EVM ಸ್ಪರ್ಶಿಸದೆಯೇ ವೋಟಿಂಗ್-ಸಿರಿಂಜ್ ಮೂಲಕ ಶಾಹಿ ಗುರುತು, ವಿಶೇಷವಾಗಿರಲಿದೆಯೇ ಈ ಬಾರಿಯ Bihar Election!

ಕೊರೊನಾ ಕಾಲದಲ್ಲಿ ದೇಶದಲ್ಲಿ ಮೊದಲ ಬಾರಿಗೆ ಚುನಾವಣೆ ನಡೆಯಲಿದೆ. ಕೋಟ್ಯಂತರ ಮತದಾರರನ್ನು ಹೊಂದಿರುವ ಬಿಹಾರ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ವಿಶೇಷ ಸಿದ್ಧತೆ ನಡೆಸಲಾಗುತ್ತಿದೆ.

Last Updated : Jun 30, 2020, 10:16 PM IST
EVM ಸ್ಪರ್ಶಿಸದೆಯೇ ವೋಟಿಂಗ್-ಸಿರಿಂಜ್ ಮೂಲಕ ಶಾಹಿ ಗುರುತು, ವಿಶೇಷವಾಗಿರಲಿದೆಯೇ ಈ ಬಾರಿಯ Bihar Election! title=

ನವದೆಹಲಿ: ಕೊರೊನಾ ಕಾಲದಲ್ಲಿ ದೇಶದಲ್ಲಿ ಮೊದಲ ಬಾರಿಗೆ ಚುನಾವಣೆ ನಡೆಯಲಿದೆ. ಕೋಟ್ಯಂತರ ಮತದಾರರನ್ನು ಹೊಂದಿರುವ ಬಿಹಾರ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ವಿಶೇಷ ಸಿದ್ಧತೆ ನಡೆಸಲಾಗುತ್ತಿದೆ. EVMಗಳನ್ನು ಸ್ಪರ್ಶಿಸದೆಯೇ ಬಿದಿರಿನ ಕಡ್ಡಿಯ ಮೂಲಕ ಮತದಾನ, ಪೋಲಿಂಗ್ ಆಫಿಸರ್ ಟೇಬಲ್ ಬಳಿ ಗಾಜಿನ ಪರದೆ, ದಿಸ್ಪೋಸೆಬಲ್ ಸಿರಿಂಜ್ ಮೂಲಕ ಬೆರಳಿನ ಮೇಲೆ ಶಾಹಿ ಗುರುತುಗಳಂತಹ ಉಪಾಯಗಳ ಮೂಲಕ ಚುನಾವಣಾ ನಡೆಸಲು ಚುನಾವಣಾ ಆಯೋಗ ಚಿಂತನೆ ನಡೆಸುತ್ತಿದೆ. ಕೊರೊನಾ ಮಹಾಮಾರಿಯ ನಡುವೆ ಬಿಹಾರದಂತಹ ದೊಡ್ಡ ರಾಜ್ಯದಲ್ಲಿ ಚುನಾವಣೆ ನಡೆಸುವುದು ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ.

ಕೊರೊನಾ ವೈರಸ್ ಮಹಾಮಾರಿ ದೇಶಾದ್ಯಂತ ಹರಡಿದ ನಂತರದ ಕಾಲದಲ್ಲಿ ದೇಶದಲ್ಲಿ ನಡೆಯುತ್ತಿರುವ ಮೊದಲ ಚುನಾವಣಾ ಇದಾಗಿದೆ. ಅಕ್ಟೋಬರ್-ನವೆಂಬರ್ ನಲ್ಲಿ ಚುನಾವಣೆ ನಡೆಯುವ ನಿರೀಕ್ಷೆ ಇದೆ. ಕೊರೊನಾ ಮಹಾಮಾರಿಯ ಈ ಕಾಲದಲ್ಲಿ ಮೊದಲಿಗಿಂತಲೂ ಚುನಾವಣೆ ಭಿನ್ನವಾಗಿರಲಿವೆ.

ಈ ಕುರಿತಾದ ಪ್ರಸ್ತಾವನೆಗಳ ಮೇಲೆ ಇದೀಗ ಚುನಾವಣಾ ಆಯೋಗದ ಅಧಿಕಾರಿಗಳೂ ಕೂಡ ಮಂಥನದಲ್ಲಿ ತೊಡಗಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಅಧಿಕಾರಿಗಳು ಡಿಸ್ಪೋಸೆಬಲ್ ಸಿರಿಂಜ್ ಮೂಲಕ ಬೆರಳಿನ ಮೇಲೆ ಶಾಹಿ ಗುರುತು ಹಾಕುವುದು ಒಂದು ಸುರಕ್ಷಿತ ವಿಕಲ್ಪವಾಗಿದೆ ಎನ್ನುತ್ತಾರೆ. ಪ್ರತಿಯೊಂದು ಬಳಕೆಯ ಬಳಿಕ ಇದನ್ನು ಡಿಸ್ಪೋಸ್ ಮಾಡಬಹುದು. ಪೋಲಿಂಗ್ ಅಧಿಕಾರಿಯನ್ನು ಗಾಜಿನ ಪರದೆಯ ಹಿಂದೆ ಕೂರಿಸುವ ಆವಶ್ಯಕತೆ ಇದೆ. ಇದರಿಂದ ಅಧಿಕಾರಿಯೇ ಆಗಲಿ ಅಥವಾ ಮತದಾರರಿಗೆಯೇ ಆಗಲಿ ಸೋಂಕು ತಗಲುವ ಸಾಧ್ಯತೆ ಕಡಿಮೆ ಇರುತ್ತದೆ. ಬಿದಿರಿನ ಕಡ್ಡಿಗಳು ಇಕೋ ಫ್ರೆಂಡ್ಲಿ ಆಗಿವೆ ಹಾಗೂ ಇವುಗಳನ್ನು ನಷ್ಟಗೊಳಿಸುವುದು ಕೂಡ ಸುಲಭವಾಗಿದೆ.

ತನ್ನ ಹೆಸರನ್ನು ಉಲ್ಲೇಖಿಸದೆ ಇರುವ ಷರತ್ತಿನ ಮೇರೆಗೆ ಈ ಕುರಿತು ಮಾಹಿತಿ ನೀಡಿರುವ ಚುನಾವಣಾ ಆಯೋಗದ ಹಿರಿಯ ಅಧಿಕಾರಿಯೊಬ್ಬರು, " EVM ಬಟನ್ ಕ್ಲಿಕ್ಕಿಸಲು ಹಾಗೂ ವೋಟರ್ ರಜಿಸ್ಟರ್ ನಲ್ಲಿ ಹಸ್ತಾಕ್ಷರ ನಮೂದಿಸಲು ಗ್ಲೋಸ್ ಗಳ ಬಳಕೆ ಹಾಗೂ ಬಿದಿರಿನ ಕಡ್ಡಿಗಳ ಬಳಕೆಯ ಕುರಿತು ಚಿಂತನೆ ನಡೆಯುತ್ತಿದೆ. ಏಕೆಂದರೆ ಪ್ರತಿಯೊಂದು ವೋಟ್ ಬಳಿಕ EVM ಸ್ಯಾನಿಟೈಸ್ ಮಾಡುವುದು ಸಂಭನೀಯತೆ ಕಡಿಮೆಯಾಗಿದೆ ಹಾಗೂ ನಾವು ಪ್ಲಾಸ್ಟಿಕ್ ನ ಯಾವುದೇ ಪರಿಕರಗಳನ್ನು ಬಳಸುತ್ತಿಲ್ಲ. ಏಕೆಂದರೆ ಇದರಿಂದ ಸೋಂಕಿನ ಸಾಧ್ಯತೆ ಹೆಚ್ಚಾಗಿದೆ. ಬಿದಿರಿನ ಕಡ್ಡಿ ಪರಿಸರಕ್ಕೆ ಹಿತಕರವಾಗಿದ್ದು, ಇವುಗಳನ್ನು ನಷ್ಟಗೊಳಿಸುವುದು ಕೂಡ ಸುಲಭವಾಗಿದೆ" ಎಂದಿದ್ದಾರೆ.

ಮೂಲಗಳ ಪ್ರಕಾರ ಈ ಎಲ್ಲ ಪ್ರಸ್ತಾವನೆಗಳನ್ನು ಮುಖ್ಯ ಚುನಾವಣಾ ಆಯುಕ್ತರ ಅನುಮೋದನೆಗಾಗಿ ಬಿಹಾರ ಚುನಾವಣಾ ಆಯುಕ್ತರು ಕಳುಹಿಸಿಕೊಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಬಿಹಾರ್ CEO ಹೆಚ್. ಆರ್. ಶ್ರೀನಿವಾಸ್, "ಎಲ್ಲಾ ಬೂಟ್ ಗಳಲ್ಲಿ ಮತದಾರರ ಸುರಕ್ಷತೆಗಾಗಿ ನಾವು ಕೆಲ ಪ್ರಸ್ತಾವನೆಗಳನ್ನು ಕಳುಹಿಸಿದ್ದು, ಈ ನಿಟ್ಟಿನಲ್ಲಿ ನಾವು ಕೆಲಸ ಕೂಡ ಆರಂಭಿಸಿದ್ದೇವೆ. ಮತದಾರರು ಯಾವುದೇ ವಸ್ತುಗಳ ಸಂಪರ್ಕಕ್ಕೆ ಬರಬಾರದು ಎಂಬುದೇ ನಮ್ಮ ಮುಖ್ಯ ಗುರಿಯಾಗಿದ್ದು, ಸ್ಪರ್ಶರಹಿತ ಮತದಾನ ನಡೆಸಬೇಕು ಎಂಬುದಾಗಿದೆ" ಎಂದಿದ್ದಾರೆ.

ಆದರೆ ಇದನ್ನು ಅನುಷ್ಠಾನಗೊಳಿಸುವುದು ಕೂಡ ಒಂದು ಲಾಜಿಸ್ಟಿಕ್ ಚಾಲೆಂಜ್ ಆಗಿದೆ. ರಾಜ್ಯದಲ್ಲಿ ಒಟ್ಟು 7.18 ಕೋಟಿ ಮತದಾರರಿದ್ದು, 1.06 ಲಕ್ಷ ಬೂತ್ ಗಳಿವೆ. ಇದಲ್ಲದೆ ಪ್ರತಿಯೊಂದು ಬೂತ್ ಗಳಲ್ಲಿ ಸಾಮಾಜಿಕ ಅಂತರ ಸುನಿಶ್ಚಿತಗೊಳಿಸುವುದು ಕೂಡ ಒಂದು ಸವಾಲಿನ ಪ್ರಶ್ನೆಯಾಗಿದೆ. ಈ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಹೇಳಿದ್ದಾರೆ. ಬಿಹಾರ ರಾಜ್ಯ ಖಾದಿ ಬೋರ್ಡ್ ನಿಂದ ಗ್ಲೋಸ್ ಗಳನ್ನು ಖರೀದಿಸಲಾಗುವುದು ಮತ್ತು ಇದರಿಂದ ಗ್ರಾಮೀಣ ಮಟ್ಟದಲ್ಲಿ ಉದ್ಯೋಗದ ಅವಕಾಶಗಳೂ ಕೂಡ ಹೆಚ್ಚಾಗಲಿವೆ.

ಈ ಕುರಿತು ಮಾಹಿತಿ ನೀಡಿರುವ ಮತ್ತೋರ್ವ ಅಧಿಕಾರಿ, "ರಾಜ್ಯ ಖಾದಿ ಬೋರ್ಡ್ ಗೆ ಖಾದಿ ಗ್ಲೌಸ್ ಗಳ ಮೇಲೆ ಕೆಲಸ ಮಾಡಲು ಸೂಚಿಸಲಾಗಿದೆ. ಇತರೆ ವಸ್ತುಗಳ ಖರೀದಿ ಕೂಡ ಸ್ಥಳೀಯ ಮಟ್ಟದಲ್ಲಿ ನಡೆಯಲಿದೆ. ಇದಕ್ಕಾಗಿ DM ಹಾಗೂ ಜಿಲ್ಲೆಯ ಚುನಾವಣಾ ಅಧಿಕಾರಿಗಳಿಗೆ ಅಧಿಕಾರ ನೀಡಲಾಗುವುದು" ಎಂದಿದ್ದಾರೆ.

Trending News