ನಾನು ಭಾರತಕ್ಕೆ ಬರುವ ಸುದ್ದಿ ಆಧಾರರಹಿತ: ಝಾಕಿರ್​ ನಾಯ್ಕ್

ನಾನು ಭಾರತಕ್ಕೆ ಈಗಲೇ ಮರಳಿ ಬರುತ್ತಿಲ್ಲ. ಮರಳುತ್ತಿದ್ದೇನೆ ಎಂಬುದು ಸುಳ್ಳು ಎಂದು ವಿವಾದಿತ ಇಸ್ಲಾಂ ಮತ ಪ್ರಚಾರಕ ಝಾಕಿರ್​ ನಾಯ್ಕ್ ಹೇಳಿದ್ದಾರೆ.

Last Updated : Jul 4, 2018, 05:25 PM IST
ನಾನು ಭಾರತಕ್ಕೆ ಬರುವ ಸುದ್ದಿ ಆಧಾರರಹಿತ: ಝಾಕಿರ್​ ನಾಯ್ಕ್ title=

ನವದೆಹಲಿ: ನಾನು ಭಾರತಕ್ಕೆ ಈಗಲೇ ಮರಳಿ ಬರುತ್ತಿಲ್ಲ. ಮರಳುತ್ತಿದ್ದೇನೆ ಎಂಬುದು ಸುಳ್ಳು ಮತ್ತು ಆಧಾರಾ ರಹಿತ ಎಂದು ವಿವಾದಿತ ಇಸ್ಲಾಂ ಮತ ಪ್ರಚಾರಕ ಝಾಕಿರ್​ ನಾಯ್ಕ್ ಹೇಳಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಭಾರತದಲ್ಲಿ ತಮಗೆ ರಕ್ಷಣೆ ನೀಡಲಾಗುವುದು ಎಂದು ಸರ್ಕಾರ ಆಶ್ವಾಸನೆ ನೀಡುವವರೆಗೂ ಭಾರತಕ್ಕೆ ಬರುವುದಿಲ್ಲ. ಭಾರತ ಸರ್ಕಾರ ನ್ಯಾಯಯುತವಾಗಿ ನಡೆದುಕೊಳ್ಳುತ್ತದೆ ಎಂದೆನಿಸುತ್ತಿಲ್ಲ ಎಂದು ಝಾಕಿರ್​ ತಿಳಿಸಿದ್ದಾರೆ.

ಈ ಮೊದಲು ಝಾಕಿರ್​ ನಾಯ್ಕ್​ ಮಲೇಷ್ಯಾದಿಂದ ಭಾರತಕ್ಕೆ ಹೊರಟಿದ್ದು, ಬುಧವಾರ ರಾತ್ರಿ ಭಾರತ ತಲುಪುವ ಸಾಧ್ಯತೆ ಇದೆ ಎಂದು ವರದಿಯಾಗಿತ್ತು. ಆದರೆ ಈ ಬಗ್ಗೆ ತಮಗೆ ಮಲೇಶಿಯಾ ಸರ್ಕಾರದಿಂದ ಯಾವುದೇ ಮಾಹಿತ ದೊರೆತಿಲ್ಲ. ಇದರ ಕುರಿತು ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಎನ್​ಐಎ ವಕ್ತಾರ ಅಲೋಕ್​ ಮಿತ್ತಲ್​ ಹೇಳಿಕೆ ನೀಡಿದ್ದರು.

ಢಾಕಾ ದಾಳಿ ನಡೆಸಿದ ಐಸಿಸ್‌ ಉಗ್ರರಿಗೆ ಪ್ರೇರಪಣೆ ನೀಡಿದ ಆರೋಪ ಎದುರಿಸುತ್ತಿರುವ ಝಾಕೀರ್‌ ನಾಯ್ಕ್ ವಿರುದ್ಧ ಅಕ್ರಮ ಹಣ ವರ್ಗಾವಣೆ, ಭಯೋತ್ಪಾದನಾ ವಿರೋದಿ ಕಾಯ್ದೆ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿದ್ದು, ಎನ್​ಐಎ ಮತ್ತು ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ 2016 ರಿಂದ ಮಲೇಷ್ಯಾದ ಪುತ್ರಜಯದಲ್ಲಿ ನೆಲೆಸಿದ್ದು, ಭಾರತಕ್ಕೆ ಮರಳಿಲ್ಲ. 

Trending News