ಏಳನೇ ಬಾರಿಗೆ ಮತ್ತೆ ನಿತೀಶ್​ ಕುಮಾರ್​ಗೆ ಒಲಿದ ಬಿಹಾರ ಸಿಎಂ ಪಟ್ಟ..!

ನಿತೀಶ್​ ಕುಮಾರ್​ಗೆ ಮತ್ತೆ ಸಿಎಂ ಪಟ್ಟ ಕಟ್ಟಲು ಎನ್​ಡಿಎ ಸಭೆಯಲ್ಲಿ ಮಹತ್ವದ ನಿರ್ಧಾರ ಇಂದು ನಡೆದ ಎನ್​ಡಿಎ ಸಭೆಯಲ್ಲಿ ಬಿಹಾರ ಸಿಎಂ ಸ್ಥಾನಕ್ಕೆ ನಿತೀಶ್​ ಕುಮಾರ್​ ಆಯ್ಕೆ ಶುಕ್ರವಾರವಷ್ಟೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ನಿತೀಶ್​ಕುಮಾರ್

Last Updated : Nov 15, 2020, 02:07 PM IST
  • ನಿತೀಶ್​ ಕುಮಾರ್​ಗೆ ಮತ್ತೆ ಸಿಎಂ ಪಟ್ಟ ಕಟ್ಟಲು ಎನ್​ಡಿಎ ಸಭೆಯಲ್ಲಿ ಮಹತ್ವದ ನಿರ್ಧಾರ
ಏಳನೇ ಬಾರಿಗೆ ಮತ್ತೆ ನಿತೀಶ್​ ಕುಮಾರ್​ಗೆ ಒಲಿದ ಬಿಹಾರ ಸಿಎಂ ಪಟ್ಟ..!

ಪಟನಾ: ಬಿಹಾರ ಮುಖ್ಯಮಂತ್ರಿ ಪಟ್ಟಕ್ಕೆ ನಿತೀಶ್​ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ.

ಬಹಳ ಕುತೂಹಲ ಕೆರಳಿಸಿದ್ದ ಬಿಹಾರ(Bihara) ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಎನ್​ಡಿಎ ಸರ್ಕಾರಕ್ಕೆ ಅಧಿಕಾರ ಸಿಕ್ಕಿದ್ದು, ನಿತೀಶ್​ ಕುಮಾರ್​ಗೆ ಮತ್ತೆ ಸಿಎಂ ಪಟ್ಟ ಕಟ್ಟಲು ಎನ್​ಡಿಎ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

Bank Holidays: ಬ್ಯಾಂಕ್ ಗೆ ಹೋಗುವ ಮೊದಲು ಈ ರಜಾ ಪಟ್ಟಿ ಪರಿಶೀಲಿಸಲು ಮರೆಯದಿರಿ

ಇಂದು ನಡೆದ ಎನ್​ಡಿಎ ಸಭೆಯಲ್ಲಿ ಬಿಹಾರ ಸಿಎಂ ಸ್ಥಾನಕ್ಕೆ ನಿತೀಶ್​ ಕುಮಾರ್​ ಅವರನ್ನು ಆಯ್ಕೆ ಮಾಡಲಾಗಿದೆ. ಜೆಡಿಯು ಕಡಿಮೆ ಸ್ಥಾನ ಗೆದ್ದರೂ ನಿತೀಶ್​ಗೆ ನಾಲ್ಕನೇ ಬಾರಿ ಮುಖ್ಯಮಂತ್ರಿ ಆಗುವ ಅವಕಾಶ ಒಲಿದಿದೆ.

ಬಿಹಾರ ಸಿಎಂ ಆಯ್ಕೆಗೆ ಇಂದು NDA ಸಭೆ: ನಿರ್ಧಾರವಾಗುತ್ತಾ ನಿತೀಶ್ ಕುಮಾರ್ ಭವಿಷ್ಯ

ಜಿದ್ದಾಜಿದ್ದಿನ ಹೋರಾಟದಲ್ಲಿ ಮಹಾಘಟಬಂಧನ್​ ವಿರುದ್ಧ ಎನ್​ಡಿಎ(ಬಿಜೆಪಿ, ಜೆಡಿಯು, ಎಚ್​ಎಎಂ ಹಾಗೂ ವಿಐಪಿ ಪಕ್ಷಗಳು) ಸ್ಪಷ್ಟ ಬಹುಮತ ಪಡೆದಿದೆ. ಪ್ರತಿ ಹಂತದಲ್ಲೂ ಕುತೂಹಲ ಸೃಷ್ಟಿಸಿದ್ದ ಪೈಪೋಟಿಯಲ್ಲಿ ಎನ್‍ಡಿಎಗೆ ರೋಚಕ ಗೆಲುವು ಸಿಕ್ಕಿದೆ. ಶುಕ್ರವಾರವಷ್ಟೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ನಿತೀಶ್​ಕುಮಾರ್​, ಹೊಸ ಎನ್​ಡಿಎ ಸರ್ಕಾರ ಆಡಳಿತ ಚುಕ್ಕಾಣಿ ಹಿಡಿಯುವ ತನಕ ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರಿದಿದ್ದರು.

ರಾಹುಲ್ ಗಾಂಧಿ ಕುರಿತ ಬರಾಕ್ ಒಬಾಮಾ ಅವರ ಹೇಳಿಕೆ ಅಸಹ್ಯಕರ ಎಂದ ಶಿವಸೇನೆ

ಇದೀಗ ಎನ್​ಡಿಎ ಸಭೆಯಲ್ಲಿ ಮುಖ್ಯಮಂತ್ರಿ ಯಾರೆಂಬ ನಿರ್ಣಯ ಹೊರಬಿದ್ದಿದ್ದು, ನಿತೀಶ್​ ಅವರಿಗೆ ಸಿಎಂ ಗಾದಿ ಒಲಿದಿದೆ. ಸೋಮವಾರ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯುವ ಸಾಧ್ಯತೆ ಇದೆ.

More Stories

Trending News