Marriage Trending News: ಮದುವೆ ಮೆರವಣಿಗೆಯಿಂದ ಆಸ್ಪತ್ರೆ ಸೇರಿದ ವರ: ಕಾರಣ ಕೇಳಿದ ವಧು ವಿವಾಹವೇ ಬೇಡ ಅಂದ್ಳು!!

Marriage Trending News: ಅನೇಕರು ಉತ್ತಮ ಜೀವನ ಸಂಗಾತಿಯನ್ನು ಪಡೆಯಲು ಪೂಜೆಗಳನ್ನು ಮಾಡುತ್ತಾರೆ. ಆದರೆ ಕೆಲವರು ಅದೃಷ್ಟದಿಂದ ತಮ್ಮ ನೆಚ್ಚಿನ ಸಂಗಾತಿ ಸಿಗುತ್ತಾರೆ. ಅನೇಕ ಬಾರಿ ಹುಡುಗರು ತಮ್ಮ ಮೂರ್ಖತನ ಅಥವಾ ವರ್ತನೆಗಳಿಂದ ಉತ್ತಮ ಸಂಗಾತಿಯನ್ನು ಕಳೆದುಕೊಳ್ಳುತ್ತಾರೆ. ಇಂತಹದ್ದೇ ಪ್ರಕರಣ ಉತ್ತರ ಪ್ರದೇಶದಲ್ಲಿ ಕೆಲ ದಿನಗಳ ಹಿಂದೆ ನಡೆದಿದ್ದು, ವರನ ಕಾರಣದಿಂದ ವಧು ಮದುವೆಯಾಗಲು ನಿರಾಕರಿಸಿದ್ದಾಳೆ

Written by - Bhavishya Shetty | Last Updated : Dec 16, 2022, 10:43 AM IST
    • ಮದುವೆಯಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ಅವಳ ಸಂಗಾತಿಯ ಬಗ್ಗೆ ಆಕೆಗೆ ಎಲ್ಲಿಲ್ಲದ ಪ್ರೀತಿ ಇರುತ್ತದೆ
    • ಅನೇಕರು ಉತ್ತಮ ಜೀವನ ಸಂಗಾತಿಯನ್ನು ಪಡೆಯಲು ಪೂಜೆಗಳನ್ನು ಮಾಡುತ್ತಾರೆ
    • ವರ ಮಾಡಿದ ಒಂದು ತಪ್ಪು ಇಡೀ ಸಂಬಂಧಗಳನ್ನು ನುಚ್ಚು ನೂರು ಮಾಡಿದೆ
Marriage Trending News: ಮದುವೆ ಮೆರವಣಿಗೆಯಿಂದ ಆಸ್ಪತ್ರೆ ಸೇರಿದ ವರ: ಕಾರಣ ಕೇಳಿದ ವಧು ವಿವಾಹವೇ ಬೇಡ ಅಂದ್ಳು!!  title=
wedding

Marriage Trending News: ಮದುವೆಯಾಗುವುದು ಪ್ರತಿಯೊಬ್ಬ ಹುಡುಗಿಯ ಕನಸು. ಆ ಮದುವೆಯಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ಅವಳ ಸಂಗಾತಿಯ ಬಗ್ಗೆ ಆಕೆಗೆ ಎಲ್ಲಿಲ್ಲದ ಪ್ರೀತಿ ಇರುತ್ತದೆ. ಅಷ್ಟೇ ಅಲ್ಲದೆ, ಪ್ರತಿ ಹುಡುಗಿಯೂ ತನ್ನ ಜೀವನದಲ್ಲಿ ತನ್ನನ್ನು ಮದುವೆಯಾಗುವ ಹುಡುಗ ಹಾಗಿರಬೇಕು ಹೀಗಿರಬೇಕು ಎಂದು ಆಸೆ ಪಟ್ಟಿರುತ್ತಾಳೆ. ತನ್ನ ಇಷ್ಟಾರ್ಥಗಳನ್ನು ಪೂರೈಸುವುದು ಮಾತ್ರವಲ್ಲದೆ ಅವಳನ್ನು ಗೌರವಿಸಬೇಕು ಎಂದು ಭಾವಿಸುತ್ತಾಳೆ. ಆದರೆ ಕೆಲವೊಂದು ಬಾರಿ ಅದೆಷ್ಟೋ ಕಾರಣಗಳಿಗೆ ಮದುವೆಯು ಮುರಿದುಬೀಳುತ್ತದೆ. ಇದೀಗ ಅಂತಹ ಘಟನೆಯೊಂದು ನಡೆದಿದ್ದು, ಮದುವೆಯೇ ಬೇಡ ಎಂದು ಮದುಮಗಳು ಮಂಟಪ ಬಿಟ್ಟು ತೆರಳಿದ್ದಾಳೆ.

ಇದನ್ನೂ ಓದಿ: Rafale Fighter Jet : ಭಾರತಕ್ಕೆ ಬಂದಿಳಿದ 36ನೇ ರಫೇಲ್ ಯುದ್ಧ ವಿಮಾನ

ಅನೇಕರು ಉತ್ತಮ ಜೀವನ ಸಂಗಾತಿಯನ್ನು ಪಡೆಯಲು ಪೂಜೆಗಳನ್ನು ಮಾಡುತ್ತಾರೆ. ಆದರೆ ಕೆಲವರು ಅದೃಷ್ಟದಿಂದ ತಮ್ಮ ನೆಚ್ಚಿನ ಸಂಗಾತಿ ಸಿಗುತ್ತಾರೆ. ಅನೇಕ ಬಾರಿ ಹುಡುಗರು ತಮ್ಮ ಮೂರ್ಖತನ ಅಥವಾ ವರ್ತನೆಗಳಿಂದ ಉತ್ತಮ ಸಂಗಾತಿಯನ್ನು ಕಳೆದುಕೊಳ್ಳುತ್ತಾರೆ. ಇಂತಹದ್ದೇ ಪ್ರಕರಣ ಉತ್ತರ ಪ್ರದೇಶದಲ್ಲಿ ಕೆಲ ದಿನಗಳ ಹಿಂದೆ ನಡೆದಿದ್ದು, ವರನ ಕಾರಣದಿಂದ ವಧು ಮದುವೆಯಾಗಲು ನಿರಾಕರಿಸಿದ್ದಾಳೆ.

ಉತ್ತರ ಪ್ರದೇಶದ ಮಹಾರಾಜ್‌ಗಂಜ್‌ನಲ್ಲಿ ವರನ ಈ ವರ್ತನೆ ಇಡೀ ಪುರುಷ ಸಮಾಜವನ್ನೇ ಮುಜುಗರಕ್ಕೀಡು ಮಾಡಿದೆ. ವರನ ಮನೆಯವರು ಸಂತೋಷದಿಂದ ವಧುವನ್ನು ಮನೆ ತುಂಬಿಸಿಕೊಳ್ಳಲು ಸಿದ್ಧರಿದ್ದರು. ಇನ್ನೊಂದು ಕಡೆ ವಧು ಕೂಡ ತನ್ನ ನೆಚ್ಚಿನ ವರನನ್ನು ನೋಡಲು ಸಿದ್ಧವಾಗಿ ಕುಳಿತಿದ್ದಳು. ಆದರೆ ವರ ಮಾಡಿದ ಒಂದು ತಪ್ಪು ಇಡೀ ಸಂಬಂಧಗಳನ್ನು ನುಚ್ಚು ನೂರು ಮಾಡಿದೆ.

ಈ ಘಟನೆ ಯುಪಿಯ ಮಹಾರಾಜ್‌ಗಂಜ್‌ನ ನಿಚ್ಲಾಲ್ ಪ್ರದೇಶದಲ್ಲಿ ನಡೆದಿದೆ. ಇಲ್ಲಿಗೆ ಮದುಮಗನ ಮದುವೆಯ ಮೆರವಣಿಗೆ ಬರಬೇಕಿತ್ತು. ಇಡೀ ಹುಡುಗಿಯ ಕಡೆಯವರು ಸ್ವಾಗತಿಸುವ ತಯಾರಿಯಲ್ಲಿ ನಿರತರಾಗಿದ್ದರು. ಸಿದ್ಧತೆಯಲ್ಲಿ ಯಾವುದೇ ಕೊರತೆಯಾಗಬಾರದು ಎಂಬುದು ಎಲ್ಲರ ಆಶಯವಾಗಿತ್ತು

ಬಹಳ ಹೊತ್ತಾದರೂ ಮೆರವಣಿಗೆ ಬಾರದೆ ಇದ್ದಾಗ ಹುಡುಗಿಯ ಕಡೆಯವರು ಗಲಿಬಿಲಿಗೊಂಡು ಅಳಿಯನ ಕಡೆಯವರಿಗೆ ಕರೆ ಮಾಡಿದರು. ಈ ಸಂದರ್ಭದಲ್ಲಿ ಅಲ್ಲಿಂದ ಬಂತ ಉತ್ತರ ಕೇಳಿ ಬೆಚ್ಚಿಬಿದ್ದರು. ಮೆರವಣಿಗೆ ಮಧ್ಯೆ ವರನ ಆರೋಗ್ಯ ಹದಗೆಟ್ಟಿದೆ ಎಂದು ವರನ ಕಡೆಯವರು ತಿಳಿಸಿದ್ದಾರೆ. ಅದಕ್ಕಾಗಿಯೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದಿದ್ದಾರೆ. ತಕ್ಷಣವೇ ಯುವತಿ ಕೂಡ ಆಸ್ಪತ್ರೆ ತಲುಪಿದ್ದಾಳೆ.

ವಧುವಿನ ಕಡೆಯವರು ಆಸ್ಪತ್ರೆ ತಲುಪಿದ ಕೂಡಲೇ ಅಲ್ಲಿ ಎಲ್ಲರೂ ಗಲಿಬಿಲಿಗೊಂಡರು. ಇದಾದ ಮೇಲೆ ವಧುವಿನ ಕಡೆಯವರು ವರನ ಅಸ್ವಸ್ಥನಾಗಲು ಕಾರಣವೇನೆಂದು ತಿಳಿಯಲು ಬಯಸಿದ್ದರು. ಮೊದಮೊದಲು ವರನ ಕಡೆಯವರು ಮಾತು ತಪ್ಪಿಸಲು ಮುಂದಾದರು. ಆದರೆ ಸ್ವಲ್ಪ ಸಮಯದ ನಂತರ ವರನಿಗೆ ವಿಪರೀತ ಕುಡಿತದ ಚಟ ಇರುವುದು ತಿಳಿಯಿತು. ಇದೇ ಕಾರಣದಿಂದ ಪ್ರಜ್ಞೆ ತಪ್ಪಿರುವುದಾಗಿ ಹುಡುಗಿಯ ಕಡೆಯವರಿಗೆ ಗೊತ್ತಾಯಿತು.

ಇದನ್ನೂ ಓದಿ: Most Ordered Foods: 2022ರಲ್ಲಿ ಜನರು ಹೆಚ್ಚು ಆರ್ಡರ್ ಮಾಡಿರುವ 10 ಆಹಾರಗಳು ಯಾವುವು ಗೊತ್ತಾ?

ಮತ್ತೊಂದೆಡೆ, ವರ ಮದ್ಯವ್ಯಸನಿ ಎಂದು ತಿಳಿದ ತಕ್ಷಣ ವಧುವಿನ ಹೃದಯ ಒಡೆದುಹೋಯಿತು. ತಕ್ಷಣವೇ ಅವಳು ನನಗೆ ಈ ಮದುವೆ ಬೇಡ ಎಂದು ಕಡ್ಡಿ ಮುರಿದಂತೆ ಹೇಳಿದಳು. ಮದುವೆ ಕ್ಯಾನ್ಸಲ್ ಎಂದ ತಕ್ಷಣ ಅಲ್ಲಿ ಗಲಾಟೆಯೇ ನಡೆದಿತ್ತು. ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ವಧು ಮದುವೆಯೇ ಬೇಡ ಎಂದು ಹೇಳಿದ್ದಾಳೆ.  

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News