DRDOಗೆ ಸಿಕ್ಕ ದೊಡ್ಡ ಯಶಸ್ಸು, Surface To Air Missile ಡಿಫೆನ್ಸ್ ಸಿಸ್ಟಮ್ ನ ಯಶಸ್ವಿ ಪರೀಕ್ಷೆ

MRSAM ಸಿಸ್ಟಮ್ ಅನ್ನು ಆಧುನಿಕ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿಗೊಳಿಸಲಾಗಿದೆ. ಈ ಕುರಿತು ಮಾತನಾಡಿರುವ ಇಸ್ರೇಲ್ ರಕ್ಷಣಾ ಕಂಪನಿಯ ಅಧಿಕಾರಿ ಲೆವಿ, "ಟ್ರಯಲ್ ನಲ್ಲಿ ಸಿಕ್ಕ ಯಶಸ್ಸು ಮಹತ್ವಪೂರ್ಣವಾಗಿದೆ. DRDO ಜೊತೆ ಕಾರ್ಯನಿರ್ವಹಿಸುವ ಸಂಗತಿ ಹೆಮ್ಮೆ ತಂದಿದೆ. ಮುಂದೆಯೂ ಕೂಡ ಒಟ್ಟಿಗೆ ಕೆಲಸ ಮಾಡಲು ನಾವು ಬದ್ಧರಾಗಿದ್ದೇವೆ" ಎಂದಿದ್ದಾರೆ.

Written by - Nitin Tabib | Last Updated : Jan 6, 2021, 01:03 PM IST
  • ಅಭೇದ್ಯವಾದ ಭಾರತದ ಆಗಸದ ಗಡಿ.
  • ಹೊಸ ಕ್ಷಿಪಣಿ ರಕ್ಷಣಾ ವ್ಯವಸ್ಥೆಯ ಯಶಸ್ವಿ ಪರೀಕ್ಷೆ
  • ಇಸ್ರೇಲ್-ಭಾರತ ಜಂಟಿ ಸಹಯೋಗದಿಂದ ಅಭಿವೃದ್ಧಿಗೊಂಡ ತಂತ್ರಜ್ಞಾನ
DRDOಗೆ ಸಿಕ್ಕ ದೊಡ್ಡ ಯಶಸ್ಸು, Surface To Air Missile ಡಿಫೆನ್ಸ್ ಸಿಸ್ಟಮ್ ನ ಯಶಸ್ವಿ ಪರೀಕ್ಷೆ title=
MRSAM (Representational Image)

ನವದೆಹಲಿ: MRSAM-ಭೂಮಿಯಿಂದ ಆಗಸದಲ್ಲಿ ದಾಳಿ ನಡೆಸುವ ಮಾರಕ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನುಯಶಸ್ವಿ ಪರೀಕ್ಷೆಯನ್ನು ಭಾರತ ಮತ್ತು ಇಸ್ರೇಲ ಜಂಟಿಯಾಗಿ ಕೈಗೊಂಡಿವೆ.  ಶತ್ರು ರಾಷ್ಟ್ರಗಳ ವೈಮಾನಿಕ ದಾಳಿಯನ್ನು ಎದುರಿಸಲು ಜಂಟಿಯಾಗಿ ಅಭಿವೃದ್ಧಿಪಡಿಸಲಾಗಿರುವ ಈ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಕಳೆದ ವಾರ ಪರೀಕ್ಷಿಸಲಾಗಿದೆ.  ಡಿಆರ್‌ಡಿಒ ಮತ್ತು ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ (ಐಎಐ) ನ ಹೊಸ ಪರಿಕಲ್ಪನೆಯು ತುಂಬಾ ವಿಶಿಷ್ಠವಾಗಿದ್ದು. ಇದನ್ನು ಭೇದಿಸುವುದು ಸುಲಭದ ಮಾತಲ್ಲ ಎನ್ನಲಾಗಿದೆ.

ಇಂಡೊ-ಇಸ್ರೇಲ್ ರಕ್ಷಣಾ ಸಹಭಾಗಿತ್ವದ ಉತ್ಪನ್ನವೆ MRSAM
MRSAM ಒಂದು ವಾಯು ಮತ್ತು ಕ್ಷಿಪಣಿ ರಕ್ಷಣಾ ವ್ಯವಸ್ಥೆಯಾಗಿದ್ದು, ಇದು ವಿವಿಧ ವೈಮಾನಿಕ ವೇದಿಕೆಗಳಿಗೆ ನಿಖರವಾದ ರಕ್ಷಣಾ ಕವಚವನ್ನುಒದಗಿಸುತ್ತದೆ. ರಕ್ಷಣಾ ತಜ್ಞರ ಪ್ರಕಾರ, MRSAM ತನ್ನಿಂದ 50 ರಿಂದ 70 ಕಿ.ಮೀ ದೂರದಲ್ಲಿರುವ ಶತ್ರುರಾಷ್ಟ್ರದ  ವಿಮಾನಗಳನ್ನು ನಾಶಪಡಿಸುವ ಸಾಮರ್ಥ್ಯ ಹೊಂದಿದೆ. ಇಸ್ರೇಲ್ ಮತ್ತು ಭಾರತದ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಿದ MRSAM ಅನ್ನು ಭಾರತೀಯ ಸೇನೆಯ ಮೂರು ವಿಭಾಗಗಳಲ್ಲಿ ಬಳಸಲಾಗುವುದು. ಇಸ್ರೇಲ್‌ನ ಭದ್ರತಾ ಪಡೆಗಳೂ ಕೂಡ ಇದನ್ನು ಬಳಸಿಕೊಳ್ಳಲಿವೆ. ಅದರಲ್ಲಿರುವ ಹೈಟೆಕ್ ರಾಡಾರ್, ಮೊಬೈಲ್ ಲಾಂಚರ್, ಇಂಟರ್ಸೆಪ್ಟರ್, ಸುಧಾರಿತ RF ಸಿಕರ್ ಹೊಸ ತಂತ್ರಜ್ಞಾನದಿಂದ ಸಿದ್ಧಪಡಿಸಲಾಗಿದೆ. ಈ ರಕ್ಷಣಾ ವ್ಯವಸ್ಥೆಯ ಕಮಾಂಡ್ ಹಾಗೂ ನಿಯಂತ್ರಣ ವ್ಯವಸ್ಥೆಯು ಕೂಡ ಅತ್ಯುತ್ತಮವಾಗಿದೆ.

ಇದನ್ನು ಓದಿ- ಭಾರತದ ಹೆಚ್ಚುತ್ತಿರುವ ಶಕ್ತಿ ಕಂಡು ಬೆಚ್ಚಿಬಿದ್ದ ಚೀನಾ-ಪಾಕ್, 35 ದಿನಗಳಲ್ಲಿ 10 ಕ್ಷಿಪಣಿ ಪರೀಕ್ಷೆ

DRDO ಜೊತೆಗೂಡಿ ಕೆಲಸ ಮಾಡುವುದು ಹೆಮ್ಮೆಯ ವಿಷಯ
ಈ ಕುರಿತು ಮಾತನಾಡಿರುವ ಇಸ್ರೇಲ್ ನ ರಕ್ಷಣಾ ಕಂಪನಿಯ IAI ಸಿಇಓ ಬೋಜ್ ಲೆವಿ,  "ಈ MRSAM (ಏರ್ & ಕ್ಷಿಪಣಿ ರಕ್ಷಣಾ ವ್ಯವಸ್ಥೆ) ರಕ್ಷಣಾ ವ್ಯವಸ್ಥೆಯನ್ನು ಇಂದಿನ ಯುಗದ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ಟ್ರಯಲ್ ನಲ್ಲಿ ಸಿಕ್ಕ ಯಶಸ್ಸು ತುಂಬಾ ಪ್ರಮುಖವಾಗಿದೆ. DRDO ಜೊತೆಗೆ ಕೆಲಸ ಮಾಡುವುದು ನಮಗೆ ಹೆಮ್ಮೆ ತಂದಿದೆ. ಈ ಯಶಸ್ಸಿನ ಹಾದಿಯಲ್ಲಿ ಮುಂದುವರಿಯಲು ನಾವು ಬದ್ಧರಾಗಿದ್ದೇವೆ" ಎಂದಿದ್ದಾರೆ.

ಇದನ್ನು ಓದಿ-ಭಾರತದ ಬಲ ಹೆಚ್ಚಿಸಿದ ಡಿಆರ್‌ಡಿಒದ ಪಿನಾಕಾ ರಾಕೆಟ್ ಯಶಸ್ವಿ ಪರೀಕ್ಷೆ

ಇಸ್ರೇಲ್ ನ ರಕ್ಷಣಾ ಉತ್ಪನ್ನಗಳಿಗೆ ವಿಶ್ವಾದ್ಯಂತ ಭಾರಿ ಬೇಡಿಕೆ ಇದೆ
ಇದಕ್ಕೆ ಪ್ರತಿಕ್ರಿಯಿಸಿರುವ ಇಸ್ರೇಲ್ ರಕ್ಷಣಾ ಸಂಸ್ಥೆ, ನಮ್ಮ ತಜ್ಞರು ಹಾಗೂ ಭಾರತೀಯ ವಿಜ್ಞಾನಿಗಳ ಸಮ್ಮುಖದಲ್ಲಿ ನಡೆಸಲಾಗಿರುವ ಪರೀಕ್ಷೆ ಯಶಸ್ವಿಯಾಗಿದೆ. ಈ ಸಮಯದಲ್ಲಿ ನಾವು ವಿಮಾನ ಪರೀಕ್ಷೆಗಳ ವಿವಿಧ ಉಲ್ಲೇಖಗಳನ್ನು ಎಚ್ಚರಿಕೆಯಿಂದ ಪರಿಗಣಿಸಿದ್ದೇವೆ ಹಾಗೂ ಈ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಎಲ್ಲ ಮಾನದಂಡಗಳ ಮೇಲೆ ಯಶಸ್ವಿಯಾಗಿದೆ. ಇಸ್ರೇಲ್ ಸಹಕಾರದಿಂದ ಸಿದ್ಧಪಡಿಸಲಾಗಿರುವ ಹಾಗೂ ಭಾರತದ ರಕ್ಷಣಾ ಬತ್ತಳಿಕೆ ಸೇರಿರುವ ಈ ಬ್ರಹ್ಮಾಸ್ತ್ರ ನಿರ್ಧಿಷ್ಟ ಗುರಿ ಸಾಧಿಸುವ ಕ್ಷಮತೆ ಹೊಂದಿದೆ. ಈ ಹೊಸ ರಕ್ಷಣಾ ಗುರಾಣಿ ದುಷ್ಕೃತ್ಯಗಳಿಗೆ ಮುಂದಾಗುವ ಶತ್ರುರಾಷ್ಟ್ರಗಳಿಗೆ ಭಾರಿ ಹೊಡೆತ ಎಂದೇ ಬಿಂಬಿಸಲಾಗುತ್ತಿದೆ.

ಇದನ್ನು ಓದಿ-ಭಾರತದ ಬ್ರಹ್ಮೋಸ್ ಸೂಪರ್ ಸಾನಿಕ್ ಕ್ರೂಸ್ ಕ್ಷಿಪಣಿ ಯಶಸ್ವಿ ಪರೀಕ್ಷೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News