ವಧು ಕರೆದೊಯ್ಯಲು ಹೆಲಿಕಾಫ್ಟರಿನಲ್ಲಿ ನೋಟಿನ ಹಾರ ಧರಿಸಿ ಬಂದ ವರ!

ಎರಡು ವರ್ಷಗಳ ಹಿಂದೆ ಸುಲ್ತಾನ್ ಹಾಗೂ ಅಬ್ಬಾರ್ ನಡುವೆ ಪ್ರೇಮಾಂಕುರವಾಗಿತ್ತು.  

Updated: Feb 1, 2018 , 12:40 PM IST
ವಧು ಕರೆದೊಯ್ಯಲು ಹೆಲಿಕಾಫ್ಟರಿನಲ್ಲಿ ನೋಟಿನ ಹಾರ ಧರಿಸಿ ಬಂದ ವರ!

ಆಗ್ರಾ: ಇತ್ತೀಚಿನ ದಿನಗಳಲ್ಲಿ ಮದುವೆ ಎಂದರೆ ದುಬಾರಿ ಎಂದೇ ಅರ್ಥ. ಇಲ್ಲೊಬ್ಬ ವರ ಅಂತಹದ್ದೇ ಕೆಲಸವೊಂದನ್ನು ಮಾಡಿ ಎಲ್ಲರ ಉಬ್ಬೆರುವಂತೆ ಮಾಡಿದ್ದಾನೆ. ಈತ ವಧುವನ್ನು ಕರೆದೊಯ್ಯಲು ಬಂದಿದ್ದಾದರೂ ಹೇಗೆ ಗೊತ್ತೇ? ತಿಳಿದರೆ ಆಶ್ಚರ್ಯ ಪಡುತ್ತಿರಿ.

ಆಗ್ರಾದಲ್ಲಿ ವರನೊಬ್ಬ ವಧುವನ್ನು ಕರೆದೊಯ್ಯಲು ಹೆಲಿಕಾಫ್ಟರಿನಲ್ಲಿ ಬಂದಿದ್ದಾನೆ. ಅಷ್ಟೇ ಅಲ್ಲ 2,000 ರೂ.ನಿಂದ ತಯಾರಿಸಿರುವ ಹಾರ ಧರಿಸಿ ಬಂದಿದ್ದಾನೆ. ಮಾಹಿತಿ ಪ್ರಕಾರ, ಎರಡು ವರ್ಷಗಳ ಹಿಂದೆ ಖಂಡೌಲಿ ದುಲಾ ಅಬ್ಬಾರ್ ಎಂಬ ಯುವಕ ಹಾಗೂ ಮೊಹಬ್ಬತ್ ಸುಲ್ತಾನ್ ಎಂಬ ಯುವತಿಯ ನಡುವೆ ಪ್ರೇಮಾಂಕುರವಾಗಿತ್ತು. ಅವರು ಇತ್ತೀಚಿಗೆ ಮದುವೆಯಾದರು. ವಧುವಿನ ತವರು ಮನೆಯಿಂದ ಕರೆದೊಯ್ಯಲು ಬಂದ ವರ ವಧುವನ್ನು ಅದ್ಧೂರಿಯಿಂದ ಕರೆದೊಯ್ದನು. ಗ್ರಾಮದಲ್ಲಿ ಮೊದಲ ಬಾರಿಗೆ ಸಂಭವಿಸಿದ ಈ ಅದ್ಭುತ ದೃಶ್ಯವನ್ನು ನೋಡಲು ನೂರಾರು ಹಳ್ಳಿಗರು ನೆರೆದಿದ್ದರು. ಸುರಕ್ಷತೆಗಾಗಿ ಪೋಲಿಸ್ ಮತ್ತು ಅಗ್ನಿಶಾಮಕ ದಳದವರೂ ಕೂಡ ಸ್ಥಳದಲ್ಲಿದ್ದರು.

ಈ ಸಮಯದಲ್ಲಿ ಇನ್ನೊಂದು ವಿಶಿಷ್ಟ ಸಂಗತಿಯೆಂದರೆ, ವರ ಎರಡು ಸಾವಿರ ನೋಟಿನ ಹಾರ ಧರಿಸಿದ್ದನು. ಇದನ್ನು ನೋಡಿದ ಜನ ನಿಬ್ಬೆರುಗಾದರು.