ಹೈದರಾಬಾದ್ನಲ್ಲಿ ಗ್ಲೋಬಲ್ ಎಂಟರ್ಪ್ರೆನರ್ಶಿಪ್ ಶೃಂಗಸಭೆ- ಪ್ರಧಾನಿ ಮೋದಿ, ಇವಾಂಕ ಟ್ರಂಪ್ ಭಾಗಿ

ಶೃಂಗಸಭೆಯ ಉದ್ಘಾಟನಾ ಅಧಿವೇಶನವನ್ನು ಉದ್ದೇಶಿಸಿ ಪ್ರಧಾನಿ ಮೋದಿ, ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಮತ್ತು ಇವಾಂಕ ಟ್ರಂಪ್ ಅವರು ಮಾತನಾಡಲಿದ್ದಾರೆ.

Last Updated : Nov 28, 2017, 10:56 AM IST
  • * ಹೈದರಾಬಾದ್ನಲ್ಲಿ ಗ್ಲೋಬಲ್ ಎಂಟರ್ಪ್ರೆನರ್ಶಿಪ್ ಶೃಂಗಸಭೆ-2017 ಅನ್ನು ಮೋದಿ ಉದ್ಘಾಟಿಸಲಿದ್ದಾರೆ.
  • * ಯು.ಎಸ್. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರಿ ಇವಾಂಕ ಸಹ ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
  • * GES ಶೃಂಗಸಭೆಯು ಭಾರತ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಸರ್ಕಾರಗಳಿಂದ ಮೊದಲ ಬಾರಿಗೆ ಆಗ್ನೇಯ ಏಷ್ಯಾದಲ್ಲಿ ಆಯೋಜಿಸಲ್ಪಟ್ಟಿದೆ.
ಹೈದರಾಬಾದ್ನಲ್ಲಿ ಗ್ಲೋಬಲ್ ಎಂಟರ್ಪ್ರೆನರ್ಶಿಪ್ ಶೃಂಗಸಭೆ- ಪ್ರಧಾನಿ ಮೋದಿ, ಇವಾಂಕ ಟ್ರಂಪ್ ಭಾಗಿ title=
Pic: Twitter

ಹೈದರಾಬಾದ್: ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಗ್ಲೋಬಲ್ ಎಂಟರ್ಪ್ರೆನರ್ಶಿಪ್ ಶೃಂಗಸಭೆಯನ್ನು ಉದ್ಘಾಟಿಸಲಿದ್ದಾರೆ. ಸಭೆಯಲ್ಲಿ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರಿ ಹಾಗೂ ಸಲಹೆಗಾರರಾದ ಇವಾಂಕ ಟ್ರಂಪ್ ಸಹ ಭಾಗಿಯಾಗಲಿದ್ದಾರೆ.

ಭಾರತ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನಗಳು ಆಗ್ನೇಯ ಏಷ್ಯಾದಲ್ಲಿ ಇದೇ ಮೊದಲ ಬಾರಿಗೆ ಈ  ಶೃಂಗಸಭೆಯನ್ನು ಆಯೋಜಿಸಿದೆ. ಪ್ರಧಾನಿ ಮೋದಿ, ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಮತ್ತು ಇವಾಂಕಾ ಟ್ರಂಪ್ ಅವರು ಉದ್ಘಾಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಪ್ರಧಾನಿ ಮೋದಿ ಮತ್ತು ಯು.ಎಸ್. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಗಳು ಇವಾಂಕ ಟ್ರಂಪ್ ಅವರು ಹೈದರಾಬಾದ್ಗೆ ಭೇಟಿ ನೀಡಲಿರುವುದರಿಂದ ನಗರದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. "ಸುಮಾರು 2,500 ಭದ್ರತಾ ಸಿಬ್ಬಂದಿಗಳನ್ನು ಮೂರು ಕಾರ್ಡನ್ಗಳಲ್ಲಿ ನಿಯೋಜಿಸಲಾಗಿದೆ, ಎಲ್ಲಾ ಸ್ಥಳಗಳಲ್ಲೂ ಸೂಕ್ತ ಭದ್ರತೆ ಏರ್ಪಡಿಸಲಾಗಿದೆ," ಎಂದು ಪೊಲೀಸ್ ಆಯುಕ್ತ ಸಂದೀಪ್ ಸ್ಯಾಂಡಿಲ್ಯ ತಿಳಿಸಿದ್ದಾರೆ.

ಇವಾಂಕ ಟ್ರಂಪ್ ಹೈದರಾಬಾದ್ನಲ್ಲಿ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮುಂಜಾನೆ ಆಗಮಿಸಿದರು. ಇಂದು ಉದ್ಘಾಟನಾ ಸಭೆಯನ್ನು ಉದ್ದೇಶಿಸಿ ಮಾತನಾಡುವ ಇವಾಂಕ, ಎರಡನೇ ದಿನದ ಸಭೆಯಲ್ಲಿ ಶಿಕ್ಷಣ ಮತ್ತು ಮಾರ್ಗದರ್ಶನದ ಮೂಲಕ ಮಹಿಳೆಯರಿಗೆ ಉದ್ಯೋಗದಲ್ಲಿ ಕೌಶಲ್ಯ ತರಬೇತಿಯ ಬಗ್ಗೆ ಎರಡನೇ ದಿನದಂದು ಚರ್ಚೆ ನಡೆಸಲಿದ್ದಾರೆ. ಇದಲ್ಲದೆ ಉದ್ಯೋಗಿಗಳ ಅಭಿವೃದ್ಧಿ ಮತ್ತು ತರಬೇತಿಯಲ್ಲಿನ ಹೊಸತನಗಾರರು ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಅವಕಾಶ ಕಲ್ಪಿಸಲು ಏನು ಮಾಡುತ್ತಾರೆ ಮತ್ತು ಹೆಚ್ಚು ಏನು ಮಾಡಬಹುದು ಎಂಬುದನ್ನು ಚರ್ಚಿಸುತ್ತಾರೆ.

Trending News