ಮೋದಿ ಮಂತ್ರಿಮಂಡಲದಲ್ಲಿ ಇರ್ತಾರಾ ಜೇಟ್ಲಿ? ಪ್ರಧಾನಿ ಮೋದಿಗೆ ಜೇಟ್ಲಿ ಬರೆದ ಪತ್ರದಲ್ಲಿ ಏನಿದೆ?

ಮೇ 30 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸುವ ಮೊದಲು ಬಿಜೆಪಿ ಹಿರಿಯ ನಾಯಕ ಅರುಣ್ ಜೇಟ್ಲಿ ಪ್ರಧಾನಮಂತ್ರಿಗೆ ಪತ್ರ ಬರೆದಿದ್ದಾರೆ.

Last Updated : May 29, 2019, 02:02 PM IST
ಮೋದಿ ಮಂತ್ರಿಮಂಡಲದಲ್ಲಿ ಇರ್ತಾರಾ ಜೇಟ್ಲಿ? ಪ್ರಧಾನಿ ಮೋದಿಗೆ ಜೇಟ್ಲಿ ಬರೆದ ಪತ್ರದಲ್ಲಿ ಏನಿದೆ?

ನವದೆಹಲಿ: ಮೇ 30 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸುವ ಮೊದಲು ಬಿಜೆಪಿ ಹಿರಿಯ ನಾಯಕ ಅರುಣ್ ಜೇಟ್ಲಿ ಪ್ರಧಾನಮಂತ್ರಿಗೆ ಪತ್ರ ಬರೆದಿದ್ದಾರೆ. 

ಮೋದಿ ಸರ್ಕಾರದಲ್ಲಿ ವಿತ್ತ ಸಚಿವರಾಗಿ ಉತ್ತಮ ಕಾರ್ಯನಿರ್ವಹಿಸಿದ್ದ ಅರುಣ್ ಜೇಟ್ಲಿ ಆರೋಗ್ಯ ಸಮಸ್ಯೆಯಿಂದಾಗಿ ನರೇಂದ್ರ ಮೋದಿಯವರ ಹೊಸ ಸರ್ಕಾರದ ಸಚಿವ ಸಂಪುಟದಿಂದ ಹೊರಗುಳಿಯಲಿದ್ದಾರೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿದ್ದವು.

ಹಲವು ದಿನಗಳಿಂದ ತೀವ್ರ ಅನಾರೋಗ್ಯ ಸಮಸ್ಯೆ ಎದುರಿಸುತ್ತಿರುವ ಅರುಣ್ ಜೇಟ್ಲಿ ಸದ್ಯ ಇರುವ ಹಣಕಾಸು ಖಾತೆಯನ್ನಾಗಲಿ ಅಥವಾ ಬೇರಾವುದೇ ಹೊಸ ಖಾತೆಯ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಬಯಸಿಲ್ಲ ಎಂದು ಎನ್ನಲಾಗಿತ್ತು. 

ಇದೀಗ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಬರೆದಿರುವ ಪತ್ರದಲ್ಲಿ ತಮ್ಮ ಆರೋಗ್ಯ ಸಮಸ್ಯೆಯನ್ನು ಉಲ್ಲೇಖಿಸಿರುವ ಜೇಟ್ಲಿ, ಹೊಸ ಮೋದಿ ಕ್ಯಾಬಿನೆಟ್ ನಲ್ಲಿ ಯಾವುದೇ ಜವಾಬ್ದಾರಿಯನ್ನೂ ನನಗೆ ನೀಡಬೇಡಿ ಎಂದು ಅವರು ಮನವಿ ಮಾಡಿದ್ದಾರೆ. 
 

More Stories

Trending News