'ಈಗ ನಾನು ಕತ್ತಲೆಯಲ್ಲಿ ನನ್ನೊಂದಿಗೆ ಹೋರಾಡುತ್ತಿದ್ದೇನೆ'; ಕರ್ನಾಟಕ ಐಎಎಸ್ ಅಧಿಕಾರಿಯ ಅಳಲು

ಪ್ರಧಾನಿ ನರೇಂದ್ರ ಮೋದಿಯವರ ಹೆಲಿಕಾಪ್ಟರ್ ರನ್ನು ಏಪ್ರಿಲ್ 16 ರಂದು ತಪಾಸಣೆ ನಡೆಸಿದ್ದ ಕರ್ನಾಟಕದ ಕೇಡರ್ ಐಎಎಸ್ ಅಧಿಕಾರಿ ಮೊಹಮ್ಮದ್ ಮೊಹಸ್ಸಿನ್ ನಿಯಮಗಳಿಗೆ ಅನುಗುಣವಾಗಿ ತಮ್ಮ ಕರ್ತವ್ಯವನ್ನು ಮಾಡಿರುವುದಾಗಿ ಹೇಳಿದ್ದಾರೆ.

Last Updated : Apr 27, 2019, 09:59 AM IST
'ಈಗ ನಾನು ಕತ್ತಲೆಯಲ್ಲಿ ನನ್ನೊಂದಿಗೆ ಹೋರಾಡುತ್ತಿದ್ದೇನೆ'; ಕರ್ನಾಟಕ ಐಎಎಸ್ ಅಧಿಕಾರಿಯ ಅಳಲು  title=
Photo courtesy: Facebook

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಹೆಲಿಕಾಪ್ಟರ್ ರನ್ನು ಏಪ್ರಿಲ್ 16 ರಂದು ತಪಾಸಣೆ ನಡೆಸಿದ್ದ ಕರ್ನಾಟಕದ ಕೇಡರ್ ಐಎಎಸ್ ಅಧಿಕಾರಿ ಮೊಹಮ್ಮದ್ ಮೊಹಸ್ಸಿನ್ ನಿಯಮಗಳಿಗೆ ಅನುಗುಣವಾಗಿ ತಮ್ಮ ಕರ್ತವ್ಯವನ್ನು ಮಾಡಿರುವುದಾಗಿ ಹೇಳಿದ್ದಾರೆ.

ಇತ್ತಿಚೀಗೆ ಅವರು ಪ್ರಧಾನಿ ಹೆಲಿಕಾಪ್ಟರ್ ರನ್ನು ಪರಿಶೀಲನೆಗೆ ಒಳಪಡಿಸಿದ ಹಿನ್ನಲೆಯಲ್ಲಿ ಅವರನ್ನು ಚುನಾವಣಾ ಆಯೋಗ ಅಮಾನತುಗೊಳಿಸಿತ್ತು. ಇದಾದ ನಂತರ ಅವರು ಕೇಂದ್ರ ಆಡಳಿತ ನ್ಯಾಯಾಧಿಕರಣಕ್ಕೆ ಮೊರೆಹೋಗಿದ್ದರು.ಅದು ಚುನಾವಣಾ ಆಯೋಗದ ಆದೇಶಕ್ಕೆ ತಡೆಯಾಜ್ಞೆ ನೀಡಿತ್ತು. ಈ ಹಿನ್ನಲೆಯಲ್ಲಿ ಚುನಾವಣಾ ಆಯೋಗ ಅಮಾನತ್ತು ಕ್ರಮವನ್ನು ಹಿಂತೆಗೆದುಕೊಂಡು ಶಿಸ್ತುಕ್ರಮಕ್ಕೆ ಶಿಫಾರಸ್ಸು ಮಾಡಿದೆ.

"ನಾನು ನನ್ನ ಕರ್ತ್ಯವ್ಯವನ್ನು ನಿರ್ವಹಿಸುತ್ತಿದ್ದೆ, ಆದರೆ ಅವರು ನನ್ನನ್ನು ಅಮಾನತ್ತುಗೊಳಿಸಿದ್ದಾರೆ. ಇದುವರೆಗೆ ನಾನೇನು ತಪ್ಪು ಮಾಡಿದ್ದೇನೆ ಎನ್ನುವ ಕುರಿತಾಗಿ ಒಂದೇ ಒಂದು ವರದಿಯನ್ನು ಸಹಿತ ಸ್ವೀಕರಿಸಿಲ್ಲ.ಈಗ ನಾನು ಕತ್ತಲೆಯಲ್ಲಿ ನನ್ನೊಂದಿಗೆ ಹೋರಾಡುತ್ತಿದ್ದೇನೆ" ಎಂದು ಐಎಎಸ್ ಅಧಿಕಾರಿ ಮೊಹಮ್ಮದ್ ಮೊಹಸ್ಸಿನ್ ತಮ್ಮ ನೋವು ತೋಡಿಕೊಂಡಿದ್ದಾರೆ.

1996 ರ ಬ್ಯಾಚ್ ಐಎಎಸ್ ಅಧಿಕಾರಿಯಾಗಿದ್ದ ಮೊಹಮ್ಮದ್ ಮೊಹಸ್ಸಿನ್ ಚುನಾವಣಾ ಆಯೋಗದ ಕರ್ತವ್ಯ ಲೋಪ ಮಾಡಿದ್ದಾರೆ ಎಂದು ಅವರನ್ನು ಆಯೋಗ ಅಮಾನತ್ತುಗೊಳಿಸಿತ್ತು . ಒಡಿಶಾದ ಸಂಬಲ್ಪುರ್ ನಲ್ಲಿ ಅವರು ಪ್ರಧಾನಿ ಮೋದಿ ಅವರ ಹೆಲಿಕಾಪ್ಟರ್ ನ್ನು ಪರಿಶೀಲನೆ ಮಾಡಿದ ಹಿನ್ನಲೆಯಲ್ಲಿ ಅವರನನ್ನು ಅಮಾನತ್ತು ಮಾಡಲಾಗಿತ್ತು.ಈ ಹಿನ್ನಲೆಯಲ್ಲಿ 15 ನಿಮಿಷಗಳ ಕಾಲ ಪ್ರಧಾನಿ ಹೆಲಿಕಾಪ್ಟರ್ ವಿಳಂಬವಾಯಿತು ಎನ್ನಲಾಗಿದೆ. 

Trending News