ಶಿವಸೇನಾಗೆ ಭಾರಿ ಹಿನ್ನೆಡೆ, ಸಿಎಂ ಏಕನಾಥ್ ಶಿಂಧೆಗೆ ಉದ್ಧವ್ ಠಾಕ್ರೆ ಸಹೋದರನ ಬೆಂಬಲ

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ನಿಜವಾದ ಶಿವಸೇನೆಯ ನಾಯಕ ಎಂಬ ಹೇಳಿಕೆಗೆ ಬುಧವಾರ ಮತ್ತೊಂದು ಬಲವಾದ ಪೆಟ್ಟು ಬಿದ್ದಿದೆ.

Written by - Zee Kannada News Desk | Last Updated : Oct 5, 2022, 09:31 PM IST
  • 'ಏಕನಾಥ್ ಒಬ್ಬಂಟಿಯಾಗಲು ಬಿಡಬೇಡಿ.
  • ನೀವೆಲ್ಲರೂ ಅವರನ್ನು ಬೆಂಬಲಿಸಬೇಕು.
  • ಶಿಂಧೆ ಬಡವರಿಗಾಗಿ ಮತ್ತು ರೈತರಿಗಾಗಿ ಕೆಲಸ ಮಾಡುತ್ತಿದ್ದಾರೆ.
ಶಿವಸೇನಾಗೆ ಭಾರಿ ಹಿನ್ನೆಡೆ,  ಸಿಎಂ ಏಕನಾಥ್ ಶಿಂಧೆಗೆ ಉದ್ಧವ್ ಠಾಕ್ರೆ ಸಹೋದರನ ಬೆಂಬಲ title=

ಮುಂಬೈ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ನಿಜವಾದ ಶಿವಸೇನೆಯ ನಾಯಕ ಎಂಬ ಹೇಳಿಕೆಗೆ ಬುಧವಾರ ಮತ್ತೊಂದು ಬಲವಾದ ಪೆಟ್ಟು ಬಿದ್ದಿದೆ.

ಹೌದು, ಈಗ ಉದ್ಧವ್ ಠಾಕ್ರೆ ಸಹೋದರ ಜೈದೇವ ಠಾಕ್ರೆ ತಮ್ಮ ಸಂಪೂರ್ಣ ಬೆಂಬಲ ಏಕನಾಥ್ ಶಿಂಧೆ ಅವರಿಗೆ ಇದೆ ಎಂದು ಹೇಳಿದ್ದಾರೆ.

'ಕಳೆದ 5-6 ದಿನಗಳಿಂದ ನೀವು ಶಿಂಧೆ ಬಣದಲ್ಲಿ ಇದ್ದೀರಾ ಎಂದು ನನ್ನನ್ನು ಕೇಳಲಾಗುತ್ತಿದೆ, ಠಾಕ್ರೆಗಳು ಯಾವುದೇ ಬಣದಲ್ಲಿ ಇರಲು ಸಾಧ್ಯವಿಲ್ಲ, ಶಿಂಧೆ ಅವರ ಕಡೆಯಿಂದ ಇಟ್ಟಿರುವ ಕ್ರಮಗಳು ಮತ್ತು ಪ್ರೀತಿಯಿಂದ ನಾನು ಇಲ್ಲಿಗೆ ಬಂದಿದ್ದೇನೆ," ಎಂದು ಅವರು ಹೇಳಿದರು.ಟೀಮ್ ಶಿಂಧೆ ಆಯೋಜಿಸಿದ್ದ ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಇದನ್ನೂ ಓದಿ : Uttarakhand Bus Accident : ಕಂದಕಕ್ಕೆ ಉರುಳಿ ಬಿದ್ದ 50 ಪ್ರಯಾಣಿಕರಿದ್ದ ಬಸ್!

'ಏಕನಾಥ್ ಒಬ್ಬಂಟಿಯಾಗಲು ಬಿಡಬೇಡಿ. ನೀವೆಲ್ಲರೂ ಅವರನ್ನು ಬೆಂಬಲಿಸಬೇಕು. ಶಿಂಧೆ ಬಡವರಿಗಾಗಿ ಮತ್ತು ರೈತರಿಗಾಗಿ ಕೆಲಸ ಮಾಡುತ್ತಿದ್ದಾರೆ. ಶಿಂಧೆ ಅವರು ನಮ್ಮ ರೈತರಂತೆಯೇ ಇದ್ದಾರೆ; ಅವರು ತುಂಬಾ ಶ್ರಮಜೀವಿ" ಎಂದು ಜೈದೇವ್ ಠಾಕ್ರೆ ಹೇಳಿದ್ದಾರೆ.

"ನಾನು ಹೇಳುತ್ತೇನೆ, ಶಿಂಧೆ ರಾಜ್ಯ ಮರಳಿ ಬರಲಿ. ಚುನಾವಣೆ ನಡೆಯಲಿ ಮತ್ತು ಶಿಂಧೆ ರಾಜ್ಯ ಮರಳಿ ಬರಲಿ. ನನ್ನ ಸಂಪೂರ್ಣ ಬೆಂಬಲ ಏಕನಾಥ್ ಶಿಂಧೆಗೆ ಇದೆ" ಎಂದು ಅವರು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

 

Trending News