JEE Main 2023 Relust : ಜೆಇಇ ಮೇನ್ 2023 ರ ಜನವರಿ ಸೆಷನ್ ಬಿಇ/ಬಿಟೆಕ್ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಲಾಗಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಅಭ್ಯರ್ಥಿಗಳಿಗೆ ಫಲಿತಾಂಶವನ್ನು ಬಿಡುಗಡೆ ಮಾಡಿದೆ. JEE 2023 ಮೊದಲ ಅವಧಿಯ ಪರೀಕ್ಷೆಗಳನ್ನು ಜನವರಿ 24, 25, 28, 29, 30, 31 ಮತ್ತು ಫೆಬ್ರವರಿ 1, 2023 ರಂದು ನಡೆಸಿತ್ತು. B.Arch/B.Planning ಫಲಿತಾಂಶವನ್ನು ಇನ್ನೂ ಬಿಡುಗಡೆ ಮಾಡಲಾಗಿಲ್ಲ. ಜೆಇಇ ಮೇನ್ 2023 ರ ಜನವರಿ ಸೆಷನ್ ಬಿ.ಆರ್ಚ್/ಬಿ.ಪ್ಲಾನಿಂಗ್ ಫಲಿತಾಂಶವು ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಜೆಇಇ ಮೇನ್ 2023: ಜೆಇಇ ಮೇನ್ 2023 ಜನವರಿ ಸೆಷನ್ ಬಿಇ/ಬಿ.ಟೆಕ್ ಫಲಿತಾಂಶವನ್ನು ಪರಿಶೀಲಿಸುವುದು ಹೇಗೆ ?
1. JEE Main ನ ಅಧಿಕೃತ ವೆಬ್‌ಸೈಟ್ jeemain.nta.nic.in.ಗೆ ಭೇಟಿ ನೀಡಿ.
2. ಮುಖಪುಟದಲ್ಲಿ ಕೆಳಗೆ ಸ್ಕ್ರಾಲ್ ಮಾಡಿ.
3. Candidate Activity' ವಿಭಾಗದ ಅಡಿಯಲ್ಲಿ, ಲಿಂಕ್ 1 ಅಥವಾ ಲಿಂಕ್ 2 ಅನ್ನು ಕ್ಲಿಕ್ ಮಾಡಿ.
4. ನಿಮ್ಮನ್ನು ಹೊಸ ಪುಟಕ್ಕೆ ಡೈರೆಕ್ಟ್ ಮಾಡಲಾಗುತ್ತದೆ.
5. ನಿಮ್ಮ ಲಾಗಿನ್ ಕ್ರೆಡೆನ್ಶಿಯಲ್ ಹಾಕಿ ಸಬ್ಮಿಟ್ ಮಾಡಿ.
ನ6. ಇಲ್ಲಿ ನಿಮ್ಮ ಫಲಿತಾಂಶ ಕಾಣಿಸುತ್ತದೆ. ನಿಮ್ಮ ಉಪಯೋಗಕ್ಕಾಗಿ ಫಲಿತಾಂಶದ ಪ್ರಿಂಟ್ ಔಟ್ ಅನ್ನು ತೆಗೆದುಕೊಳ್ಳಬಹುದು.
ಇದನ್ನೂ ಓದಿ : Indian Railways: ಹಿರಿಯ ನಾಗರಿಕರಿಗೆ ಭಾರತೀಯ ರೈಲ್ವೆ ಇಲಾಖೆಯಿಂದ ಬೊಂಬಾಟ್ ಗಿಫ್ಟ್: ಮತ್ತೆ ಬರಲಿದೆ ಈ ವ್ಯವಸ್ಥೆ!
ಜೆಇಇ ಮುಖ್ಯ ಅಂತಿಮ ಉತ್ತರದ ಕೀಯನ್ನು ಪರೀಕ್ಷೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.
JEEಯ ಏಪ್ರಿಲ್ ಸೆಷನ್ ನ ನೋಂದಣಿ ಕಾರ್ಯ ಫೆಬ್ರವರಿ 7, 2023 ರಂದು ಪ್ರಾರಂಭವಾಗುತ್ತದೆ ಎಂದು ಹೇಳಲಾಗಿತ್ತು. ಆದರೆ
NTA ಯ ಅಧಿಕೃತ ವೆಬ್‌ಸೈಟ್‌ನಲ್ಲಿ ನೋಂದಣಿ ಅಥವಾ ಅರ್ಜಿ ನಮೂನೆಗೆ ಯಾವುದೇ ಲಿಂಕ್ ಅನ್ನು ಇನ್ನೂ ಕೂಡಾ ನೀಡಿಲ್ಲ. ಹೀಗಾಗಿ ಅಭ್ಯರ್ಥಿಗಳು ಜೆಇಇ ಮೇನ್ 2023 ಏಪ್ರಿಲ್ ಸೆಷನ್ ನೋಂದಣಿಗಾಗಿ ಕಾಯುತ್ತಿದ್ದಾರೆ. ಎನ್‌ಟಿಎ ಶೀಘ್ರದಲ್ಲೇ ಏಪ್ರಿಲ್ ಸೆಷನ್ ನೋಂದಣಿ ಪ್ರಕ್ರಿಯೆಗೆ ಘೋಷಣೆ ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ : Viral News: ದೈಹಿಕ ಸಂಬಂಧ ಬೆಳೆಸಿ ಮದುವೆಯಾಗಲು ನಿರಾಕರಿಸಿದ ಯುವಕ: ಅನ್ಯಾಯ ಹೇಳಿದರೂ ಥಳಿಸಿದ ಕುಟುಂಬ… ಮುಂದೇನಾಯ್ತು ಗೊತ್ತಾ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ