ನವದೆಹಲಿ: ಪ್ರಸಕ್ತ ಜಾಗತಿಕ ವಾಣಿಜ್ಯ ಯುದ್ಧವು ಆರಂಭಿಕ ಅಸ್ಥಿರತೆಯನ್ನು ಸೃಷ್ಟಿಸಬಹುದು ಆದರೆ ಮುಂಬರುವ ದಿನಗಳಲ್ಲಿ ಭಾರತಕ್ಕೆ ಉತ್ಪಾದನಾ ವಿಭಾಗದಲ್ಲಿ ಉತ್ತಮ ಅವಕಾಶ ದೊರೆಯಲಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಶುಕ್ರವಾರ ಹೇಳಿದ್ದಾರೆ.ಬಿಸಿನೆಸ್ ನಲ್ಲಿ ನೈತಿಕ ಮಾರ್ಗಗಳನ್ನು ತೆರಿಗೆ ನೀಡುವುದರ ಮೂಲಕ ಅಳವಡಿಸಿಕೊಳ್ಳಬೇಕೆಂದು ಅವರು ಆಗ್ರಹಿಸಿದರು.
ಪಿಹೆಚ್ಡಿ ಚೇಂಬರ್ ಆಫ್ ಕಾಮರ್ಸ್ನ ವಾರ್ಷಿಕ ಅಧಿವೇಶನದಲ್ಲಿ ಮಾತನಾಡಿದ ಜೇಟ್ಲಿ, ಕೆಲವು ಜಾಗತಿಕ ಪ್ರವೃತ್ತಿಗಳು ಭಾರತವನ್ನು ಪ್ರತಿಕೂಲವಾದ ಪರಿಣಾಮ ಬೀರುತ್ತಿವೆ ಆದರೆಮುಂಬರುವ ದಿನಗಳಲ್ಲಿ ದೇಶವು ವೇಗವಾಗಿ ಬೆಳೆಯಲು ಅದು ಮಾರ್ಗಗಳನ್ನು ತೆರೆಯಲಿದೆ ಎಂದು ತಿಳಿಸಿದರು.
ವ್ಯಾಪಾರ ಯುದ್ಧ ಆರಂಭದಲ್ಲಿ ಅಸ್ಥಿರತೆಯನ್ನು ಸೃಷ್ಟಿಸಬಹುದು , ಆದರೆ ಅಂತಿಮವಾಗಿ ಮಾರುಕಟ್ಟೆಯನ್ನು ತೆರೆಯಬಹುದು. ಮುಂದೆ ಭಾರತದಲ್ಲಿ ಬೃಹತ್ ವ್ಯಾಪಾರಿ ಮತ್ತು ಉತ್ಪಾದನಾ ನೆಲೆಯಾಗಿ ತೆರೆಯಬಹುದು ಎಂದು ಜೇಟ್ಲಿ ವೀಡಿಯೊ ಕಾನ್ಫರೆನ್ಸ್ ಸಂವಾದದಲ್ಲಿ ಹೇಳಿದರು,
ತಜ್ಞರು ಪ್ರಸ್ತಕ ನಡೆಯುತ್ತಿರುವ ಈ ಸಮರ ಯುಎಸ್ ಮತ್ತು ಚೈನಾ ನಡುವೆ ನಡೆಯುತ್ತಿದೆ ಆದ್ದರಿಂದ ಇದು ಅಮೆರಿಕಾದ ಮಾರುಕಟ್ಟೆಯಲ್ಲಿ ಭಾರತದ ಯಂತ್ರೋಪಕರಣಗಳು, ವಿದ್ಯುತ್ ಉಪಕರಣಗಳು, ವಾಹನಗಳು ಮತ್ತು ಸಾರಿಗೆ ಭಾಗಗಳು, ರಾಸಾಯನಿಕಗಳು, ಪ್ಲಾಸ್ಟಿಕ್ಗಳು ಮತ್ತು ರಬ್ಬರ್ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಬರಲಿದೆ ಎಂದು ಅವರು ತಿಳಿಸಿದರು.