IBPS RRB PO, SO Result 2021 : ಶಾರ್ಟ್ ಲಿಸ್ಟ್ ಆದ ಅಭ್ಯರ್ಥಿಗಳ ಮಾರ್ಕ್ಸ್ ಪ್ರಕಟ, ಹೀಗೆ ಚೆಕ್ ಮಾಡಿಕೊಳ್ಳಿ

ಅಭ್ಯರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ಪಾಸ್‌ವರ್ಡ್ ಸಹಾಯದಿಂದ, ತಮ್ಮ ಸ್ಕೋರ್ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಬಹುದು. ಇದಲ್ಲದೆ, ತಮ್ಮ ಸ್ಕೋರ್ ಕಾರ್ಡ್ ಅನ್ನು ನೇರ ಲಿಂಕ್‌ನಿಂದ ಡೌನ್‌ಲೋಡ್ ಮಾಡಬಹುದು. 

Written by - Ranjitha R K | Last Updated : Dec 15, 2021, 04:26 PM IST
  • BPS RRB PO, SO ಫಲಿತಾಂಶ ಪ್ರಕಟ
  • ಸ್ಕೋರ್ ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳಲು ಹೀಗೆ ಮಾಡಿ
  • ಅಂಕಗಳನ್ನು ಡಿಸೆಂಬರ್ 31 ರವರೆಗೆ ಡೌನ್‌ಲೋಡ್ ಮಾಡಿಕೊಳ್ಳಬಹುದು
IBPS RRB PO, SO Result 2021 : ಶಾರ್ಟ್ ಲಿಸ್ಟ್ ಆದ ಅಭ್ಯರ್ಥಿಗಳ ಮಾರ್ಕ್ಸ್ ಪ್ರಕಟ, ಹೀಗೆ ಚೆಕ್ ಮಾಡಿಕೊಳ್ಳಿ  title=
BPS RRB PO, SO ಫಲಿತಾಂಶ ಪ್ರಕಟ (file photo)

ನವದೆಹಲಿ : IBPS RRB PO, SO Result 2021 : ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್, ರೀಜನಲ್ ರೂರಲ್ ಬ್ಯಾಂಕ್ (IBPS RRB PO, SO Result 2021) ಮುಖ್ಯ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಸಂದರ್ಶನ ಸುತ್ತಿಗೆ ಅರ್ಹತೆ ಪಡೆದಿರುವ ಅಭ್ಯರ್ಥಿಗಳ ಹೆಸರನ್ನು ಕೂಡಾ ಪ್ರಕಟಿಸಲಾಗಿದೆ. ಅಭ್ಯರ್ಥಿಗಳು ತಮ್ಮ ಸ್ಕೋರ್ ಅನ್ನು ಅಧಿಕೃತ ವೆಬ್‌ಸೈಟ್ ibps.in ನಲ್ಲಿ ಪರಿಶೀಲಿಸಬಹುದು. ಸಂದರ್ಶನದಲ್ಲಿ ಯಶಸ್ವಿಯಾದ ಅಭ್ಯರ್ಥಿಗಳನ್ನು ಅಂತಿಮ ನೇಮಕಾತಿಗೆ ಆಯ್ಕೆ ಮಾಡಲಾಗುತ್ತದೆ. 

ಅಭ್ಯರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ಪಾಸ್‌ವರ್ಡ್ ಸಹಾಯದಿಂದ, ತಮ್ಮ ಸ್ಕೋರ್ ಕಾರ್ಡ್ (Score card) ಅನ್ನು ಡೌನ್‌ಲೋಡ್ ಮಾಡಬಹುದು. ಇದಲ್ಲದೆ, ತಮ್ಮ ಸ್ಕೋರ್ ಕಾರ್ಡ್ ಅನ್ನು ನೇರ ಲಿಂಕ್‌ನಿಂದ ಡೌನ್‌ಲೋಡ್ ಮಾಡಬಹುದು. 

ಇದನ್ನೂ ಓದಿ  :  ಅಬ್ಬಾ ..! 99,999 ರೂಪಾಯಿಗೆ ಮಾರಾಟವಾಯಿತು ಒಂದು ಕಿಲೋ ಚಹಾ ಪುಡಿ..!

IBPS RRB PO, SO ಫಲಿತಾಂಶ 2021(IBPS RRB PO, SO Result 2021) : 
ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ ? :
1. ibps.in ಮೂಲಕ IBPS ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
2. ಮುಖಪುಟದಲ್ಲಿ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
3. ಇದರ ಹೊರತಾಗಿ, ನೇರ ಲಿಂಕ್‌ನಲ್ಲಿ ನಿಮ್ಮ ಸ್ಕೋರ್ (IBPS RRB PO, SO Result 2021) ಅನ್ನು ಸಹ ನೀವು ಪರಿಶೀಲಿಸಬಹುದು.
4. ಸ್ಕೋರ್ ಪರಿಶೀಲಿಸಲು ನಿಮಗೆ ನೋಂದಣಿ ಸಂಖ್ಯೆ ಮತ್ತು ಪಾಸ್‌ವರ್ಡ್ ಅಗತ್ಯವಿರುತ್ತದೆ.
5. IBPS RRB PO, SO ಫಲಿತಾಂಶ 2021 ಪರದೆಯ ಮೇಲೆ ಕಾಣಿಸುತ್ತದೆ. ಅದರ ಪ್ರಿಂಟೌಟ್ ತೆಗೆದುಕೊಳ್ಳಿ. 

ಇದನ್ನೂ ಓದಿ :  Bank union strike : ಬ್ಯಾಂಕ್ ಗ್ರಾಹಕರೆ ಗಮನಿಸಿ : ಎರಡು ದಿನ ಬ್ಯಾಂಕ್‌ ಬಂದ್!

ಅಭ್ಯರ್ಥಿಗಳು ತಮ್ಮ ಅಂಕಗಳನ್ನು ಡಿಸೆಂಬರ್ 31 ರವರೆಗೆ ಡೌನ್‌ಲೋಡ್ (download) ಮಾಡಿಕೊಳ್ಳಬಹುದು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News