ರಾಮಮಂದಿರ ನಿರ್ಮಿಸದಿದ್ದರೆ ಜನರಿಗೆ ನಂಬಿಕೆ ದ್ರೋಹ ಮಾಡಿದ ಹಾಗೆ- ಸುಬ್ರಹ್ಮಣ್ಯ ಸ್ವಾಮಿ

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸದಿದ್ದರೆ ಜನರಿಗೆ ನಂಬಿಕೆ ದ್ರೋಹ ಮಾಡಿದ ಹಾಗೆ ಆಗುತ್ತದೆ ಎಂದು ಹಿರಿಯ ಬಿಜೆಪಿ ನಾಯಕ ಸುಬ್ರಮಣ್ಯಂ ಸ್ವಾಮಿ  ತಿಳಿಸಿದ್ದಾರೆ.

Last Updated : Jan 12, 2019, 07:15 PM IST
ರಾಮಮಂದಿರ ನಿರ್ಮಿಸದಿದ್ದರೆ ಜನರಿಗೆ ನಂಬಿಕೆ ದ್ರೋಹ ಮಾಡಿದ ಹಾಗೆ- ಸುಬ್ರಹ್ಮಣ್ಯ ಸ್ವಾಮಿ title=

ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸದಿದ್ದರೆ ಜನರಿಗೆ ನಂಬಿಕೆ ದ್ರೋಹ ಮಾಡಿದ ಹಾಗೆ ಆಗುತ್ತದೆ ಎಂದು ಹಿರಿಯ ಬಿಜೆಪಿ ನಾಯಕ ಸುಬ್ರಮಣ್ಯಂ ಸ್ವಾಮಿ  ತಿಳಿಸಿದ್ದಾರೆ.

ಎಎನ್ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು " ನನ್ನ ಪಕ್ಷಕ್ಕೆ ಎಚ್ಚರಿಕೆ ನಿಡುವುದಿಷ್ಟೇ, ಒಂದು ವೇಳೆ ನೀವು ರಾಮಮಂದಿರ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸದಿದ್ದರೆ ಅದನ್ನು ನೀತಿ ಸಂಹಿತೆಗೂ ಮೊದಲೇ ಪ್ರಾರಂಭಿಸಿ, ಅದಕ್ಕೂ ಮೊದಲೇ ಇದನ್ನು ಮಾಡಬೇಕಾಗಿದೆ.ರಾಮ ಮಂದಿರವನ್ನು ನಿರ್ಮಿಸದಿದ್ದರೆ ಜನರಿಗೆ ನಂಬಿಕೆದ್ರೋಹ ಮಾಡಿದ ಹಾಗೆ ಆಗುತ್ತದೆ" ಎಂದು ಸ್ವಾಮಿ ಎಚ್ಚರಿಸಿದರು.

"ರಾಮ ಮಂದಿರವನ್ನು ನಿರ್ಮಿಸದಂತೆ ತಡೆಯಲು ಸುಪ್ರಿಂಕೋರ್ಟ್ನಿಂದ ಯಾವುದೇ ಅಡೆತಡೆ ಇಲ್ಲ. ಇದೀಗ ಅದು ಶೀರ್ಷಿಕೆ ಮೊಕದ್ದಮೆಯನ್ನು ಮಾತ್ರ ಪರಿಗಣಿಸುತ್ತಿದೆ. ಇದರಿಂದ ಸರಕಾರವು ಮಂದಿರ ನಿರ್ಮಾಣ ಕೈಗೊಳ್ಳುವುದಕ್ಕೆ ಯಾವುದೇ ಅಡೆತಡೆ ಇಲ್ಲ. ಏಕೆಂದರೆ ವಿಧಿ 300ಎ ರ ಪ್ರಕಾರ ಸರ್ಕಾರವು ಭೂಮಿಯ ಅಂತಿಮ ಮಾಲೀಕನಾಗಿರುತ್ತದೆ. ಅವರು ಪರಿಹಾರವನ್ನು ಒದಗಿಸುವ ಮೂಲಕ  ಯಾವುದೇ ಭೂಮಿಯನ್ನು ತೆಗೆದುಕೊಳ್ಳಬಹುದು ಎಂದು ಸ್ವಾಮಿ ತಿಳಿಸಿದರು.

ಈಗ ಸುಬ್ರಮಣ್ಯ ಸ್ವಾಮಿ ಹೇಳಿಕೆ ಪ್ರಮುಖವಾಗಿ ಸುಪ್ರಿಂಕೋರ್ಟ್ ಜನವರಿ 29 ರಿಂದ ಅಯೋಧ್ಯೆ ವಿವಾದಕ್ಕೆ ಸಂಬಂಧಿದ ಹಾಗೆ ವಿಚಾರಣೆಯನ್ನು ಕೈಗೊಳ್ಳುವುದರ ಹಿನ್ನಲೆಯಲ್ಲಿ ಬಂದಿದೆ.

Trending News