ದೇಶಾದ್ಯಂತ ಬೇಸಿಗೆಯ ಉರಿಬಿಸಿಲು, ಈ ರಾಜ್ಯದಲ್ಲಿ 48 ಡಿಗ್ರಿ ತಲುಪಿದ ತಾಪಮಾನ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 43.1 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ಇದು ಈ ತಿಂಗಳ ಅತ್ಯಧಿಕ ತಾಪಮಾನ.

Last Updated : May 30, 2019, 09:05 AM IST
ದೇಶಾದ್ಯಂತ ಬೇಸಿಗೆಯ ಉರಿಬಿಸಿಲು, ಈ ರಾಜ್ಯದಲ್ಲಿ 48 ಡಿಗ್ರಿ ತಲುಪಿದ ತಾಪಮಾನ title=
File Image

ನವದೆಹಲಿ: ದೇಶಾದ್ಯಂತ ಬೇಸಿಗೆಯ ಉರಿಬಿಸಿಲು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ದೇಶದ ವಿವಿಧ ಭಾಗಗಳಲ್ಲಿ ಇಂದೆಂದೂ ಕಾಣದಷ್ಟು ತಾಪ ದಾಖಲಾಗಿದೆ. ಮಹಾರಾಷ್ಟ್ರದ ಚಂದ್ರಪುರದಲ್ಲಿ ತಾಪಮಾನ 48 ಡಿಗ್ರಿ ಸೆಲ್ಸಿಯಸ್ ತಲುಪಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 43.1 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ಇದು ಈ ತಿಂಗಳ ಅತ್ಯಧಿಕ ತಾಪಮಾನವಾಗಿತ್ತು. ಅದೇ ಸಮಯದಲ್ಲಿ, ಕನಿಷ್ಠ ತಾಪಮಾನವು 23.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ, ಇದು ಸಾಮಾನ್ಯಕ್ಕಿಂತ ಎರಡು ಡಿಗ್ರಿ ಸೆಲ್ಸಿಯಸ್ಗಿಂತ ಕಡಿಮೆಯಾಗಿದೆ.

ರಾಜಸ್ಥಾನದಲ್ಲಿ ತೀವ್ರ ಉಷ್ಣಾಂಶ ಜನಸಾಮಾನ್ಯರ ಜೀವನದ ಮೇಲೆ ಪರಿಣಾಮ ಬೀರಿದೆ. ಚುರುದಲ್ಲಿ ಗರಿಷ್ಠ ತಾಪಮಾನವು 47.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ, ಇದು ಸಾಮಾನ್ಯ ತಾಪಮಾನಕ್ಕಿಂತ ನಾಲ್ಕು ಡಿಗ್ರಿ ಹೆಚ್ಚಾಗಿದೆ. ಬಿಕಾನೆರ್-ಶ್ರೀಗಂಗನಗರ 46.8-46.8 ಡಿಗ್ರಿ ಸೆಲ್ಸಿಯಸ್, ಜೈಸಲ್ಮೇರ್ 45.5 ಡಿಗ್ರಿ ಸೆಲ್ಸಿಯಸ್, ಕೋಟಾ 45.3 ಡಿಗ್ರಿ ಸೆಲ್ಸಿಯಸ್ ಮತ್ತು ಬಾರ್ಮರ್ 45.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನವನ್ನು ದಾಖಲಿಸಲಾಗಿದೆ.

ಮಹಾರಾಷ್ಟ್ರದ ನಾಗ್ಪುರದಲ್ಲಿ ತಾಪಮಾನವು 46 ಡಿಗ್ರಿ ಸೆಲ್ಸಿಯಸ್ ತಲುಪಿದೆ. ವಿದರ್ಭ ಪ್ರದೇಶದ ಚಂದ್ರಪುರವು 48 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನವನ್ನು ದಾಖಲಿಸಿದೆ. ಈ ಬಾರಿ ದೇಶದಲ್ಲೇ ಅತಿ ಹೆಚ್ಚು ದಾಖಲಾದ ತಾಪಮಾನ ಇದಾಗಿದೆ. ತೆಲಂಗಾಣದಲ್ಲಿ ನಿರಂತರ ಶಾಖವಿದೆ. ಆದಿಲಾಬಾದ್ ನಗರದಲ್ಲಿ, ಸತತ ಎರಡನೇ ದಿನಕ್ಕೆ ತಾಪಮಾನವು 46.3 ಡಿಗ್ರಿ ಸೆಲ್ಸಿಯಸ್ ಆಗಿತ್ತು.

ಹಿಮಾಚಲ ಪ್ರದೇಶದ ಉನಾದಲ್ಲಿ ತಾಪಮಾನವು 43 ಡಿಗ್ರಿ ಸೆಲ್ಸಿಯಸ್ ಆಗಿತ್ತು. ಜಮ್ಮುನಲ್ಲಿ, ಈ ಋತುವಿನ ಗರಿಷ್ಠ ತಾಪಮಾನವು ಬುಧವಾರ 42.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಮಧ್ಯಪ್ರದೇಶ, ತೆಲಂಗಾಣ, ಜಾರ್ಖಂಡ್, ಉತ್ತರಪ್ರದೇಶ, ಹರಿಯಾಣ, ಚಂಡೀಘಢ, ದೆಹಲಿ, ಬಿಹಾರ್, ಜಾರ್ಖಂಡ್ ಮತ್ತು ಒಡಿಶಾಗಳಲ್ಲಿ ಮುಂದಿನ ದಿನಗಳಲ್ಲಿ ತಾಪಮಾನ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ.
 

Trending News