ನವದೆಹಲಿ: ಬುಧವಾರದಂದು ನಡೆದ ಏಷ್ಯಾ ಕಪ್ ಪಂದ್ಯದಲ್ಲಿ ಕೇದಾರ್ ಜಾಧವ್ ಪಾಕಿಸ್ತಾನ ತಂಡದ ಮೂರು ವಿಕೆಟ್ ಕಬಳಿಸುವ ಮೂಲಕ ಪಾಕ್ ತಂಡವನ್ನು 162 ರನ್ಗಳಿಗೆ ಕಟ್ಟಿಹಾಕಿ ಬ್ಯಾಟಿಂಗ್ ಬೆನ್ನೆಲುಬು ಮುರಿದರು.
Kedar Jadhav's bowling action is so low. Still not as low as the value of Rupee 😉 #INDvPAK
— Divya Spandana/Ramya (@divyaspandana) September 19, 2018
ಕ್ರಿಕೆಟ್ ವಾರ್ ಮುಗಿದ ನಂತರ ಕ್ರೀಡಾಂಗಣದಲ್ಲಿನ ಪ್ರದರ್ಶನ ಈಗ ರಾಜಕೀಯಕ್ಕೆ ಕಾಲಿಟ್ಟಿದೆ.ಅಷ್ಟಕ್ಕೂ ಏನಂತೀರಾ ಈ ವಾರ್. ಕೇದಾರ್ ಜಾದವ್ ಅವರ ಬೌಲಿಂಗ್ ಪ್ರದರ್ಶನವನ್ನು ಕಾಂಗ್ರೆಸ್ ನ ಸೋಶಿಯಲ್ ಮಿಡಿಯಾ ಮುಖ್ಯಸ್ಥೆ ರಮ್ಯಾ ಪ್ರಸ್ತಾಪಿಸುತ್ತಾ" ಕೇದಾರ್ ಜಾದವ್ ಅವರ ಬೌಲಿಂಗ್ ವೇಗ ತುಂಬಾ ಕಡಿಮೆ ಇದೆ,ಆದರೆ ರೂಪಾಯಿ ಮೌಲ್ಯದಷ್ಟು ಕಡಿಮೆ ಏನು ಇಲ್ಲ" ಎಂದು ಅವರು ಟ್ವೀಟ್ ಮಾಡಿದ್ದಾರೆ.
Not sure about Kedar Jadhav’s bowling action but your IQ for sure is lower than entire Pakistan teams performance. https://t.co/5VlTAD8W5U
— BJP Karnataka (@BJP4Karnataka) September 20, 2018
Ravindra Jadeja at 86 was India's second highest scorer. The highest remains petrol at 87. #EngvInd #MehangiPadiModiSarkar
— Divya Spandana/Ramya (@divyaspandana) September 10, 2018
ಈ ತಕ್ಷಣ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ಬಿಜೆಪಿ" ಕೇದಾರ್ ಬೌಲಿಂಗ್ ವೇಗದ ಬಗ್ಗೆ ಅಷ್ಟು ಖಚಿತತೆ ಇಲ್ಲ ಆದರೆ ನಿಮ್ಮ ಐಕ್ಯೂ ಇಡೀ ಪಾಕಿಸ್ತಾನದ ತಂಡದ ಪ್ರದರ್ಶನಕ್ಕಿಂತ ಕಡಿಮೆ ಇದೆ ಎಂದು ಟ್ವೀಟ್ ಮಾಡಿದೆ. ಈ ಹಿಂದೆ ರವಿಂದ್ರ ಜಡೇಜಾ 86 ರನ್ ಗಳಿಸಿದಾಗ ಎರಡನೇ ಅತ್ಯುತ್ತಮ ಸ್ಕೋರರ್. ಆದರೆ ಪೆಟ್ರೋಲ್ 87 ರ ಮೂಲಕ ಮೊದಲ ಸ್ಥಾನವನ್ನು ಪಡೆದುಕೊಂಡಿದೆ ಎಂದು ಅವರು ವ್ಯಂಗವಾಡಿದ್ದರು.