SBI, ICICI ಬ್ಯಾಂಕ್ ಸೇರಿದಂತೆ 6 ಬ್ಯಾಂಕ್ ಕಾರ್ಡ್ಗಳ ಮೂಲಕ IRCTC ಬುಕಿಂಗ್ ಸಾಧ್ಯವಿಲ್ಲ

ಎಸ್ ಬಿ ಐ ಮತ್ತು ಐಸಿಐಸಿಐ ಸೇರಿದಂತೆ ಇತರೆ ಆರು ಬ್ಯಾಂಕ್ ಕಾರ್ಡ್ ಮೂಲಕ IRCTC ವೆಬ್ಸೈಟ್ ನಲ್ಲಿ ರೈಲ್ವೆ ಟಿಕೇಟ್ ಬುಕ್ ಮಾಡುವುದನ್ನು IRCTC ನಿಷೇಧಿಸಿದೆ.

Last Updated : Sep 22, 2017, 04:13 PM IST
SBI, ICICI ಬ್ಯಾಂಕ್ ಸೇರಿದಂತೆ 6 ಬ್ಯಾಂಕ್ ಕಾರ್ಡ್ಗಳ ಮೂಲಕ IRCTC ಬುಕಿಂಗ್ ಸಾಧ್ಯವಿಲ್ಲ title=

ನವ ದೆಹಲಿ:  IRCTC ವೆಬ್ಸೈಟ್ ನಲ್ಲಿ ಎಸ್ ಬಿ ಐ ಮತ್ತು ಐಸಿಐಸಿಐ ಸೇರಿದಂತೆ ಇತರೆ ಆರು ಬ್ಯಾಂಕ್ ಕಾರ್ಡ್ ಗಳ ಮೂಲಕ ಟಿಕೆಟ್ ಬುಕ್ ಮಾಡಲು ಸಾಧ್ಯವಿಲ್ಲ. ಈ ಬ್ಯಾಂಕ್ ಗಳ ಕಾರ್ಡ್ ಗಳನ್ನು IRCTC ನಿಷೇಧಿಸಿದೆ. ಇನ್ನು ಮುಂದೆ ಓವರ್ಸೀಸ್ ಬ್ಯಾಂಕ್, ಕೆನರಾ ಬ್ಯಾಂಕ್, ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಹೆಚ್ಡಿಎಫ್ಸಿ ಹಾಗೂ ಆಕ್ಸಿಸ್ ಬ್ಯಾಂಕ್ ಕಾರ್ಡ್ ಗಳ ಮೂಲಕ ಮಾತ್ರ ಆನ್ಲೈನ್ ಟಿಕೇಟ್ ಬುಕ್ ಮಾಡಲು ಸಾಧ್ಯ ಎಂದು ವರದಿಗಳಿಂದ ತಿಳಿದುಬಂದಿದೆ. 

ಕಾರ್ಡ್ ಪೇಮೆಂಟ್ ಮಾಡುವ ವೇಳೆ ವಿಧಿಸಲಾಗುವ ಸವಲತ್ತು ಶುಲ್ಕ ವಿಚಾರವಾಗಿ IRCTC ಮತ್ತು ಬ್ಯಾಂಕ್ಗಳ ನಡುವೆ ಕಿತ್ತಾಟ ಉಂಟಾಗಿದ್ದು 6 ಬ್ಯಾಂಕ್ ಗಳ ಡೆಬಿಟ್ ಕಾರ್ಡ್ ಪೇಮೆಂಟ್ ಗೇಟ್-ವೇ ಗೆ ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (IRCTC) ನಿಷೇಧ ವಿಧಿಸಿದೆ.

ಆನ್ಲೈನ್ ಮೂಲಕ ಟಿಕೆಟ್ ಖರೀದಿ ಮಾಡುವ ಗ್ರಾಹಕರಿಗೆ ವಿಧಿಸಲಾಗುತ್ತಿದ್ದ ಸವಲತ್ತು ಶುಲ್ಕದ ಅರ್ಧ ಭಾಗವನ್ನು ಹಂಚಿಕೊಳ್ಳುವಂತೆ ಬ್ಯಾಂಕ್ ಗಳಿಗೆ IRCTC ನಿರಂತರವಾಗಿ ಕೇಳುತ್ತಿತ್ತು. ಆದರೆ ಬ್ಯಾಂಕ್ಗಳು  ಶುಲ್ಕವನ್ನು ಹಂಚಿಕೊಳ್ಳಲು ಸಿದ್ಧವಿರಲಿಲ್ಲ. ಈ ಹಿನ್ನೆಲೆಯಲ್ಲಿ 6 ಬ್ಯಾಂಕ್ಗಳ ಪೇಮೆಂಟ್ ಗೇಟ್-ವೇ ಯನ್ನು IRCTC ನಿಷೇಧಿಸಿದೆ.

ಭಾರತೀಯ ಬ್ಯಾಂಕ್ಗಳ  ಅಸೋಸಿಯೇಶನ್ ಈ ವಿಷಯವನ್ನು ಬಗೆಹರಿಸುವ ದೃಷ್ಟಿಯಿಂದ ಭಾರತೀಯ ರೈಲ್ವೆ ಮತ್ತು IRCTC ಯೊಂದಿಗೆ ಚರ್ಚೆ ನಡೆಸುತ್ತಿದೆ ಎಂದು ವರದಿಗಳಿಂದ ತಿಳಿದುಬಂದಿದೆ.

Trending News