ಶ್ವೇತ ಧ್ವಜದೊಂದಿಗೆ ಬಂದು ಶವಗಳನ್ನು ತೆಗೆದುಕೊಂಡು ಹೋಗಲು ಪಾಕ್ ಗೆ ಭಾರತ ಸೂಚನೆ

ಪಾಕಿಸ್ತಾನದ ಗಡಿ ಕಾರ್ಯಾಚರಣೆ ತಂಡದ (ಬಿಎಟಿ) ಒಳನುಸುಳುವಿಕೆ ಪ್ರಯತ್ನವನ್ನು ವಿಫಲಗೊಳಿಸಿದ ನಂತರ ಜುಲೈ 31 ರಂದು ದಾಳಿಯಲ್ಲಿ ಮೃತಪಟ್ಟಿದ್ದ ಬಿಎಟಿ ಸಿಬ್ಬಂದಿ ಮತ್ತು ಭಯೋತ್ಪಾದಕರ ಶವಗಳನ್ನು ತೆಗೆದುಕೊಳ್ಳುವಂತೆ ಭಾರತೀಯ ಸೇನೆಯು ನೆರೆಯ ದೇಶವನ್ನು ಕೇಳಿದೆ. 

Last Updated : Aug 4, 2019, 10:36 AM IST
ಶ್ವೇತ ಧ್ವಜದೊಂದಿಗೆ ಬಂದು ಶವಗಳನ್ನು ತೆಗೆದುಕೊಂಡು ಹೋಗಲು ಪಾಕ್ ಗೆ ಭಾರತ ಸೂಚನೆ  title=
ಸಾಂದರ್ಭಿಕ ಚಿತ್ರ

ನವದೆಹಲಿ: ಪಾಕಿಸ್ತಾನದ ಗಡಿ ಕಾರ್ಯಾಚರಣೆ ತಂಡದ (ಬಿಎಟಿ) ಒಳನುಸುಳುವಿಕೆ ಪ್ರಯತ್ನವನ್ನು ವಿಫಲಗೊಳಿಸಿದ ನಂತರ ಜುಲೈ 31 ರಂದು ದಾಳಿಯಲ್ಲಿ ಮೃತಪಟ್ಟಿದ್ದ ಬಿಎಟಿ ಸಿಬ್ಬಂದಿ ಮತ್ತು ಭಯೋತ್ಪಾದಕರ ಶವಗಳನ್ನು ತೆಗೆದುಕೊಳ್ಳುವಂತೆ ಭಾರತೀಯ ಸೇನೆಯು ನೆರೆಯ ದೇಶವನ್ನು ಕೇಳಿದೆ. 

ಎಎನ್‌ಐ ಸುದ್ದಿ ಸಂಸ್ಥೆ ಪ್ರಕಾರ ಐದರಿಂದ ಏಳು ಬಿಎಟಿ ಸಿಬ್ಬಂದಿ ಒಳನುಸುಳುವಿಕೆ ವೇಳೆ ಹತ್ಯೆಯಾದರು ಎನ್ನಲಾಗಿದೆ. ಪಾಕಿಸ್ತಾನ ಸೇನೆಗೆ ಬಿಳಿ ಧ್ವಜದೊಂದಿಗೆ ಬಂದು ಶವಗಳನ್ನು ಸ್ವಾಧೀನಪಡಿಸಿಕೊಳ್ಳಲು ಭಾರತ ಸೂಚಿಸಿದೆ. ಆದರೆ, ಪಾಕಿಸ್ತಾನದ ಅಧಿಕಾರಿಗಳು ಭಾರತೀಯ ಸೇನೆಯ ಪ್ರಸ್ತಾಪಕ್ಕೆ ಇನ್ನೂ ಸ್ಪಂದಿಸಿಲ್ಲ ಎನ್ನಲಾಗಿದೆ.

ಜುಲೈ 31 ಮತ್ತು ಆಗಸ್ಟ್ 1 ರ ಮಧ್ಯರಾತ್ರಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಕೇರನ್ ಸೆಕ್ಟರ್‌ನಲ್ಲಿ ಭಾರತೀಯ ಸೇನೆಯು ಒಳನುಸುಳುವಿಕೆ ಪ್ರಯತ್ನವನ್ನು ವಿಫಲಗೊಳಿಸಿತು.  ಈ ವೇಳೆ ಪಾಕಿಸ್ತಾನದ ಸಿಬ್ಬಂದಿಗೆ ಭಾರಿ ಪ್ರಮಾಣದ ಸಾವು ನೋವುಗಳನ್ನು ಸಂಭವಿಸಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ ಭಾರತದ ಈ ಪ್ರತೀಕಾರದ ಗುಂಡಿನ ದಾಳಿಯಲ್ಲಿ ಪಾಕಿಸ್ತಾನದ ವಿಶೇಷ ಸೇವೆಗಳ ಗುಂಪಿನ ನಾಲ್ಕು ಕಮಾಂಡೋ ಸಾವನ್ನಪ್ಪಿದ್ದಾರೆ. ಹತ್ಯೆಗೀಡಾದವರಲ್ಲಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಸಕ್ರಿಯವಾಗಿದ್ದ ಭಯೋತ್ಪಾದಕರು ಕೂಡ ಸೇರಬಹುದು ಎಂದು ಮೂಲಗಳು ತಿಳಿಸಿವೆ.

"ಸುಮಾರು 5-7 ಪಾಕಿಸ್ತಾನಿ ಸೇನಾ ನಿಯಂತ್ರಕರು ಅಥವಾ ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲಾಗಿದೆ ಮತ್ತು ಅವರ ಶವಗಳನ್ನು ನಿಯಂತ್ರಣ ರೇಖೆಯಲ್ಲಿ ಇಡಲಾಗಿದೆ.ನಿಯಂತ್ರಣ ರೇಖೆಯ ಉದ್ದಕ್ಕೂ ಎಲ್ಲಾ ದುಷ್ಕೃತ್ಯಗಳಿಗೆ ಭದ್ರತಾ ಪಡೆಗಳು ಪ್ರತಿಕ್ರಿಯಿಸುವುದನ್ನು ಮುಂದುವರಿಸುತ್ತವೆ" ಎಂದು ಉತ್ತರ ಕಮಾಂಡ್ ಹೇಳಿಕೆಯಲ್ಲಿ ತಿಳಿಸಿದೆ.

Trending News