Vastu Tips : ಅಡುಗೆಗೆ ಪರಿಮಳವನ್ನು ಸೇರಿಸಲು ಮತ್ತು ದೇಹವನ್ನು ಆರೋಗ್ಯವಾಗಿಡಲು ಬೆಳ್ಳುಳ್ಳಿಯನ್ನು ಅಡುಗೆಮನೆಯಲ್ಲಿ ಬಳಸಲಾಗುತ್ತದೆ, ಏಕೆಂದರೆ ಇದು ಔಷಧೀಯ ಗುಣಗಳಿಂದ ಕೂಡಿದೆ, ಆದರೆ ಇದನ್ನು ನಿಮ್ಮ ದಿಂಬಿನ ಕೆಳಗೆ ಇಡುವುದರಿಂದ ಕೆಲವು ಪ್ರಯೋಜನಗಳಿವೆ.. ಬನ್ನಿ ಈ ಕುರಿತು ತಿಳಿಯೋಣ..
ಬೆಳ್ಳುಳ್ಳಿ ಅಡುಗೆಮನೆಯಲ್ಲಿ ಬಳಸುವ ಪ್ರಮುಖ ಪದಾರ್ಥವಾಗಿದೆ. ಬಹುತೇಕ ಎಲ್ಲರ ಮನೆಯಲ್ಲಿ ಬೆಳ್ಳುಳ್ಳಿ ಇರುತ್ತದೆ. ಬೆಳ್ಳುಳ್ಳಿಯು ಹಲವಾರು ಔಷಧೀಯ ಗುಣಗಳಿಂದ ಕೂಡಿದ್ದು ನಮ್ಮನ್ನು ರೋಗಗಳಿಂದ ರಕ್ಷಿಸುತ್ತದೆ. ಇಂದಿಗೂ ಹಲವಾರು ಔಷಧೀಯ ಉದ್ದೇಶಗಳಿಗೆ ಬೆಳ್ಳುಳ್ಳಿಯನ್ನು ಬಳಸುತ್ತಿರುವುದಕ್ಕೆ ಇದೇ ಕಾರಣ.
ಬೆಳ್ಳುಳ್ಳಿಯನ್ನು ದಿಂಬಿನ ಕೆಳಗೆ ಇಡುವುದರಿಂದ ಕೆಲವು ಪ್ರಯೋಜನಗಳಿವೆ ಎಂದು ನಿಮಗೆ ತಿಳಿದಿದೆಯೇ..? ಹಿಂದೂ ಧರ್ಮದಲ್ಲಿ, ಆರ್ಥಿಕ ಲಾಭಕ್ಕಾಗಿ ಮಲಗುವ ಮೊದಲು, ದಿಂಬಿನ ಕೆಳಗೆ ಕೆಲವು ವಸ್ತುಗಳನ್ನು ಇಟ್ಟುಕೊಳ್ಳುವುದು ಉತ್ತಮ ಅಂತ ಹೇಳಲಾಗುತದೆ.. ಅದರಂತೆ ಬೆಳ್ಳುಳ್ಳಿ ಕೂಡ ಪ್ರಯೋಜನಕಾರಿ ಆದರೆ ಸ್ವಲ್ಪ ವಿಭಿನ್ನ ರೀತಿಯಲ್ಲಿ. ಇದರಲ್ಲಿರುವ ಸತು ಮತ್ತು ಸಲ್ಫರ್ ನಿದ್ರಾಹೀನತೆ, ಆಯಾಸ, ಸತುವಿನ ಕೊರತೆ ಮತ್ತು ದುಃಸ್ವಪ್ನಗಳಂತಹ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಮಲಗುವ ಮುನ್ನ ಬೆಳ್ಳುಳ್ಳಿಯನ್ನು ದಿಂಬಿನ ಕೆಳಗೆ ಇಡುವುದರಿಂದ ಆಗುವ ಪ್ರಯೋಜನಗಳನ್ನು ತಿಳಿಯಿರಿ.
ಇತ್ತೀಚಿನ ದಿನಗಳಲ್ಲಿ ಅನೇಕ ಜನರು ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ. ಇದರಿಂದಾಗಿ ಅವರು ಅನೇಕ ರೀತಿಯ ರೋಗಗಳಿಗೆ ತುತ್ತಾಗುವ ಅಪಾಯವಿದೆ. ಈ ಸಮಸ್ಯೆಯಿಂದ ಬಳಲುತ್ತಿರುವವರೂ ಹೆಚ್ಚು ಒತ್ತಡಕ್ಕೆ ಒಳಗಾಗುತ್ತಾರೆ. ಇದು ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ರಾತ್ರಿಯಲ್ಲಿ ಆಗಾಗ ಏಳುವ ಜನರೂ ಇರುತ್ತಾರೆ. ಆದ್ದರಿಂದ, ಇಂತಹ ಸಮಸ್ಯೆಗಳಿರುವ ಜನರಿಗೆ ಬೆಳ್ಳುಳ್ಳಿ ತುಂಬಾ ಉಪಯುಕ್ತವಾಗಿದೆ. ನೀವು ಈ ಸಮಸ್ಯೆಯಿಂದ ಬಳಲುತ್ತಿದ್ದರೆ, ಮಲಗುವ ಮೊದಲು ನಿಮ್ಮ ದಿಂಬಿನ ಕೆಳಗೆ 1-2 ಬೆಳ್ಳುಳ್ಳಿ ಎಸಳುಗಳನ್ನು ಇಟ್ಟುಕೊಳ್ಳಿ, ಬೆಳ್ಳುಳ್ಳಿಯ ವಾಸನೆಯು ನಿಮಗೆ ಚೆನ್ನಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ.
ಬೆಳ್ಳುಳ್ಳಿಯು ಆಂಟಿವೈರಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ ಮತ್ತು ಅದರ ಪರಿಮಳವು ನಮ್ಮ ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಶೀತ ಮತ್ತು ಕೆಮ್ಮು ಮುಂತಾದ ಋತುಮಾನದ ಕಾಯಿಲೆಗಳನ್ನು ತಡೆಗಟ್ಟಲು ದಿಂಬಿನ ಕೆಳಗೆ ಬೆಳ್ಳುಳ್ಳಿ ಇಟ್ಟುಕೊಂಡು ಮಲಗಿ.
ರಾತ್ರಿ ವೇಳೆ ಸೊಳ್ಳೆಗಳು ಮತ್ತು ಕೀಟಗಳ ಕಾಟ ಹೆಚ್ಚು. ಇದರಿಂದಾಗಿ ನಿದ್ರೆಗೆ ತೊಂದರೆಯಾಗುತ್ತದೆ. ಹಾಗಾಗಿ ರಾತ್ರಿ ಮಲಗುವ ಮುನ್ನ ಬೆಳ್ಳುಳ್ಳಿಯನ್ನು ದಿಂಬಿನ ಕೆಳಗೆ ಇಟ್ಟು ಮಲಗಿದರೆ ಸೊಳ್ಳೆ, ಹುಳುಗಳ ಕಾಟ ಇರುವುದಿಲ್ಲ. ಏಕೆಂದರೆ ಸೊಳ್ಳೆಗಳು ಮತ್ತು ಹುಳುಗಳು ಬೆಳ್ಳುಳ್ಳಿಯ ಬಲವಾದ ವಾಸನೆಯನ್ನು ಇಷ್ಟಪಡುವುದಿಲ್ಲ.
ರಾತ್ರಿಯಲ್ಲಿ ನಿಮ್ಮ ದಿಂಬಿನ ಕೆಳಗೆ ಬೆಳ್ಳುಳ್ಳಿ ಇಟ್ಟು ಮಲಗುವುದರಿಂದ ಕೆಟ್ಟ ಕನಸುಗಳು ಬೀಳುವ ಸಾಧ್ಯತೆ ಕಡಿಮೆ. ಏಕೆಂದರೆ ಬೆಳ್ಳುಳ್ಳಿಗೆ ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುವ ಸಾಮರ್ಥ್ಯವಿದೆ ಎಂದು ಹೇಳಲಾಗುತ್ತದೆ. ಈ ರೀತಿಯಾಗಿ, ದಿಂಬಿನ ಕೆಳಗೆ ಬೆಳ್ಳುಳ್ಳಿಯನ್ನು ಮಲಗಿಸುವುದರಿಂದ ಧನಾತ್ಮಕ ಶಕ್ತಿಯು ಸುತ್ತಲೂ ಇರುತ್ತದೆ. ಈ ಕಾರಣದಿಂದಾಗಿ, ನೀವು ಕೆಟ್ಟ ಕನಸುಗಳು ಮತ್ತು ಭಯ ದೂರವಾಗುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆ ಆಧಾರ ಬರೆಯಲಾಗಿದೆ ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮುನ್ನ ತಜ್ಞರ ಸಲಹೆ ಪಡೆಯಬೇಕು. Zee Kannada News ಇದನ್ನು ಖಚಿತಪಡಿಸುವುದಿಲ್ಲ.