Funny Video: ತಡೆಯಲಾಗದ ತುರಿಕೆ… ಬೇಸತ್ತ ಈ ಕರಡಿ ಮಾಡಿದ್ದು ಇಂಥಾ ಪ್ಲ್ಯಾನ್! ನೋಡಿದ್ರೆ ಶಾಕ್ ಆಗೋದು ಗ್ಯಾರಂಟಿ

Today Funny Viral Video: ಕರಡಿಯ ಪೋಲ್ ಡ್ಯಾನ್ಸ್ ಟ್ವಿಟ್ಟರ್ ಬಳಕೆದಾರರನ್ನು ರಂಜಿಸಿದ್ದು, ದಿ ಜಂಗಲ್ ಬುಕ್‌’ನ ಬಾಲೂಗೆ ಹೋಲಿಸಿದ್ದಾರೆ.ವೀಡಿಯೊದಲ್ಲಿ, ಗ್ರಿಜ್ಲಿ ಕರಡಿ ತನ್ನ ಬೆನ್ನನ್ನು ಟೆಲಿಫೋನ್ ಕಂಬಕ್ಕೆ ಒರೆಸಿಕೊಳ್ಳುವುದನ್ನು ಕಾಣಬಹುದು. ಇದು ತಮಾಷೆಯ ರೀತಿಯಲ್ಲಿ ಕಾಣುತ್ತಿದೆ

Written by - Bhavishya Shetty | Last Updated : Apr 1, 2023, 06:03 PM IST
    • ಇದು ತುರಿಕೆ ತಡೆಯಲಾರದೆ ಕರಡಿ ಮಾಡಿರುವ ಪ್ಲಾನ್.
    • ಈ ಕರಡಿ ಬೆನ್ನು ಕೆರೆದುಕೊಳ್ಳುತ್ತಿರುವ ವಿಡಿಯೋವೊಂದು ಇಂಟರ್ನೆಟ್’ನಲ್ಲಿ ಭಾರೀ ವೈರಲ್ ಆಗುತ್ತಿದೆ
    • ಈ ಕರಡಿ ಬೆನ್ನು ಕೆರೆದುಕೊಳ್ಳುತ್ತಿರುವ ವಿಡಿಯೋವೊಂದು ಇಂಟರ್ನೆಟ್’ನಲ್ಲಿ ಭಾರೀ ವೈರಲ್ ಆಗುತ್ತಿದೆ
Funny Video: ತಡೆಯಲಾಗದ ತುರಿಕೆ… ಬೇಸತ್ತ ಈ ಕರಡಿ ಮಾಡಿದ್ದು ಇಂಥಾ ಪ್ಲ್ಯಾನ್! ನೋಡಿದ್ರೆ ಶಾಕ್ ಆಗೋದು ಗ್ಯಾರಂಟಿ title=
bear itch viral video

Today Funny Viral Video: ತಕ್ಷಣವೇ ಈ ವಿಡಿಯೋವನ್ನು ನೋಡಿದರೆ ನಿಮಗೆ ನಗು ಬರೋದು ಖಂಡಿತ. ಇದೇನು ಈ ಪ್ರಾಣಿ ಪೋಲ್ ಡ್ಯಾನ್ಸ್ ಮಾಡುತ್ತಿದೆಯೇ? ಎಂದು ಅನಿಸಬಹುದು. ಆದರೆ ಇದು ತುರಿಕೆ ತಡೆಯಲಾರದೆ ಕರಡಿ ಮಾಡಿರುವ ಪ್ಲಾನ್. ಈ ಕರಡಿ ಬೆನ್ನು ಕೆರೆದುಕೊಳ್ಳುತ್ತಿರುವ ವಿಡಿಯೋವೊಂದು ಇಂಟರ್ನೆಟ್’ನಲ್ಲಿ ಭಾರೀ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಇಲ್ಲಿ ಮಗನ ಬದಲು ಮಗಳಿಗೆ ಆಸ್ತಿ, ಎಲ್ಲರಿಗೂ ಆಹಾರ ಉಚಿತ! ಈ ದೇಶಕ್ಕೆ ಕೊನೆಯದಾಗಿ ಟಿವಿ ಬಂದಿದ್ದು!

ಕ್ಲಿಪ್ ಅನ್ನು 2021 ರಲ್ಲಿ ಪೋಸ್ಟ್ ಮಾಡಲಾಗಿದೆ. ಆದರೆ ಅದು ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಮತ್ತೆ ಟ್ರೆಂಡಿಂಗ್’ಗೆ ಬಂದಿದೆ. ಜೊತೆಗೆ ಈಗ ಕ್ರೇಜಿ ವೈರಲ್ ಆಗುತ್ತಿದೆ. ಇದನ್ನು ಕೆಲವು ದಿನಗಳ ಹಿಂದೆ ಟ್ವಿಟರ್‌’ನಲ್ಲಿ 'buitengebieden' ಪೇಜ್ ಹಂಚಿಕೊಂಡಿದೆ. ಇದು ಸಾಮಾನ್ಯವಾಗಿ ತಮಾಷೆಯ ಪ್ರಾಣಿಗಳ ವೀಡಿಯೊಗಳನ್ನು ಹಂಚಿಕೊಳ್ಳುತ್ತದೆ. ಸದ್ಯ ಈ ವಿಡಿಯೋವನ್ನು ಡಿಲೀಟ್ ಮಾಡಲಾಗಿದೆ.

ಇದಕ್ಕೆ "ಗುಡ್ ಸ್ಕ್ರಾಚ್" ಎಂದು ಕ್ಯಾಪ್ಶನ್ ನೀಡಿದೆ. ಈ ಕ್ಲಿಪ್ ಈಗಾಗಲೇ 3.6 ಮಿಲಿಯನ್ ಜನ ವೀಕ್ಷಿಸಿದ್ದು, ಈಗಾಗಲೇ 151k ಲೈಕ್ಸ್ ಬಂದಿವೆ. ವೀಡಿಯೊದಲ್ಲಿ, ಗ್ರಿಜ್ಲಿ ಕರಡಿ ತನ್ನ ಬೆನ್ನನ್ನು ಟೆಲಿಫೋನ್ ಕಂಬಕ್ಕೆ ಒರೆಸಿಕೊಳ್ಳುವುದನ್ನು ಕಾಣಬಹುದು. ಇದು ತಮಾಷೆಯ ರೀತಿಯಲ್ಲಿ ಕಾಣುತ್ತಿದೆ.

ಇದನ್ನೂ ಓದಿ: ಸ್ಟಂಟ್ ಮಾಡಲು ಹೋದ ವಧುವಿನ ಮುಖಕ್ಕೆ ಹಿಡದ ಬೆಂಕಿ! ಮುಂದೆ... ಈ ವಿಡಿಯೋ ನೋಡಿ

ಕರಡಿಯ ಪೋಲ್ ಡ್ಯಾನ್ಸ್ ಟ್ವಿಟ್ಟರ್ ಬಳಕೆದಾರರನ್ನು ರಂಜಿಸಿದ್ದು, ದಿ ಜಂಗಲ್ ಬುಕ್‌’ನ ಬಾಲೂಗೆ ಹೋಲಿಸಿದ್ದಾರೆ. “ಇದು ನಾನು ನೋಡಿದ ಅತ್ಯುತ್ತಮ ಪೋಲ್ ಡ್ಯಾನ್ಸ್‌. ಮುದ್ದಾಗಿದೆ” ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. "ಬಹುಶಃ ಇದು ಟ್ವಿಟರ್’ನಲ್ಲಿ ನೋಡುವ ಅತ್ಯುತ್ತಮ ವಿಷಯ" ಎಂದು ಮತ್ತೊಬ್ಬರು ಹೇಳಿದ್ದಾರೆ. "ನನಗೆ ನಗು ನಿಲ್ಲಿಸಲು ಸಹ ಆಗುತ್ತಿಲ್ಲ ಎಂದು " ಎಂದು ಮೂರನೇ ಬಳಕೆದಾರರು ಬರೆದಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News