ನವದೆಹಲಿ: 5G ಇಂಟರ್ನೆಟ್ ಸೇವೆಯ ನಿರೀಕ್ಷೆಯಲ್ಲಿರುವವರಿಗೆ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ನೀಡಿರುವ ಹೇಳಿಕೆ ಕೊಂಚ ನೆಮ್ಮದಿ ನೀಡಲಿದೆ. ಹೌದು, ಈ ಕುರಿತು ಹೇಳಿಕೆ ನೀಡಿರುವ ಕೇಂದ್ರ ಸಚಿವರು, "5ಜಿ ಪ್ರಯೋಗಗಳ ಬಗ್ಗೆ ನಾವು ಈಗಾಗಲೇ ನಿರ್ಧಾರ ತೆಗೆದುಕೊಂಡಿದ್ದೇವೆ. 5ಜಿ ಸೇವೆ ಭವಿಷ್ಯವಾಗಿದ್ದು, ನಾವು ಹೊಸ ಆವಿಷ್ಕಾರಗಳನ್ನು ಪ್ರೋತ್ಸಾಹಿಸುತ್ತೇವೆ. ಎಲ್ಲಾ ಟೆಲಿಕಾಂ ಸೇವಾ ನಿರ್ವಾಹಕರು 5ಜಿ ಪ್ರಯೋಗಗಳಲ್ಲಿ ಭಾಗವಹಿಸಬಹುದಾಗಿದೆ" ಎಂದು ಹೇಳಿದ್ದಾರೆ.
Union Minister Ravi Shankar Prasad: We have taken a decision on 5G trials. 5G is the future. We will encourage new innovations. All operators can participate in the 5G trials. pic.twitter.com/z1ke20hQVw
— ANI (@ANI) December 30, 2019
ಇಂಟರ್ನೆಟ್ ಅನ್ನು ಹೆಚ್ಚು ಬಳಸುವವರಿಗೆ ಇದು ಒಳ್ಳೆಯ ಸುದ್ದಿ ಎಂದೇ ಹೇಳಲಾಗುತ್ತಿದೆ, ಏಕೆಂದರೆ 5 ಜಿ ಪರಿಚಯಿಸುವುದರೊಂದಿಗೆ, ಇಂಟರ್ನೆಟ್ ವೇಗವು ತುಂಬಾ ಹೆಚ್ಚಾಗಲಿದೆ ಮತ್ತು ಇಂಟರ್ನೆಟ್ನಲ್ಲಿ ಹೆಚ್ಚು ಸಮಯ ತೆಗೆದುಕೊಳ್ಳುವ ಕಾರ್ಯಗಳು ಸುಲಭವಾಗಿ ಸಾಧ್ಯವಾಗಲಿವೆ.
ಇಂಟರ್ನೆಟ್ ಬಳಕೆದಾರರು 2020ರಲ್ಲಿ ತಮಗೆ 5ಜಿ ಸೇವೆಯನ್ನು ಸಂಪೂರ್ಣವಾಗಿ ಅನುಭವಿಸಲು ಸಾಧ್ಯವಾಗಲಿದೆ ಎಂಬ ನೀರಿಕ್ಷೆಯಲ್ಲಿದ್ದಾರೆ. ಏಕೆಂದರೆ ಈ ಮೊದಲು 2020ರಲ್ಲಿ ಈ ತಂತ್ರಜ್ಞಾನದ ಬಗ್ಗೆ ದೊಡ್ಡ ಬದಲಾವಣೆಗಳನ್ನು ನಿರೀಕ್ಷಿಸಲಾಗಿದೆ ಎಂಬ ಸುದ್ದಿ ಪ್ರಕಟಗೊಂಡಿತ್ತು.