Gujarat Municipal Election Results 2021: ಗೆಲುವಿನ ನಗೆ ಬಿರಿದ ಬಿಜೆಪಿ

 ಗುಜರಾತ್‌ನ ಆರು ಮಹಾನಗರ ಪಾಲಿಕೆಗಳಾದ ಅಹಮದಾಬಾದ್, ಸೂರತ್, ವಡೋದರಾ, ರಾಜ್‌ಕೋಟ್, ಭಾವನಗರ ಮತ್ತು ಜಾಮ್‌ನಗರಗಳಲ್ಲಿ 575 ಸ್ಥಾನಗಳಿಗೆ ಮತ ಎಣಿಕೆ ನಡೆಯುತ್ತಿದೆ.

Last Updated : Feb 23, 2021, 05:20 PM IST
Gujarat Municipal Election Results 2021: ಗೆಲುವಿನ ನಗೆ ಬಿರಿದ ಬಿಜೆಪಿ  title=
ಸಾಂದರ್ಭಿಕ ಚಿತ್ರ

ನವದೆಹಲಿ: ಗುಜರಾತ್‌ನ ಆರು ಮಹಾನಗರ ಪಾಲಿಕೆಗಳಾದ ಅಹಮದಾಬಾದ್, ಸೂರತ್, ವಡೋದರಾ, ರಾಜ್‌ಕೋಟ್, ಭಾವನಗರ ಮತ್ತು ಜಾಮ್‌ನಗರಗಳಲ್ಲಿ 575 ಸ್ಥಾನಗಳಿಗೆ ಮತ ಎಣಿಕೆ ನಡೆಯುತ್ತಿದೆ.

ಇತ್ತೀಚಿನ ಮಾಹಿತಿಯ ಪ್ರಕಾರ, ಬಿಜೆಪಿ ಭಾವನಗರದಲ್ಲಿ 15,ರಾಜ್‌ಕೋಟ್‌ನಲ್ಲಿ 24 ಮತ್ತು ವಡೋದರಾದಲ್ಲಿ 45 ಸ್ಥಾನಗಳನ್ನು ಗೆದ್ದಿದೆ. ಜಾಮ್‌ನಗರದಲ್ಲಿ ಬಿಜೆಪಿ (BJP) ಈವರೆಗೆ 32 ಸ್ಥಾನಗಳನ್ನು ಗೆದ್ದಿದ್ದರೆ, ಕಾಂಗ್ರೆಸ್ 05 ಸ್ಥಾನಗಳನ್ನು ಗೆದ್ದಿದೆ. ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ (ಎಎಪಿ) ರಾಜ್‌ಕೋಟ್‌ನಲ್ಲಿ ಕಾಂಗ್ರೆಸ್ ಬೆಳವಣಿಗೆಗೆ ಅಡ್ಡಿಯಾಗಿದೆ.

ಇದನ್ನೂ ಓದಿ: Madhu Bangarappa: 'ಮಧು ಬಂಗಾರಪ್ಪಗೆ ಕಾಂಗ್ರೆಸ್‌ಗೆ ಸ್ವಾಗತ : ಆದ್ರೆ ಮತ್ತೋರ್ವಗೆ ಅವಕಾಶವಿಲ್ಲ'

ಭಾನುವಾರ ಬೆಳಿಗ್ಗೆ 7 ರಿಂದ ಸಂಜೆ 6 ರವರೆಗೆ ನಡೆದ ಮತದಾನದ ವೇಳೆ ಸರಾಸರಿ 46.08 ರಷ್ಟು ಮತದಾನವಾಗಿದೆ ಎಂದು ರಾಜ್ಯ ಚುನಾವಣಾ ಆಯೋಗ (ಎಸ್‌ಇಸಿ) ಹೇಳಿದೆ. ಅಹಮದಾಬಾದ್‌ನಲ್ಲಿ ಅತಿ ಕಡಿಮೆ ಮತದಾನ 42.51 ರಷ್ಟಿದ್ದರೆ,ಜಾಮ್‌ನಗರದಲ್ಲಿ ಅತಿ ಹೆಚ್ಚು ಮತದಾನ 53.38 ರಷ್ಟಿದ್ದರೆ, ನಂತರದ ಸ್ಥಾನದಲ್ಲಿ ರಾಜ್‌ಕೋಟ್‌ನಲ್ಲಿ 50.72, ಭಾವನಗರದಲ್ಲಿ 49.46, ವಡೋದರಾದಲ್ಲಿ 47.84 ಮತ್ತು ಸೂರತ್‌ನಲ್ಲಿ ಶೇ 47.14 ರಷ್ಟು ಮತದಾನವಾಗಿದೆ.

ಇದನ್ನೂ ಓದಿ: PM Modi: ಐದು ರಾಜ್ಯಗಳ ವಿಧಾನಸಭೆ ಎಲೆಕ್ಷನ್ ದಿನಾಂಕ ಬಗ್ಗೆ ಸುಳಿವು ನೀಡಿದ ಪ್ರಧಾನಿ ಮೋದಿ!

ಈ ಎಲ್ಲ ಸಂಸ್ಥೆಗಳನ್ನು ಪ್ರಸ್ತುತ ಬಿಜೆಪಿ ನಿಯಂತ್ರಿಸುತ್ತದೆ.ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಗೆ ಮೇಲುಗೈ ಇದ್ದರೆ, ಈ ಬಾರಿ ಹಲವಾರು ಹಿರಿಯ ಮತ್ತು ಬಹು-ಅವಧಿಯ ಕಾರ್ಪೊರೇಟರ್‌ಗಳಿಗೆ ಟಿಕೆಟ್ ನಿರಾಕರಿಸಲಾಗಿದ್ದು, ಇದು ಪಕ್ಷದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈ ಚುನಾವಣೆಗಳು ಮತದಾರರ ಮನಸ್ಥಿತಿಯ ಸೂಚಕವನ್ನು ನೀಡುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News