ಈ ಎನ್ಕೌಂಟರ್ನಲ್ಲಿ ಆರು ಪೊಲೀಸ್ ಸಿಬ್ಬಂದಿ ಸಹ  ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಮಾಧ್ಯಮಗಳ ವರದಿಗಳ ಪ್ರಕಾರ, ದಕ್ಷಿಣ ದೆಹಲಿಯ ಚತಾರ್ಪುರ್ ಪ್ರದೇಶದಲ್ಲಿ ಈ ಎನ್ಕೌಂಟರ್ ಸಂಭವಿಸಿದ್ದು  ಎಂದು ಹೇಳಲಾಗಿದೆ. ಪೊಲೀಸರು ಕ್ರಿಮಿನಲ್ ಗಳನ್ನು ಬಂಧಿಸುವ ಸಲುವಾಗಿ ಆಗಮಿಸಿದಾಗ ತಕ್ಷಣ ಕ್ರಿಮಿನಲ್ ಗಳು ಸಹ ಮರು ಗುಂಡು ಹಾರಿಸಿದ್ದಾರೆ ಎಂದು ತಿಳಿದುಬಂದಿದೆ.

ರಾಜೇಶ್ ಭಾರ್ತಿ ಎನ್ನುವವನ ಗ್ಯಾಂಗ್ ಪೋಲೀಸರ ಕೆಂಗಣ್ಣಿಗೆ ಗುರಿಯಾಗಿದೆ ಅಲ್ಲದೆ ಪೋಲಿಸರು ಅವರನ್ನು ಪೊಲೀಸರು ಪ್ರತಿದಿನದ ಕ್ರಿಮಿನಲ್ ಎಂದು ಕರೆದಿದ್ದಾರೆ.ಏನ್ ಕೌಂಟರ್ ನಡೆದಿರುವ ಈ ಪ್ರದೇಶ ಈಗ ಪೋಲೀಸರ ವಶದಲ್ಲಿದೆ ಎಂದು ತಿಳಿದು ಬಂದಿದೆ.

Trending News