ಜಮ್ಮು-ಕಾಶ್ಮೀರ: ಪೂಂಚ್ ಪ್ರದೇಶದಲ್ಲಿ ಭಾರತ-ಪಾಕ್ ಮಧ್ಯೆ ಗುಂಡಿನ ದಾಳಿ

ಪೂಂಚ್ ಪ್ರದೇಶದಲ್ಲಿ ಇಂದು ನಡೆದ ಗುಂಡಿನ ದಾಳಿಯಲ್ಲಿ 10 ವರ್ಷದ ಬಾಲಕನ ದುರ್ಮರಣ.

Last Updated : Oct 2, 2017, 12:24 PM IST
ಜಮ್ಮು-ಕಾಶ್ಮೀರ: ಪೂಂಚ್ ಪ್ರದೇಶದಲ್ಲಿ ಭಾರತ-ಪಾಕ್ ಮಧ್ಯೆ ಗುಂಡಿನ ದಾಳಿ title=

ನವದೆಹಲಿ: ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಪಾಕಿಸ್ತಾನ ಮತ್ತೊಮ್ಮೆ ಗಡಿ ಉಲ್ಲಂಘನೆ ಮಾಡಿದೆ. ಯಾವುದೇ ಕಾರಣವಿಲ್ಲದೆ ಪಾಕಿಸ್ತಾನ ಸೇನೆಯಿಂದ ಭಾರತೀಯ ಪೋಸ್ಟ್ಗಳ ಮೇಲಿನ ದಾಳಿ ನಡೆಸಲಾಗಿದೆ. ಪಾಕಿಸ್ತಾನದ ಈ ದಾಳಿಗೆ ಭಾರತೀಯ ಸೇನೆಯೂ ಪ್ರತಿಕಾರ ನೀಡಿದೆ.

ಜಮ್ಮು ಕಾಶ್ಮೀರ ಪೋಲೀಸರ ಪ್ರಕಾರ, ಪೂಂಚ್ ಪ್ರದೇಶದ ಕೆರ್ನಿ ಮತ್ತು ದಿಗ್ವರ್ ಸೆಕ್ಟರ್ಸ್ ನಲ್ಲಿ ಪಾಕಿಸ್ತಾನ ನಡೆಸಿದ ದಾಳಿಯಲ್ಲಿ 10 ವರ್ಷದ ಬಾಲಕ ಮರಣ ಹೊಂದಿದ್ದು, ಐವರು ಗಾಯಗೊಂಡಿದ್ದಾರೆ.

 

 

ಇದಲ್ಲದೆ ತುಂಗಘರ್ ಸೇನೆಯ ಸೈನ್ಯವು ಪಾಕಿಸ್ತಾನದಂತೆ ಗಡಿ ನುಸುಳಲು ಪ್ರಯತ್ನ ಮಾಡಿರುವ ವರದಿಯಾಗಿದೆ. 5-6 ಭಯೋತ್ಪಾದಕರು ಗಡಿ ನುಸುಳಲು ಪ್ರಯತ್ನಿಸಿದ್ದು ಭಾರತೀಯ ಭದ್ರತಾ ಪಡೆಗಳು ಭಯೋತ್ಪಾದಕರನ್ನು ಕೊಂದಿರುವುದಾಗಿ ತಿಳಿದು ಬಂದಿದೆ.

 

 

Trending News