Schools Reopens In UP: ಜುಲೈ ಒಂದರಿಂದ ಶಾಲೆಗಳು ಪುನರಾರಂಭ..!

Schools Reopens In UP : ಉತ್ತರಪ್ರದೇಶದಲ್ಲಿ ಕರೋನಾ ಸೋಂಕಿನ  ಪ್ರಕರಣಗಳು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ, ಯೋಗಿ ಸರ್ಕಾರವು ಜುಲೈ 1 ರಿಂದ 1-8 ನೇ ತರಗತಿಯ ಎಲ್ಲಾ ಶಾಲೆಗಳನ್ನು ತೆರೆಯಲು ಅನುಮತಿ ನೀಡಿದೆ.

Written by - Ranjitha R K | Last Updated : Jun 16, 2021, 10:43 AM IST
  • ಜುಲೈ ಒಂದರಿಂದ ಶಾಲೆಗಳು ಓಪನ್
  • ವಿದ್ಯಾರ್ಥಿಗಳಿಗೆ ಶಾಲೆಗೆ ಬರಲು ಅನುಮತಿ ಇಲ್ಲ
  • ನೈಟ್ ಕರ್ಫ್ಯೂ ಸಮಯದಲ್ಲೂ ಬದಲಾವಣೆ
Schools Reopens In UP: ಜುಲೈ ಒಂದರಿಂದ ಶಾಲೆಗಳು ಪುನರಾರಂಭ..! title=
ಜುಲೈ ಒಂದರಿಂದ ಶಾಲೆಗಳು ಓಪನ್ (photo india.com)

Schools Reopens In UP : ಉತ್ತರಪ್ರದೇಶದಲ್ಲಿ ಕರೋನಾ ಸೋಂಕಿನ (Coronavirus) ಪ್ರಕರಣಗಳು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ, ಯೋಗಿ ಸರ್ಕಾರವು ಜುಲೈ 1 ರಿಂದ 1-8 ನೇ ತರಗತಿಯ ಎಲ್ಲಾ ಶಾಲೆಗಳನ್ನು ತೆರೆಯಲು ಅನುಮತಿ (School reopens in UP) ನೀಡಿದೆ. ಆದರೆ ಪ್ರಸ್ತುತ, ಮಕ್ಕಳನ್ನು ಶಾಲೆಗೆ ಕರೆಯುವಂತಿಲ್ಲ.  ಶಾಲಾ ಆಡಳಿತ ಮಂಡಳಿ, ತಮ್ಮ ಶಿಕ್ಷಕರು ,ಸಿಬ್ಬಂದಿಯನ್ನು ಶೈಕ್ಷಣಿಕ ಮತ್ತು ಶೈಕ್ಷಣಿಕೇತರ ಕೆಲಸಗಳಿಗೆ ಅಗತ್ಯಕ್ಕೆ ಅನುಗುಣವಾಗಿ ಕರೆಯಲು ಅನುಮತಿ ನೀಡಿದೆ.  

ಶಾಲೆಗಳಲ್ಲಿ ಕರೋನಾ ನಿಯಮಗಳನ್ನು (Corona guidelines) ಕಟ್ಟುನಿಟ್ಟಾಗಿ ಪಾಲಿಸುವಂತೆ ಆದೇಶ ನೀಡಲಾಗಿದ್ದರೂ, ಉತ್ತರ ಪ್ರದೇಶ ಸರ್ಕಾರ ಶಾಲೆಗಳನ್ನು ತೆರೆಯಲು ಅನುಮತಿ ನೀಡಿದೆ. ಇದಕ್ಕೂ ಮೊದಲು ಯುಪಿಯ ಎಲ್ಲಾ ಶಾಲೆಗಳನ್ನು ಜೂನ್ 30 ರವರೆಗೆ ಮುಚ್ಚುವಂತೆ ಆದೇಶಿಸಲಾಗಿತ್ತು. 

ಇದನ್ನೂ ಓದಿ : 7th Pay Commission : ಸರ್ಕಾರಿ ನೌಕರರ ಮೆಡಿಕಲ್ ಕ್ಲೈಂ ರಿಎಂಬೆಸ್ ಮೆಂಟ್ ಮಿತಿ ಹೆಚ್ಚಳ

ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿ : 
ಯುಪಿ ಯ ಎಲ್ಲಾ ಸರ್ಕಾರಿ, ಸರ್ಕಾರೇತರ ಶಾಲೆಗಳಲ್ಲಿ, ಕರೋನಾ ಅವಧಿಯ ಆರಂಭದಿಂದಲೂ ಎಲ್ಲಾ ಶೈಕ್ಷಣಿಕ ಚಟುವಟಿಕೆಗಳನ್ನು ಆನ್‌ಲೈನ್‌ನಲ್ಲಿ (Online class) ನಡೆಸಲಾಗುತ್ತಿದೆ. 9 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಪೋಷಕರ ಒಪ್ಪಿಗೆಯೊಂದಿಗೆ ಕೆಲವು ದಿನಗಳವರೆಗೆ ಶಾಲೆಗಳಿಗೆ ಬರಲು ಅವಕಾಶ ನೀಡಲಾಗಿತ್ತು. ಆದರೆ ಕರೋನಾ (COVID-19) ಪ್ರಕಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಈ ಆದೇಶವನ್ನು ರದ್ದುಪಡಿಸಲಾಯಿತು. 

ಯೋಗಿ ಆದಿತ್ಯನಾಥ್ (Yogi Adityanath) ಸರ್ಕಾರವು ರಾಜ್ಯದಲ್ಲಿ ಜಾರಿಗೆ ತಂದಿರುವ ಕರೋನಾ ಕರ್ಫ್ಯೂ ಅನ್ನು ಮತ್ತಷ್ಟು ಸಡಿಲಗೊಳಿಸಲು ನಿರ್ಧರಿಸಿದೆ. ಮಂಗಳವಾರ ಯುಪಿಯಲ್ಲಿ ನಡೆದ ಸಭೆಯಲ್ಲಿ , ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜ್ಯದಲ್ಲಿ ಜಾರಿಯಲ್ಲಿರುವ ರಾತ್ರಿ ಕರ್ಫ್ಯೂ (Night Curfew) ಸಮಯವನ್ನು ಬದಲಾಯಿಸಿದ್ದಾರೆ. ಜೂನ್ 21 ರಿಂದ ಅಂದರೆ ಸೋಮವಾರದಿಂದ ರಾತ್ರಿ ಕರ್ಫ್ಯೂ ರಾತ್ರಿ 9 ಗಂಟೆಯಿಂದ ಮರುದಿನ ಬೆಳಿಗ್ಗೆ 07 ರವರೆಗೆ ಜಾರಿಯಲ್ಲಿರುತ್ತದೆ.

ಇದನ್ನೂ ಓದಿ : Ration Card: ಈ ರಾಜ್ಯದಲ್ಲಿ ಪಡಿತರ ಚೀಟಿ ಇಲ್ಲದಿದ್ದರೂ ರೇಷನ್ ನೀಡುತ್ತಿದೆ ಸರ್ಕಾರ

ಮುಂದಿನ ವಾರದಿಂದ ರಾಜ್ಯದಲ್ಲಿ ರಾತ್ರಿ ಕರ್ಫ್ಯೂ ಸಡಿಲಿಸುವುದರ ಜೊತೆಗೆ ನಿಗದಿತ ಸಾಮರ್ಥ್ಯದೊಂದಿಗೆ ಮಾಲ್‌ಗಳು (Mall) ಮತ್ತು ರೆಸ್ಟೋರೆಂಟ್‌ಗಳನ್ನು ತೆರೆಯುವ ಬಗ್ಗೆ ಯೂ ಸಿಎಂ ಯೋಗಿ ಆದಿತ್ಯನಾಥ್ ಮಾತನಾಡಿದ್ದಾರೆ. ಕಳೆದ ಹಲವಾರು ದಿನಗಳಿಂದ ಮುಚ್ಚಲ್ಪಟ್ಟ ಮಾಲ್‌ಗಳು ಮತ್ತು ರೆಸ್ಟೋರೆಂಟ್‌ಗಳನ್ನು ಕೋವಿಡ್ ಪ್ರೋಟೋಕಾಲ್ ಅಡಿಯಲ್ಲಿ 50 ಪ್ರತಿಶತ ಸಾಮರ್ಥ್ಯದೊಂದಿಗೆ ತೆರೆಯಲು ಅನುಮತಿಸಲಾಗಿದೆ.

ಇದಲ್ಲದೆ, ಮುಂದಿನ ವಾರದಿಂದ ಪಾರ್ಕ್ ಗಳನ್ನು ತೆರೆಯಲು ಕೂಡಾ ಅನುಮತಿ ನೀಡಲಾಗಿದೆ. ಜೂನ್ 21ರಿಂದ ಸ್ಟ್ರೀಟ್ ಫುಡ್ ಗಳ (Street food)ಮಾರಾಟಕ್ಕು ಅವಕಾಶ ಕಲ್ಪಿಸಲಾಗಿದೆ. ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ, ಎಲ್ಲಾ ಸ್ಥಳಗಳಲ್ಲಿ ಕೋವಿಡ್ ಸಹಾಯ ಕೇಂದ್ರಗಳನ್ನು ಸ್ಥಾಪಿಸುವುದು ಕಡ್ಡಾಯವಾಗಿರುತ್ತದೆ.

ಇದನ್ನೂ ಓದಿ : ಜೂನ್ 30 ವರೆಗೆ ಬೇಸಿಗೆ ರಜೆ ವಿಸ್ತರಿಸಿದ ಈ ರಾಜ್ಯ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News