ನವದೆಹಲಿ: ರಾಹುಲ್ ದ್ರಾವಿಡ್ ರವರ ಮಾರ್ಗದರ್ಶನದಲ್ಲಿ ಯಶಸ್ಸಿನ ದಾಪುಗಾಲು ಇಟ್ಟಿರುವ ಭಾರತ ತಂಡವು ಈಗ ಮತ್ತೊಮ್ಮೆ ಅಂಡರ್-19 ವಿಶ್ವಕಪ್ ಅನ್ನು ಎತ್ತಿ ಹಿಡಿಯುವ ಹುಮ್ಮಸ್ಸಿನಲ್ಲಿದೆ.
ಇಲ್ಲಿಯವರೆಗೂ ಮೂರು ಕಿರಿಯರ ವಿಶ್ವಕಪ್ ಗೆದ್ದಿರುವ ಭಾರತ ತಂಡವು ಈಗ ಮತ್ತ ನಾಲ್ಕನೇ ಟ್ರೋಪಿ ಎತ್ತಿ ಹಿಡಿಯಲು ಸಜ್ಜಾಗಿದೆ. ನ್ಯೂಜಿಲ್ಯಾಂಡ್ ನ ಮೌಂಟ್ ಮೌಂಗಾನೂದಲ್ಲಿ ನಡೆಯುವ ಫೈನಲ್ ಪಂದ್ಯದಲ್ಲಿ ಬಲಿಷ್ಠ ಆಷ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಅಂಡರ್ 19 ವಿಶ್ವಕಪ್ ಇತಿಹಾಸದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಎರಡು ತಂಡಗಳು ಮೂರು ಭಾರಿ ವಿಶ್ವಕಪ್ ಟ್ರೋಪಿಯನ್ನು ಎತ್ತಿ ಹಿಡಿದಿವೆ.
ಈ ಹಿಂದೆ ಭಾರತದ ಕ್ರಿಕೆಟ್ ತಂಡವು ಮೊಹಮ್ಮದ್ ಕೈಫ್ (2002), ವಿರಾಟ್ ಕೊಹ್ಲಿ (2008) ಮತ್ತು ಉನ್ಮುಕ್ತ್ ಚಂದ್ (2012) ರವರ ನೇತೃತ್ವದಲ್ಲಿ 19 ವಿಶ್ವಕಪ್ ಟ್ರೋಪಿಯನ್ನು ಗೆದ್ದುಕೊಂಡಿತ್ತು. ಮತ್ತೊಮ್ಮೆ ಪೃಥ್ವಿ ಶಾ ರವರ ನೇತೃತ್ವದಲ್ಲಿ ಟ್ರೋಪಿ ಮುಡಿಗೆರಿಸಿಕೊಳ್ಳುವ ಉತ್ಸಾಹದಲ್ಲಿದೆ.