ISRO Recruitment 2021: 10 ಮತ್ತು 12ನೇ ತರಗತಿ ಪಾಸಾದವರಿಗೆ ISROದಲ್ಲಿ ಕೆಲಸ ಮಾಡುವ ಸುವರ್ಣಾವಕಾಶ ; ಅರ್ಜಿ ಸಲ್ಲಿಸಲು ನಾಳೆಯೇ ಕೊನೆ ದಿನ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿ  ಫೈರ್‌ಮ್ಯಾನ್ ಎ, ಫಾರ್ಮಸಿಸ್ಟ್ ಎ ಮತ್ತು ಲ್ಯಾಬ್ ಟೆಕ್ನಿಷಿಯನ್ ಎ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

Written by - Ranjitha R K | Last Updated : Apr 4, 2021, 03:36 PM IST
  • 13 ಹುದ್ದೆಗಳಿಗೆ ISRO ಅರ್ಜಿ ಆಹ್ವಾನ
  • ಅರ್ಜಿ ಸಲ್ಲಿಸಲು ನಾಳೆಯೇ ಕೊನೆಯ ದಿನ
  • ಇಸ್ರೋ ನೇಮಕಾತಿ 2021 ರ ಅರ್ಹತಾ ಮಾನದಂಡ
 ISRO Recruitment 2021: 10 ಮತ್ತು 12ನೇ ತರಗತಿ ಪಾಸಾದವರಿಗೆ ISROದಲ್ಲಿ ಕೆಲಸ ಮಾಡುವ ಸುವರ್ಣಾವಕಾಶ ; ಅರ್ಜಿ ಸಲ್ಲಿಸಲು ನಾಳೆಯೇ ಕೊನೆ ದಿನ  title=
13 ಹುದ್ದೆಗಳಿಗೆ ISRO ಅರ್ಜಿ ಆಹ್ವಾನ (photo India.com)

ISRO Recruitment 2021: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿ  (VSSC) ಫೈರ್‌ಮ್ಯಾನ್ ಎ, ಫಾರ್ಮಸಿಸ್ಟ್ ಎ ಮತ್ತು ಲ್ಯಾಬ್ ಟೆಕ್ನಿಷಿಯನ್ ಎ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ನಾಳೆ ಕೊನೆಯ ದಿನಾಂಕ. ಈ ಹುದ್ದೆಗಳಿಗೆ ಇನ್ನೂ ಅರ್ಜಿ ಸಲ್ಲಿಸದ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಾಳೆಯೊಳಗೆ ಅರ್ಜಿ ಸಲ್ಲಿಸಬಹುದು .

ಆಸಕ್ತರು ಇಸ್ರೋ (ISRO) ಅಧಿಕೃತ ವೆಬ್‌ಸೈಟ್‌  vssc.gov.in ಅಥವಾ isro.gov.in ಗೆ ಭೇಟಿ ನೀಡಿ ನಾಳೆ ಅಂದರೆ 05 ಏಪ್ರಿಲ್ 2021 ರೊಳಗೆ ಅರ್ಜಿ ಸಲ್ಲಿಸಬಹುದು. ಇದಲ್ಲದೆ,  https://rmt.vssc.gov.in/RMT315/applyV1.jsp ಲಿಂಕ್ ಅನ್ನು ಕ್ಲಿಕ್ ಮಾಡುವುದರ ಮೂಲಕವೂ ಅಭ್ಯರ್ಥಿಗಳು ಈ ಹುದ್ದೆಗಳಿಗೆ  ನೇರವಾಗಿ ಅರ್ಜಿ ಸಲ್ಲಿಸಬಹುದು. ಅಲ್ಲದೆ, ttps://rmt.vssc.gov.in/RMT315/advt315.html, ಲಿಂಕ್ ಕ್ಲಿಕ್ ಮಾಡುವ ಮೂಲಕ ಅಧಿಕೃತ ಅಧಿಸೂಚನೆಯನ್ನು ನೋಡಬಹುದು. ಈ ನೇಮಕಾತಿ ಪ್ರಕ್ರಿಯೆಯಡಿ ಒಟ್ಟು 13 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.  

ಇದನ್ನೂ ಓದಿ : Chhattisgarh Naxal Attack Latest Updates: ಬಿಜಾಪುರ್-ಸುಕ್ಮಾ ಎನ್ಕೌಂಟರ್ ನಲ್ಲಿ ಹುತಾತ್ಮರಾದ ಯೋಧರ ಸಂಖ್ಯೆ 22ಕ್ಕೆ ಏರಿಕೆ

ಇಸ್ರೋ ನೇಮಕಾತಿ 2021 ರ ಪ್ರಮುಖ ದಿನಾಂಕಗಳು :

ಆನ್‌ಲೈನ್ (Online)ಅರ್ಜಿ ಸಲ್ಲಿಸಲು  ಪ್ರಾರಂಭ ದಿನಾಂಕ: 22 ಮಾರ್ಚ್ 2021
ಆನ್‌ಲೈನ್ ಅರ್ಜಿ ಸಲ್ಲಿಸಲು  ಕೊನೆಯ ದಿನಾಂಕ: 05 ಏಪ್ರಿಲ್ 2021

ಇಸ್ರೋ ನೇಮಕಾತಿ 2021 ರ ಹುದ್ದೆಯ ವಿವರಗಳು:
ಫಾರ್ಮಾಸಿಸ್ಟ್ ಎ: 03 ಹುದ್ದೆಗಳು
ಲ್ಯಾಬ್ ತಂತ್ರಜ್ಞ ಎ: 02 ಹುದ್ದೆಗಳು
ಫೈರ್‌ಮ್ಯಾನ್ ಎ: 08 ಹುದ್ದೆಗಳು

ಇಸ್ರೋ ನೇಮಕಾತಿ 2021 ಗೆ ಅರ್ಹತಾ ಮಾನದಂಡ: 
ಫಾರ್ಮಸಿಸ್ಟ್ ಎ: ಅಭ್ಯರ್ಥಿಯು 10/12 ನೇ ತರಗತಿಯ ಪರೀಕ್ಷೆಯಲ್ಲಿ ಉತ್ತೀರ್ಣನಾಗಿರಬೇಕು ಮತ್ತು ಫಾರ್ಮಸಿಯಲ್ಲಿ (Pharmacy) ಪ್ರಥಮ ವಿಭಾಗದಲ್ಲಿ ಡಿಪ್ಲೊಮಾ ಪಡೆದಿರಬೇಕು.
ಲ್ಯಾಬ್ ತಂತ್ರಜ್ಞ ಎ: ಅಭ್ಯರ್ಥಿಯು 10/12 ನೇ ತರಗತಿಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞಾನದಲ್ಲಿ ಪ್ರಥಮ ವಿಭಾಗದಲ್ಲಿ ಡಿಪ್ಲೊಮಾ (Diploma) ಹೊಂದಿರಬೇಕು.
ಫೈರ್‌ಮ್ಯಾನ್ ಎ: ಅಭ್ಯರ್ಥಿಯು 10/12 ನೇ ತರಗತಿಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು ನಿಗದಿತ ದೈಹಿಕ ಸಾಮರ್ಥ್ಯ ಮತ್ತು ದೈಹಿಕ ದಕ್ಷತೆ ಪರೀಕ್ಷಾ ಮಾನದಂಡಗಳನ್ನು ಪೂರೈಸಬೇಕು.

ಇದನ್ನೂ ಓದಿ Corona ನಿಯಂತ್ರಣ ಹೇಗೆ? ಪ್ರಧಾನಿ ಮೋದಿಯಿಂದ ಉನ್ನತ ಮಟ್ಟದ ಸಭೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News