ನವದೆಹಲಿ: ಕೇಂದ್ರ ಸರ್ಕಾರವು ಉಳಿತಾಯ ಠೇವಣಿಯ ಮೇಲಿನ ಬಡ್ಡಿಯನ್ನು ಈಗ ವಾರ್ಷಿಕವಾಗಿ ಶೇಕಡ 4 ರಿಂದ 3.5 ಕ್ಕೆ ಇಳಿಸುವುದಾಗಿ ಘೋಷಿಸಿದ್ದರಿಂದಾಗಿ ಈಗ ಸಣ್ಣ ಉಳಿತಾಯದ ಬಡ್ಡಿದರಗಳು ಬುಧವಾರ ಭಾರಿ ಕಡಿತಗೊಳ್ಳಲಿವೆ.ಸಾರ್ವಜನಿಕ ಭವಿಷ್ಯ ನಿಧಿ ಅಥವಾ ಪಿಪಿಎಫ್ ಶೇಕಡಾ 7.1 ರಿಂದ 6.4 ಕ್ಕೆ ಕಡಿತಗೊಳಿಸಲಾಗಿದೆ.
ಇದನ್ನೂ ಓದಿ: Fixed Deposit ಮೇಲೆ ಹೆಚ್ಚಿನ ಬಡ್ಡಿ ಪಾವತಿಸುವ ಬ್ಯಾಂಕುಗಳ ಬಗ್ಗೆ ಇಲ್ಲಿದೆ ಮಾಹಿತಿ
ಏಪ್ರಿಲ್ 1 ರಿಂದ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್‌ಎಸ್‌ಸಿ) ಶೇ 5.9 ರಷ್ಟು ಬಡ್ಡಿ ಪಡೆಯಲಿದ್ದು, ಸುಕನ್ಯಾ ಸಮೃದ್ಧಿ ಯೋಜನೆ ಶೇ 6.9 ರಷ್ಟು ಬಡ್ಡಿದರ (Interest rates) ವನ್ನು ಪಡೆಯಲಿದೆ.ಐದು ವರ್ಷದ ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಬಡ್ಡಿದರವನ್ನು ಶೇ 6.5 ಕ್ಕೆ ಇಳಿಸಲಾಗಿದೆ. ಹಿರಿಯ ನಾಗರಿಕರ ಯೋಜನೆಯ ಬಡ್ಡಿಯನ್ನು ತ್ರೈಮಾಸಿಕವಾಗಿ ಪಾವತಿಸಲಾಗುತ್ತದೆ. ಕಿಸಾನ್ ವಿಕಾಸ್ ಪತ್ರ (ಕೆವಿಪಿ) ಮೇಲಿನ ಬಡ್ಡಿದರವನ್ನು ಶೇಕಡ 6.2 ಕ್ಕೆ ಇಳಿಸಲಾಗಿದೆ.ಏಪ್ರಿಲ್ 1 ರಿಂದ ಸರ್ಕಾರವು ಸಣ್ಣ ಉಳಿತಾಯದ ಮೇಲಿನ ಬಡ್ಡಿದರಗಳನ್ನು ಕಡಿತಗೊಳಿಸುತ್ತದೆ.
ಇದನ್ನೂ ಓದಿ: New PPF Investment Rule - PPF ಸೇರಿದಂತೆ ಈ ಯೋಜನೆಗಳಿಂದ ಹಣ ಹಿಂಪಡೆದರೆ, TDS ನಿಂದ ಶೇ.5 ರಷ್ಟು ಕಡಿತವಾಗಲಿದೆ
ಕಳೆದ ಒಂದು ವರ್ಷದಲ್ಲಿ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳನ್ನು ಸರ್ಕಾರ ಕಡಿತಗೊಳಿಸುತ್ತಿರುವುದು ಇದು ಎರಡನೇ ಬಾರಿ. 2020-21ರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ, ಸರ್ಕಾರವು ಸಣ್ಣ ಉಳಿತಾಯ ಯೋಜನೆಗಳ ದರವನ್ನು 70-140 ಬಿಪಿಎಸ್ (100 ಬಿಪಿಎಸ್ = 1 ಶೇಕಡಾ) ಕಡಿತಗೊಳಿಸಿತ್ತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.