Most expensive vegetable: ಬೆಲೆ ಯಾವಾಗಲೂ ಗುಣಮಟ್ಟಕ್ಕೆ ಸಮಾನವಾಗಿರುವುದಿಲ್ಲ. ಕೆಲವರು ಉಳಿತಾಯ ಮಾಡಬೇಕೆಂದು ಕಳಪೆಯಾದರೂ ಸಮಸ್ಯೆಯಿಲ್ಲ ಅಂತಾರೆ. ಇನ್ನೂ ಕೆಲವರು ಹಣ ಎಷ್ಟಾದರೂ ಸಮಸ್ಯೆಯಿಲ್ಲ ಗುಣಮಟ್ಟವಿರಬೇಕು ಎನ್ನುತ್ತಾರೆ. ಇಂದು ನಾವು ಹೇಳಲು ಹೊರಟಿರುವ ಈ ತರಕಾರಿ ಬಗ್ಗೆ ತಿಳಿದುಕೊಂಡರೆ ಶಾಕ್ ಆಗ್ತೀರ.
ಇದನ್ನೂ ಓದಿ: Vastu Tips: ತಪ್ಪಿಯೂ ಮಂಚದ ಕೆಳಗೆ ಈ ವಸ್ತುಗಳನ್ನು ಇಡಬೇಡಿ, ಜೀವನದುದ್ದಕ್ಕೂ ಕಷ್ಟಗಳನ್ನು ಎದುರಿಸುವಿರಿ!
ನೋಡಲು ಪುಟ್ಟ ತರಕಾರಿ. ಇದರ ಬೆಲೆ ಮಾತ್ರ ಬರೋಬ್ಬರು 85 ಸಾವಿರದಿಂದ 1 ಲಕ್ಷದವರೆಗಿದೆ. ತರಕಾರಿಯ ಹೆಸರು "ಹಾಪ್‌ಶೂಟ್ಸ್". ಇದು ಯುರೋಪಿಯನ್ ದೇಶಗಳಲ್ಲಿ ಜನಪ್ರಿಯವಾಗಿದೆ. ವಿಶ್ವದ ಅತ್ಯಂತ ದುಬಾರಿ ತರಕಾರಿ ಎಂದು ಕರೆಯಲಾಗುತ್ತದೆ. ಔಷಧೀಯ ಗುಣಗಳಿಗೆ ಹೆಸರುವಾಸಿಯಾಗಿರುವ ಈ ತರಕಾರಿಯ ಬೆಲೆ ಪ್ರತಿ ಕೆಜಿಗೆ ಸುಮಾರು ರೂ. 85,000 ಇದೆ. ಈ ತರಕಾರಿಯನ್ನು ಸಾಮಾನ್ಯವಾಗಿ ಭಾರತದಲ್ಲಿ ಬೆಳೆಸಲಾಗುವುದಿಲ್ಲ. ಆದರೆ ವರದಿಗಳ ಪ್ರಕಾರ, ಇದನ್ನು ಮೊದಲು ಹಿಮಾಚಲ ಪ್ರದೇಶದಲ್ಲಿ ಬೆಳೆಯಲಾಗುತ್ತಿತ್ತಂತೆ.
ಒಂದು ವರದಿಯ ಪ್ರಕಾರ, ಹಾಪ್ ಶೂಟ್ಸ್ ಬೆಲೆ ಅವುಗಳ ಗುಣಮಟ್ಟದೊಂದಿಗೆ ಬದಲಾಗುತ್ತದೆ. ದುಬಾರಿಯಾಗುವುದಲ್ಲದೆ, ಈ ತರಕಾರಿ ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುವುದಿಲ್ಲ. ವಿಶ್ವದ ಅತ್ಯಂತ ದುಬಾರಿ ತರಕಾರಿ ಹಾಪ್-ಶೂಟ್ಸ್ ಎಷ್ಟು ದುಬಾರಿಯಾಗಿದೆ ಎಂದರೆ ಒಬ್ಬರು ಅದೇ ಬೆಲೆಗೆ ಬೈಕ್ ಅಥವಾ ಚಿನ್ನದ ಆಭರಣಗಳನ್ನು ಖರೀದಿಸಬಹುದು.
ವೈಜ್ಞಾನಿಕವಾಗಿ Humulus lupulus ಎಂದು ಕರೆಯಲ್ಪಡುವ ಇದು ದೀರ್ಘಕಾಲಿಕ ಕ್ಲೈಂಬರ್ ಸಸ್ಯವಾಗಿದೆ. ಯುರೋಪ್ ಮತ್ತು ಉತ್ತರ ಅಮೆರಿಕಾದ ಸ್ಥಳೀಯರು ಇದನ್ನು ಬೆಳೆಯುತ್ತಾರೆ. ಪ್ರಪಂಚದ ಅತ್ಯಂತ ದುಬಾರಿ ತರಕಾರಿ ಆರಂಭದಲ್ಲಿ ಕಳೆ ಎಂದು ಹೇಳಲಾಗಿತ್ತು. ಏಕೆಂದರೆ ಇದು ಸೆಣಬಿನ ಕುಟುಂಬ, ಕ್ಯಾನಬೇಸಿಯಲ್ಲಿ ಹೂಬಿಡುವ ಸಸ್ಯದ ಜಾತಿಯಾಗಿದೆ. ಇದು ಮಧ್ಯಮ ದರದಲ್ಲಿ 6 ಮೀ (19 ಅಡಿ 8 ಇಂಚು) ವರೆಗೆ ಬೆಳೆಯುತ್ತಿದೆ. ಅಷ್ಟೇ ಅಲ್ಲದೆ 20 ವರ್ಷಗಳವರೆಗೆ ಜೀವಿಸುತ್ತದೆ.
ಇದನ್ನೂ ಓದಿ: ಈ ರಾಶಿಯವರಿಗೆ ಹೋಳಿ ಬಹಳ ಮಂಗಳಕರ! ರಾಹು-ಶುಕ್ರರು ಹೊಸ ಉದ್ಯೋಗ-ಬಡ್ತಿ, ಹಣ ನೀಡಲಿದ್ದಾರೆ
ಗಾರ್ಡಿಯನ್ ವರದಿಯ ಪ್ರಕಾರ, ಹಾಪ್ ಶೂಟ್ಸ್ ಕೊಯ್ಲಿಗೆ ಸಿದ್ಧವಾಗುವ ಮೊದಲು ಮೂರು ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಈ ಸಸ್ಯವನ್ನು ಕೊಯ್ಲು ಮಾಡಲು ಕಾರ್ಮಿಕರ ಅಗತ್ಯವಿರುತ್ತದೆ. ಏಕೆಂದರೆ ಸಸ್ಯದ ಸಣ್ಣ ಹಸಿರು ತುದಿಗಳನ್ನು ಕೀಳುವಾಗ ಸಾಕಷ್ಟು ಕಾಳಜಿಯ ಅಗತ್ಯವಿರುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ