ಕೇಂದ್ರ ಕಾರ್ಮಿಕ ಸಚಿವಾಲಯ EPF ನಿಯಮಗಳಲ್ಲಿ ಬದಲಾವಣೆ ತಂದು ನೋಟಿಫಿಕೇಶನ್ ಜಾರಿಗೊಳಿಸಿದೆ. ಹೊಸ ನಿಯಮಗಳ ಅಡಿ ಇನ್ಮುಂದೆ ನೀವು ನಿಮ್ಮ ಭವಿಷ್ಯನಿಧಿ ಖಾತೆಯಿಂದ ಶೇ.75 ರಷ್ಟು ಹಣವನ್ನು ವಿಥ್ ಡ್ರಾ ಮಾಡಬಹುದಾಗಿದೆ. ಕೊರೊನಾ ವೈರಸ್ ಸಂಕಟದ ಹಿನ್ನೆಲೆ ಸರ್ಕಾರ ಈ ನಿರ್ಣಯ ಕೈಗೊಂಡಿದೆ ಎನ್ನಲಾಗಿದೆ.
ಸರ್ಕಾರದ ಈ ನಿರ್ಣಯದಿಂದ ಇದೀಗ ಭವಿಷ್ಯ ನಿಧಿ ಕಾರ್ಯಾಲಯ ನಿಮ್ಮ PF ಖಾತೆಯಿಂದ ಶೇ.75 ರಷ್ಟು ಹಣ ಅಥವಾ ಮೂರು ತಿಂಗಳ ವೇತನವನ್ನು ಹಿಂಪಡೆಯಲು ಅನುಮತಿ ನೀಡಲಿದೆ. EPF ಖಾತೆಯಿಂದ ಈ ಹಣ ಹಿಂಪಡೆಯುವಿಕೆ ಸಂಪೂರ್ಣ ನಾನ್-ರಿಫಂಡೆಬಲ್ ಆಗಿರಲಿದೆ.
ದೇಶಾದ್ಯಂತ ಕೊರೊನಾ ವೈರಸ್ ಪ್ರಕೋಪದ ವಿರುದ್ಧ ಕೇಂದ್ರ ಸರ್ಕಾರ ಸಾರಿರುವ ಯುದ್ಧದಿಂದ ಪ್ರಭಾವಿತಕ್ಕೊಳಗಾಗಿರುವ ಬಡವರಿಗೆ ಹಾಗೂ ದಿನಗೂಲಿ ಕಾರ್ಮಿಕರು ಸಂಕಷ್ಟ ಎದುರಿಸುತ್ತಿದ್ದು, ಅವರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ 1,70,000 ಕೋಟಿ ರೂ. ಪ್ರಧಾನ ಮಂತ್ರಿ ಬಡವರ ಕಲ್ಯಾಣ ಪ್ಯಾಕೇಜ್ ಅನ್ನು ಈ ಮೊದಲೇ ಘೋಷಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ್ದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈ ಪ್ಯಾಕೇಜ್ ಅಡಿ ಬಡವರಿಗೆ ಹಾಗೂ ದಿನಗೂಲಿ ಕಾರ್ಮಿಕರ ಖಾತೆಗೆ ನೆರವಾಗಿ ಹಣವನ್ನು ವರ್ಗಾಯಿಸಿ ಅವರಿಗೆ ಖಾದ್ಯ ಸುರಕ್ಷತೆಯನ್ನು ನೀಡಲಾಗುವುದು ಎಂದು ಹೇಳಿದ್ದರು.
ದೇಶಾದ್ಯಂತ ಪಸರಿಸಿರುವ ಕೊರೊನಾ ಪ್ರಕೋಪವನ್ನು ತಡೆಯುವ ನಿಟ್ಟಿನಲ್ಲಿ ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದು, ದೇಶದ ಯಾವುದೆ ಬಡವ ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಪ್ರಧಾನ ಮಂತ್ರಿ ಬಡವರ ಕಲ್ಯಾಣ ಅನ್ನ ಯೋಜನೆಯ ಅಡಿ ಮುಂಬರುವ ಮೂರು ತಿಂಗಳುಗಳವರೆಗೆ ಪ್ರತಿವ್ಯಕ್ತಿಗೆ ಐದು ಕೆ.ಜಿ ಗೋಧಿ ಅಥವಾ ಅಕ್ಕಿಯನ್ನು ಉಚಿತವಾಗಿ ನೀಡಲಾಗುವುದು ಜೊತೆಗೆ ಪ್ರತಿ ಕುಟುಂಬಕ್ಕೆ 1 ಕೆ.ಜಿಯಂತೆ ಬೆಳೆಯನ್ನು ಸಹ ನೀಡಲಾಗುವುದು ಎಂದು ಘೋಷಿಸಿದ್ದಾರೆ.
ಅತ್ತ ಇನ್ನೊಂದೆಡೆ ಮನರೆಗಾ ಅಡಿ ಕೆಲಸ ಮಾಡುವ ನೌಕರರು ಹಾಗೂ ದಿನಗೂಲಿ ನೌಕರರಿಗೆ ವೇತನವನ್ನು ರೂ.200/ದಿನ ಕ್ಕೆ ಹೆಚ್ಚಿಸಲಾಗಿದೆ ಎಂದು ಕೂಡ ಅವರು ಮಾಹಿತಿ ನೀಡಿದ್ದರು. ಇದನ್ನು ಹೊರತುಪಡಿಸಿ ರೈತರು, ಬಡ ವಿಧವೆಯರು, ಉಜ್ವಲಾ ಯೋಜನೆಯ ಲಾಭಾರ್ಥಿಗಳು, ಮಹಿಳಾ ಸ್ವಯಂ ಸೇವಾ ಸಂಘಟನೆಗಳು ಸೇರಿತಂತೆ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಕಾರ್ಯನಿರತ ಕಾರ್ಮಿಕರಿಗೆ ಪರಿಹಾರ ನೀಡುವುದಾಗಿಯೂ ಕೂಡ ಅವರು ಹೇಳಿದ್ದರು.