ಭಾರತದ ತಂಟೆಗೆ ಬಂದ್ರೆ ಸುಮ್ಮನಿರಲ್ಲ- ಚೀನಾಗೆ ಖಡಕ್ ಎಚ್ಚರಿಕೆ

ಭಾರತವು ಚೀನಾಗೆ ತಾಕೀತು ಮಾಡುವ ಮೂಲಕ ಗಡಿ ಪ್ರದೇಶಗಳಲ್ಲಿ ಪದೇ ಪದೇ ತಗಾದೆ ತೆಗೆಯದಂತೆ ಎಚ್ಚರಿಕ

Last Updated : Nov 15, 2020, 04:17 PM IST
  • ಭಾರತವು ಚೀನಾಗೆ ತಾಕೀತು ಮಾಡುವ ಮೂಲಕ ಗಡಿ ಪ್ರದೇಶಗಳಲ್ಲಿ ಪದೇ ಪದೇ ತಗಾದೆ ತೆಗೆಯದಂತೆ ಎಚ್ಚರಿಕೆ
  • ನಿನ್ನೆ ನಡೆದ 15ನೆ ಪೂರ್ವ ಏಷ್ಯಾ ಶೃಂಗಸಭೆ (EAS)ಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್
  • ಉತ್ತರ ಕಾಶ್ಮೀರದ ಮೂರು ಜಿಲ್ಲೆಗಳಲ್ಲಿ ಗುರೇಜ್ ವಲಯದಿಂದ ಉರಿ ಸೆಕ್ಟರ್‍ವರೆಗೆ ಮೊನ್ನೆ ರಾತ್ರಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ ನಿರಂತರ ಪ್ರೇರಿತ ದಾಳಿ ನಡೆಸಿ ಐವರು ಯೋಧರು ಸೇರಿದಂತೆ 11 ಜನರನ್ನು ಹತ್ಯೆ
ಭಾರತದ ತಂಟೆಗೆ ಬಂದ್ರೆ ಸುಮ್ಮನಿರಲ್ಲ- ಚೀನಾಗೆ ಖಡಕ್ ಎಚ್ಚರಿಕೆ title=

ನವದೆಹಲಿ: ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಬೇಕೆಂದು ಭಾರತವು ಚೀನಾಗೆ ತಾಕೀತು ಮಾಡುವ ಮೂಲಕ ಗಡಿ ಪ್ರದೇಶಗಳಲ್ಲಿ ಪದೇ ಪದೇ ತಗಾದೆ ತೆಗೆಯದಂತೆ ಎಚ್ಚರಿಕೆ ನೀಡಿದೆ. ಇಂಡೋ ಪಾಕ್ ಗಡಿಯಲ್ಲಿ ನಿರಂತರ ಕದನ ವಿರಾಮ ಒಪ್ಪಂದಗಳನ್ನು ಉಲ್ಲಂಘಿಸಿ ಅಪ್ರಚೋದಿತ ದಾಳಿ ನಡೆಸಿ ಯೋಧರು ಮತ್ತು ನಾಗರಿಕರನ್ನು ಹತ್ಯೆ ಮಾಡುತ್ತಿರುವ ಪಾಕಿಸ್ತಾನಕ್ಕೆ ಭಾರತವು ಗಂಭೀರ ಎಚ್ಚರಿಕೆ ನೀಡಿರುವ ಬೆನ್ನಲ್ಲೇ ಚೀನಾಗೂ ಗಡಿ ತಂಟೆಗೆ ಬರದಂತೆ ಖಡಕ್ ಎಚ್ಚರಿಕೆ ರವಾನಿಸಿದೆ.

ನಿನ್ನೆ ನಡೆದ 15ನೆ ಪೂರ್ವ ಏಷ್ಯಾ ಶೃಂಗಸಭೆ (EAS)ಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್(S Jaishankar) ಮಾತನಾಡಿ, ಇಂಡೋ ಪೆಸಿಫಿಕ್ ಪ್ರಾಂತ್ಯದಲ್ಲಿ ಚೀನಾ ಪದೇ ಪದೇ ಉಪಟಳ ನೀಡುತ್ತಿರುವ ವಿದ್ಯಮಾನಗಳನ್ನು ಪ್ರಸ್ತಾಪಿಸಿದರು.

7th Pay Commission: ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರ DA ಹೆಚ್ಚಳ ಯಾವಾಗ? ಇಲ್ಲಿದೆ ಉತ್ತರ

ಗಡಿ ಭಾಗಗಳು ಮತ್ತು ಸೂಕ್ಷ್ಮ ಸ್ಥಳಗಳಲ್ಲಿ ಪದೇ ಪದೇ ಘರ್ಷಣೆ ಮತ್ತು ಬಿಕ್ಕಟ್ಟುಗಳಿಂದ ಶಾಂತಿ-ಸೌಹಾರ್ದಯುತ ವಾತಾವರಣ ಹದಗೆಡುತ್ತದೆ. ಇದರಿಂದ ಇತ್ಯರ್ಥ ಮಾತುಕತೆಯ ಹಳಿ ತಪ್ಪುತ್ತದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಚೀನಾಗೆ ಸಲಹೆ ಮಾಡಿದರು.

ಏಳನೇ ಬಾರಿಗೆ ಮತ್ತೆ ನಿತೀಶ್​ ಕುಮಾರ್​ಗೆ ಒಲಿದ ಬಿಹಾರ ಸಿಎಂ ಪಟ್ಟ..!

ಇಂಡೋ ಪೆಸಿಫಿಕ್ ಪ್ರಾಂತ್ಯದ ದಕ್ಷಿಣ ಚೀನಾ ಸಮುದ್ರದ ಕಡೆಯಿಂದ ಜಲ ಸರಹದ್ದು ಪ್ರದೇಶಗಳಲ್ಲಿ ಉದ್ವಿಗ್ನ ವಾತಾವರಣ ಹೆಚ್ಚಾಗುತ್ತಿದೆ. ಈ ಬಗ್ಗೆ ಆಸಿಯಾನ್ ರಾಷ್ಟ್ರಗಳು ಸಹ ತೀವ್ರ ಕಳವಳ ವ್ಯಕ್ತಪಡಿಸಿವೆ. ಇದಕ್ಕೆ ಕಾರಣರಾದವರು ಈ ಸಂಗತಿಗಳನ್ನು ಮನದಟ್ಟು ಮಾಡಿಕೊಳ್ಳಬೇಕು.

Bank Holidays: ಬ್ಯಾಂಕ್ ಗೆ ಹೋಗುವ ಮೊದಲು ಈ ರಜಾ ಪಟ್ಟಿ ಪರಿಶೀಲಿಸಲು ಮರೆಯದಿರಿ

ಪ್ರಾದೇಶಿಕ ಸಮಗ್ರತೆ, ಸಾರ್ವಭೌಮತೆ ಮತ್ತು ಗಡಿ ಭಾಗಗಳ ಒಪ್ಪಂದಗಳನ್ನು ಗೌರವಿಸಬೇಕು ಎಂದು ಚೀನಾಗೆ ತಾಕೀತು ಮಾಡಿದರು. ಉತ್ತರ ಕಾಶ್ಮೀರದ ಮೂರು ಜಿಲ್ಲೆಗಳಲ್ಲಿ ಗುರೇಜ್ ವಲಯದಿಂದ ಉರಿ ಸೆಕ್ಟರ್‍ವರೆಗೆ ಮೊನ್ನೆ ರಾತ್ರಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ ನಿರಂತರ ಪ್ರೇರಿತ ದಾಳಿ ನಡೆಸಿ ಐವರು ಯೋಧರು ಸೇರಿದಂತೆ 11 ಜನರನ್ನು ಹತ್ಯೆ ಮಾಡಿದ ಘಟನೆಯನ್ನು ಖಂಡಿಸಿರುವ ಭಾರತ ಪಾಕಿಸ್ತಾನಕ್ಕೆ ಈ ಬಗ್ಗೆ ತನ್ನ ಪ್ರತಿಭಟನೆಯನ್ನು ಸಲ್ಲಿಸಿ ಬಿಸಿ ಮುಟ್ಟಿಸಿದೆ. ಇದರ ಬೆನ್ನಲ್ಲೇ ಈಗ ಭಾರತವು ಚೀನಾಗೂ ಸಹ ಗಡಿ ತಂಟೆಗೆ ಬರದಂತೆ ಗಂಭೀರ ತಾಕೀತು ಮಾಡಿದೆ.

Trending News