"ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಬುದ್ಧಿವಂತಿಕೆಯಿಂದ ಬಳಸಿ"

“ಭಾರತದ ಜನರು ಪರದೆಯ ಮೇಲೆ ಸರಾಸರಿ ಆರು ಗಂಟೆಗಳ ಕಾಲ ಕಳೆಯುತ್ತಾರೆ. ಇದು ಕಳವಳಕಾರಿ ವಿಷಯ ಎಂದು  ದೆಹಲಿಯಲ್ಲಿ ನಡೆದ 'ಪರೀಕ್ಷಾ ಪೇ ಚರ್ಚಾ' ಕಾರ್ಯಕ್ರಮದ ಆರನೇ ಆವೃತ್ತಿಯಲ್ಲಿ ಪ್ರಧಾನಿ ಮೋದಿ ಹೇಳಿದರು. ನಮ್ಮ ದೇಶದಲ್ಲಿ ಗ್ಯಾಜೆಟ್ ಬಳಕೆದಾರರಿಗೆ ಸರಾಸರಿ ಆರು ಗಂಟೆಗಳ ಸ್ಕ್ರೀನ್ ಸಮಯವು ಅರ್ಥಹೀನವಾಗಿದೆ ಅದು ತಯಾರಕರಿಗೆ ಮಾತ್ರ ಪ್ರಯೋಜನಕಾರಿಯಾಗಿದೆ ಎಂದು ಅವರು ಹೇಳಿದರು.

Written by - Zee Kannada News Desk | Last Updated : Jan 27, 2023, 05:08 PM IST
  • “ಭಾರತದ ಜನರು ಪರದೆಯ ಮೇಲೆ ಸರಾಸರಿ ಆರು ಗಂಟೆಗಳ ಕಾಲ ಕಳೆಯುತ್ತಾರೆ.
  • ಇದು ಕಳವಳಕಾರಿ ವಿಷಯ ಎಂದು ದೆಹಲಿಯಲ್ಲಿ ನಡೆದ 'ಪರೀಕ್ಷಾ ಪೇ ಚರ್ಚಾ' ಕಾರ್ಯಕ್ರಮದ ಆರನೇ ಆವೃತ್ತಿಯಲ್ಲಿ ಪ್ರಧಾನಿ ಮೋದಿ ಹೇಳಿದರು.
  • ನಮ್ಮ ದೇಶದಲ್ಲಿ ಗ್ಯಾಜೆಟ್ ಬಳಕೆದಾರರಿಗೆ ಸರಾಸರಿ ಆರು ಗಂಟೆಗಳ ಸ್ಕ್ರೀನ್ ಸಮಯವು ಅರ್ಥಹೀನವಾಗಿದೆ.
"ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಬುದ್ಧಿವಂತಿಕೆಯಿಂದ ಬಳಸಿ" title=
Photo Courtsey: Twitter

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಡುವಂತೆ ಮತ್ತು ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಬುದ್ಧಿವಂತಿಕೆಯಿಂದ ಬಳಸುವಂತೆ ಸಲಹೆ ನೀಡಿದ್ದಾರೆ.

“ಭಾರತದ ಜನರು ಪರದೆಯ ಮೇಲೆ ಸರಾಸರಿ ಆರು ಗಂಟೆಗಳ ಕಾಲ ಕಳೆಯುತ್ತಾರೆ. ಇದು ಕಳವಳಕಾರಿ ವಿಷಯ ಎಂದು  ದೆಹಲಿಯಲ್ಲಿ ನಡೆದ 'ಪರೀಕ್ಷಾ ಪೇ ಚರ್ಚಾ' ಕಾರ್ಯಕ್ರಮದ ಆರನೇ ಆವೃತ್ತಿಯಲ್ಲಿ ಪ್ರಧಾನಿ ಮೋದಿ ಹೇಳಿದರು. ನಮ್ಮ ದೇಶದಲ್ಲಿ ಗ್ಯಾಜೆಟ್ ಬಳಕೆದಾರರಿಗೆ ಸರಾಸರಿ ಆರು ಗಂಟೆಗಳ ಸ್ಕ್ರೀನ್ ಸಮಯವು ಅರ್ಥಹೀನವಾಗಿದೆ ಅದು ತಯಾರಕರಿಗೆ ಮಾತ್ರ ಪ್ರಯೋಜನಕಾರಿಯಾಗಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ-ಹಳೆ ಪೆನ್ಷನ್ ಯೋಜನೆಯ ಕುರಿತು ಇಲ್ಲಿದೆ ಒಂದು ಅಪ್ಡೇಟ್! ಈ ಸರ್ಕಾರಿ ನೌಕರರಿಗೆ ಸಿಗಲಿದೆ ಓಪಿಎಸ್ ಲಾಭ

“ನಮ್ಮ ದೇಶದಲ್ಲಿ ಈಗ ಗ್ಯಾಜೆಟ್ ಬಳಕೆದಾರರಿಗೆ ಸರಾಸರಿ ಆರು ಗಂಟೆಗಳ ಪರದೆಯ ಸಮಯವಿದೆ. ಇದು ಖಂಡಿತವಾಗಿಯೂ ಯಾವುದೇ ವ್ಯಕ್ತಿಯು ಅರ್ಥಹೀನವಾಗಿ ಮತ್ತು ಉತ್ಪಾದಕತೆ ಇಲ್ಲದೆ ಖಾಲಿಯಾಗುವ ಸಮಯ ಮತ್ತು ಶಕ್ತಿಯನ್ನು ಪ್ರತಿಬಿಂಬಿಸುತ್ತದೆ. ಇದು ನಿಜಕ್ಕೂ ಕಾಳಜಿಯ ವಿಷಯ ಮತ್ತು ಸೃಜನಶೀಲತೆಗೆ ಬೆದರಿಕೆಯಾಗಿದೆ. ತಂತ್ರಜ್ಞಾನದ ದುರುಪಯೋಗದ ಹಿಡಿತದಿಂದ ತನ್ನನ್ನು ತಾನು ಮುಕ್ತಗೊಳಿಸಿದ ನಂತರ ಯಾವುದೇ ವ್ಯಕ್ತಿ ಆನಂದ ಅನುಭವಿಸುತ್ತಾನೆ ಎಂದು ಪ್ರಧಾನಿ ಮೋದಿ ಹೇಳಿದರು.ನೀವು ಆನಂದವನ್ನು ಅನುಭವಿಸುವ ಕ್ಷಣದಲ್ಲಿ ನೀವು ನಿಜವಾದ ಸ್ವಾತಂತ್ರ್ಯವನ್ನು ಪಡೆಯುತ್ತೀರಿ ಎಂದು ಅವರು ಹೇಳಿದರು.ವಿದ್ಯಾರ್ಥಿಗಳು ತಮ್ಮಲ್ಲಿ ಮತ್ತು ಅವರ ಬುದ್ಧಿವಂತಿಕೆಯಲ್ಲಿ ನಂಬಿಕೆ ಇಡುವಂತೆ ಪ್ರೇರೇಪಿಸುತ್ತಾ, ಗ್ಯಾಜೆಟ್‌ಗಳನ್ನು ಬುದ್ಧಿವಂತಿಕೆಯಿಂದ ಬಳಸುವಂತೆ ಪ್ರಧಾನಿ ಸಲಹೆ ನೀಡಿದರು.

ಇದನ್ನೂ ಓದಿ-ಮಾರುಕಟ್ಟೆಯ ಭಾರಿ ಕುಸಿತಕ್ಕೆ ಕಾರಣವಾದ ಅಡಾನಿ ಗ್ರೂಪ್, ಒಂದೇ ದಿನದಲ್ಲಿ ಹೂಡಿಕೆದಾರರ 8 ಲಕ್ಷ ಕೋಟಿ ರೂ. ಗುಳುಂ

ವಿದ್ಯಾರ್ಥಿಗಳು ಗ್ಯಾಜೆಟ್‌ಗಳಿಂದ ವಿಚಲಿತರಾಗದೆ ತಮ್ಮ ಕುಟುಂಬದೊಂದಿಗೆ ಸಾಕಷ್ಟು ಸಮಯವನ್ನು ಕಳೆಯಲು ತಂತ್ರಜ್ನಾನ ರಹಿತ  ವಲಯವನ್ನು ರಚಿಸಲು ಸಲಹೆ ನೀಡಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News