ನವದೆಹಲಿ: ಕರೋನಾವೈರಸ್ ಲಸಿಕೆಗೆ ಸಂಬಂಧಿಸಿದಂತೆ ಒಳ್ಳೆಯ ಸುದ್ದಿಯೊಂದು ಬಂದಿದ್ದು ದೇಶದಲ್ಲಿ ತಯಾರಾಗುತ್ತಿರುವ ಕರೋನಾವೈರಸ್ (Coronavirus) ಲಸಿಕೆಯನ್ನು ಮುಂದಿನ ತಿಂಗಳು ಆಗಸ್ಟ್ 15 ರಂದು ಅಂದರೆ ಸ್ವಾತಂತ್ರ್ಯ ದಿನದಂದು ಬಿಡುಗಡೆ ಮಾಡುವ ಸಾಧ್ಯತೆ ಇದೇ ಎಂದು ಹೇಳಲಾಗುತ್ತಿದೆ. ಇದಕ್ಕಾಗಿ ಭಾರತೀಯ ವಿಜ್ಞಾನಿಗಳು ತಮ್ಮ ಸಿದ್ಧತೆಗಳನ್ನು ಹೆಚ್ಚಿಸಿದ್ದು ಕ್ಲಿನಿಕಲ್ ಪ್ರಯೋಗಗಳನ್ನು ಸಹ ವೇಗಗೊಳಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಭಾರತದಲ್ಲಿ ಸಿದ್ಧಪಡಿಸಲಾದ ಲಸಿಕೆ :
ಕರೋನಾ ಲಸಿಕೆ ತಯಾರಿಸುವಲ್ಲಿ ಭಾರತ ಬಹುತೇಕ ಯಶಸ್ವಿಯಾಗಿದೆ. ಈಗ ಇದನ್ನು ವಿಶ್ವದ ಮೊದಲ ಕರೋನಾ ಲಸಿಕೆ ಅಥವಾ ಎರಡನೆಯದು ಎಂದು ಕರೆಯಲಾಗುತ್ತದೆ. ಪ್ರಸ್ತುತ ಈ ಸುದ್ದಿ ಕರೋನಾ ವಿರುದ್ಧ ಭಾರತದ ಯುದ್ಧವನ್ನು ಬಲಪಡಿಸಿದೆ. ಭಾರತ್ ಬಯೋಟೆಕ್ ನಕಮ್ ಕಂಪನಿ ಭಾರತದ ಮೊದಲ ಕರೋನಾ ವೈರಸ್ ಲಸಿಕೆ ಸಿದ್ಧಪಡಿಸಿದೆ.
ಕರೋನಾವೈರಸ್ ವಿರುದ್ಧದ ಯುದ್ಧವನ್ನು ಗೆಲ್ಲಲು ಜಗತ್ತಿನಲ್ಲಿ ಕರೋನಾ-ಲಸಿಕೆಗಾಗಿ ಕಾಯುವಿಕೆ ಮುಗಿದಿಲ್ಲ. ಈ ಲಸಿಕೆ ತಯಾರಿಕೆಯಲ್ಲಿ ವಿಶ್ವದ ಕೆಲವೇ ದೇಶಗಳು ಆರಂಭಿಕ ಯಶಸ್ಸನ್ನು ಗಳಿಸಿವೆ, ಅದರಲ್ಲಿ ನಮ್ಮ ಭಾರತ ಕೂಡ ಒಂದು. ಕರೋನಾ ಲಸಿಕೆ - ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಕಂಪನಿಯ ಕೊವಾಕ್ಸಿನ್ ಅಂತಿಮ ಹಂತವನ್ನು ತಲುಪಿದೆ ಮತ್ತು ಈಗ ಅದರ ಮಾನವ ಪ್ರಯೋಗ ಜುಲೈನಿಂದ ಪ್ರಾರಂಭವಾಗಲಿದೆ.
ಆಗಸ್ಟ್ 15 ರಂದು ಲಾಂಚ್ ಮಾಡಲು ಸಿದ್ಧತೆ:
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ICMR) ಮುಖ್ಯಸ್ಥ ಡಾ.ಬಾಲರಮ್ ಭಾರ್ಗವ ಅವರು ಭಾರತದ ಎಲ್ಲಾ ಪ್ರಮುಖ ವೈದ್ಯಕೀಯ ಕಾಲೇಜುಗಳಿಗೆ ಪತ್ರ ಬರೆದಿದ್ದು, ಭಾರತ್ ಬಯೋಟೆಕ್‌ನೊಂದಿಗಿನ ಸಾಮಾನ್ಯ ಕಾರ್ಯಕ್ರಮದಡಿಯಲ್ಲಿ ಹೊಸ ಕರೋನಾ ಕೋವಿಡ್-19 (COVID-19) ಲಸಿಕೆ ಸಿದ್ಧವಾಗಿದೆ ಎಂದು ಹೇಳಿದ್ದಾರೆ. ಕೋವ್ಯಾಕ್ಸೀನ್ ಲಸಿಕೆ ಹೆಸರಿನ ಈ ಲಸಿಕೆಯನ್ನು ಆಗಸ್ಟ್ 15 ರಂದು ಬಿಬಿವಿ 152 ಬಿಡುಗಡೆ ಮಾಡಲು ಯೋಜಿಸಲಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ವೈದ್ಯಕೀಯ ಕಾಲೇಜುಗಳಿಗೆ ವಿಚಾರಣೆಯನ್ನು ತ್ವರಿತಗೊಳಿಸಲು ತಿಳಿಸಲಾಗಿದೆ. ಏಮ್ಸ್ ಸೇರಿದಂತೆ ದೇಶದ 13 ಆಸ್ಪತ್ರೆಗಳಿಗೆ ಕ್ಲಿನಿಕಲ್ ಪರೀಕ್ಷೆಗಳನ್ನು ತ್ವರಿತಗೊಳಿಸಲು ತಿಳಿಸಲಾಗಿದೆ. ಆದ್ದರಿಂದ ಈ ಲಸಿಕೆಯನ್ನು ನಿಗದಿತ ದಿನದಂದು ಪ್ರಾರಂಭಿಸಬಹುದು ಎಂದು ನಿರೀಕ್ಷಿಸಲಾಗಿದೆ.
ಆದಾಗ್ಯೂ ಈ ಲಸಿಕೆಯ ಪ್ರಯೋಗದಲ್ಲಿ ತೊಡಗಿರುವ ವೈದ್ಯರ ಅಭಿಪ್ರಾಯವು ಭಿನ್ನವಾಗಿದೆ. ಮಾನವ ಪ್ರಯೋಗಗಳು ಪ್ರಾರಂಭವಾಗಲು ಕನಿಷ್ಠ ಒಂದು ವಾರ ಬೇಕಾಗಬಹುದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಇನ್ನೂ ಕೆಲವರು ಪ್ರಯೋಗವು ಸಾಮಾನ್ಯವಾಗಿ ಪೂರ್ಣಗೊಳ್ಳಲು 6 ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ, ಆದರೆ ಈ ಲಸಿಕೆ ಯಾವ ವೇಗದಲ್ಲಿ ಕೆಲಸ ಮಾಡಲಿದೆ ಎಂಬುದರ ಆಧಾರದ ಮೇಲೆ ಇದು ನಿರ್ಧಾರಗೊಳ್ಳುತ್ತದೆ. ಅದೇನೇ ಇದ್ದರೂ, ಆಗಸ್ಟ್ 15 ರಂದು ಲಸಿಕೆಯನ್ನು ಪ್ರಾರಂಭಿಸುವುದು ಮಹತ್ವಾಕಾಂಕ್ಷೆಯ ಹೆಜ್ಜೆಯಾಗಿದೆ. ಆದರೆ ಲಸಿಕೆ ಮಾರುಕಟ್ಟೆಗೆ ಬರಲು ಇನ್ನೂ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಮತ್ತು ಈ ಸಮಯವು ಕನಿಷ್ಠ 3 ತಿಂಗಳಿಂದ 4 ತಿಂಗಳವರೆಗೆ ಇರಬಹುದು ಎಂದು ಹೇಳಲಾಗುತ್ತಿದೆ.
ಈ ಲಸಿಕೆ ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಈ ಲಸಿಕೆ ರಚನೆಯಲ್ಲಿನ ಯಶಸ್ಸಿಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್‌ಐವಿ) ಸಹ ಸಲ್ಲುತ್ತದೆ ಎಂದು ಭಾರತ್ ಬಯೋಟೆಕ್ ವರದಿ ಮಾಡಿದೆ.