ನವದೆಹಲಿ: ಆಮ್ ಆದ್ಮಿ ಪಾರ್ಟಿ(ಎಎಪಿ) ಶಾಸಕ ನರೇಶ್ ಬಾಲ್ಯನ್ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಮುಂದುವರೆದಿದ್ದು, 2.56 ಕೋಟಿ ರೂಪಾಯಿ ಅಕ್ರಮ ಹಣ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಬಾಲ್ಯನ್ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಈ ಬಗ್ಗೆ ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದ್ದು, ಉತ್ತಮ್ ನಗರ ಶಾಸಕ ನರೇಶ್ ಬಾಲ್ಯನ್ ಕಚೇರಿ ಹಾಗೂ ಮನೆ ಮೇಲೆ ಐಟಿ ಅಧಿಕಾರಿಗಳು ಶುಕ್ರವಾರ ರಾತ್ರಿ ದಾಳಿ ನಡೆಸಿದ್ದು, ಶನಿವಾರ ಬೆಳಿಗ್ಗೆವರೆಗೂ ಪರಿಶೀಲನೆ ಮುಂದುವರೆಸಿದ್ದಾರೆ. ಏತನ್ಮಧ್ಯೆ, ಆಸ್ತಿ ವಿತರಕ ಮತ್ತು ಇಬ್ಬರನ್ನು ಐಟಿ ಅಧಿಕಾರಿಗಳು ದ್ವಾರಕಾದಲ್ಲಿ ಪ್ರಶ್ನಿಸಿದ್ದಾರೆ.
Delhi: Income-Tax raids continue at the premises of AAP MLA from Uttam Nagar, Naresh Balyan. Rs 2.56 crore in cash seized in the raids pic.twitter.com/DF5SbcXUqE
— ANI (@ANI) March 8, 2019
ಇದೇ ವೇಳೆ ಅಕ್ರಮವಾಗಿ ದೊರೆತಿರುವ ಹಣದ ಬಗ್ಗೆ ಬಾಲ್ಯನ್ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.