ಜಮ್ಮು ಮತ್ತು ಕಾಶ್ಮೀರ: ಬಿಎಸ್ಎಫ್ ಯೋಧ ಹುತಾತ್ಮ

ಇದು ಐದು ದಿನಗಳಲ್ಲಿ ಪಾಕಿಸ್ತಾನದ ಆರನೇ ಕದನ ವಿರಾಮ ಉಲ್ಲಂಘನೆಯಾಗಿದೆ.

Last Updated : Sep 15, 2017, 10:24 AM IST
ಜಮ್ಮು ಮತ್ತು ಕಾಶ್ಮೀರ: ಬಿಎಸ್ಎಫ್ ಯೋಧ ಹುತಾತ್ಮ title=
Pic: ANI

ಶ್ರೀನಗರ: ಜಮ್ಮು ಕಾಶ್ಮೀರದ ಅರ್ನಿಯ ಅಂತರಾಷ್ಟ್ರೀಯ ಗಡಿ ಪ್ರದೇಶದಲ್ಲಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದೆ. ಈ ಸಮಯದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಬಿಎಸ್ಎಫ್ ಯೋಧ ಕಾನ್ಸ್ಟೇಬಲ್ ಬ್ರಿಜೇಂದ್ರ ಬಹದ್ದೂರ್ ಸಿಂಗ್ ಸಾವನ್ನಪ್ಪಿದ್ದಾರೆ. ಸ್ಥಳೀಯ ಒಬ್ಬ ನಾಗರಿಕ ಕೂಡ ಗಾಯಗೊಂಡಿರುವ ವರದಿಯಾಗಿದೆ.

ಕಳೆದ ಐದು ದಿನಗಳಲ್ಲಿ ಇದು ಪಾಕಿಸ್ತಾನದ ಆರನೇ ಕದನ ವಿರಾಮ ಉಲ್ಲಂಘನೆಯಾಗಿದೆ.

ಶುಕ್ರವಾರ ಬೆಳಗ್ಗೆ, ಪಾಕಿಸ್ತಾನ ಸೇನೆಯು ಭಾರತೀಯ ಪ್ರದೇಶಗಳಲ್ಲಿ ಪ್ರಚೋದಿತವಲ್ಲದ ದಹನದ ಕೆಲಸವನ್ನು ಮಾಡಿತು.

"ಬಿಎಸ್ಎಫ್ ಟ್ರೂಪೆರ್ ಮೇಲೆ ಪಾಕಿಸ್ತಾನದ ರೆಂಜರ್ಸ್ನಿಂದ ಕದನ ವಿರಾಮ ಉಲ್ಲಂಘನೆಯಾಗಿದೆ. ಅರ್ನಿಯ ಪ್ರದೇಶದಲ್ಲಿರುವ ಒಟ್ಟು 9 ಬಿಎಸ್ಎಫ್ ಪೋಸ್ಟ್ ಗಳನ್ನು ಗುರಿಯಾಗಿರಿಸಿ ಪಾಕಿಸ್ತಾನ ದಾಳಿ ನಡೆಸಿದೆ. ಪಾಕಿಸ್ತಾನವು ದಾಳಿಗಾಗಿ ಮಾರ್ಟರ್ಸ್ ಗಳು, ಆಟೋಮ್ಯಾಟಿಕ್ಸ್ ಮತ್ತು ಸಣ್ಣ ಶಸ್ತ್ರಾಸ್ತ್ರಗಳನ್ನು ಬಳಸುತ್ತಿದ್ದಾರೆ. ಬಿಎಸ್ಎಫ್ ಸೈನಿಕರು ಈ ದಾಳಿಯನ್ನು ಪರಿಣಾಮಕಾರಿಯಾಗಿ ಎದುರಿಸುತ್ತಿದೆ ಎಂದು ಬಿಎಸ್ಎಫ್ ಮೂಲಗಳು ಐಎಎನ್ಎಸ್ ಗೆ ತಿಳಿಸಿವೆ.

"ಭಾರೀ ಗುಂಡಿನ ದಾಳಿಗಳು ಈಗ ಈ ಪ್ರದೇಶಗಳಲ್ಲಿ ನಡೆಯುತ್ತಿವೆ" ಎಂದು ಮೂಲಗಳು ತಿಳಿಸಿವೆ.

ಏತನ್ಮಧ್ಯೆ, ಆರ್ನಿಯಾ ಉಪ ವಲಯದಲ್ಲಿ ಅಂತರರಾಷ್ಟ್ರೀಯ ಗಡಿಯ ಸಮೀಪದ ಹಳ್ಳಿಗಳಲ್ಲಿ ಜನಸಾಮಾನ್ಯರು ಗಾಬರಿಗೊಂದಿರುವ ವರದಿಯಾಗಿದೆ.

ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆಯ ಕಾರಣದಿಂದ ಯಾವುದೇ ಸಂಭಾವ್ಯತೆಯನ್ನು ಎದುರಿಸಲು ಅಧಿಕಾರಿಗಳು ಸಿದ್ದರಿದ್ದಾರೆ ಎಂದು ಬಿಎಸ್ಎಫ್ ಪಡೆ ತಿಳಿಸಿದೆ.

Trending News