ನವದೆಹಲಿ: ಮುಂಬೈನಿಂದ ಜೈಪುರಕ್ಕೆ ಸಂಚರಿಸುತ್ತಿದ್ದ ಜೆಟ್ ಏರ್ವೇಸ್ ವಿಮಾನದಲ್ಲಿ ಪ್ರಯಾಣಿಕರಿಗೆ ಕಿವಿ, ಮೂಗಿನಿಂದ ರಕ್ತಸ್ರಾವ ಮತ್ತು ತಲೆ ನೋವು ಸಮಸ್ಯೆ ಎದುರಿಸಿದ ಘಟನೆ ಗುರುವಾರ ಬೆಳಿಗ್ಗೆ ಸಂಭವಿಸಿದೆ.
ಮಾಹಿತಿ ಪ್ರಕಾರ, ಜೆಟ್ ಏರ್ವೇಸ್ ನ 9W-697 ವಿಮಾನದಲ್ಲಿ ಪ್ರಯಾಣಿಕರು ದೂರು ನೀಡಿದ ನಂತರ ತುರ್ತು ಲ್ಯಾಂಡಿಂಗ್ ನಡೆಸಲಾಯಿತು. ಒಟ್ಟು 166 ಪ್ರಯಾಣಿಕರಿದ್ದ ವಿಮಾನದಲ್ಲಿ 30 ಮಂದಿಗೆ ತಲೆನೋವು ಕಾಣಿಸಿಕೊಂಡಿತು. ವಿಮಾನ ತುರ್ತು ಲ್ಯಾಂಡಿಂಗ್ ಆದ ಕಾರಣ ಪ್ರಯಾಣಿಕರಿಗೆ ಕಿವಿ, ಮೂಗಿನಿಂದ ರಕ್ತಸ್ರಾವ ಉಂಟಾಗಿದೆ ಎನ್ನಲಾಗಿದೆ.
ಕ್ಯಾಬಿನ್ ಸಿಬ್ಬಂದಿ ಕ್ಯಾಬಿನ್ ಒತ್ತಡ ನಿರ್ವಹಣೆಯ ಸ್ವಿಚ್ ಆನ್ ಮಾಡಲು ಮರೆತಿರುವುದೇ ಈ ಸಮಸ್ಯೆ ಉಂಟಾಗಲು ಕಾರಣ ಎನ್ನಲಾಗಿದೆ. ಪ್ರಯಾಣಿಕರ ದೂರಿನ ನಂತರ ವಿಮಾನವನ್ನು ಮುಂಬೈನಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಗಿದೆ.
ಮಾಹಿತಿ ಪ್ರಕಾರ, ಒಟ್ಟು 166 ಪ್ರಯಾಣಿಕರಿದ್ದ ವಿಮಾನವು ಬೆಳಿಗ್ಗೆ 5:30 ಕ್ಕೆ ಮುಂಬೈನಿಂದ ಜೈಪುರಕ್ಕೆ ಹೊರಟಿತ್ತು. ಸುಮಾರು ಒಂದು ಗಂಟೆ ಬಳಿಕ ಪ್ರಯಾಣಿಕರು ದೂರು ನೀಡಿದ ತಕ್ಷಣವೇ ಪ್ರಯಾಣಿಕರಿಗೆ ಆಕ್ಸಿಜನ್ ಮಾಸ್ಕ್ ನೀಡಲಾಯಿತು. ನಂತರ ತುರ್ತು ಲ್ಯಾಂಡಿಂಗ್ ಮಾಡಲಾಗಿದೆ. ಈಗ ಪ್ರಯಾಣಿಕರಿಗೆ ಮುಂಬಯಿ ವಿಮಾನ ನಿಲ್ದಾಣದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಪ್ರಕಾರ, ವಿಮಾನ ಅಪಘಾತದ ಬಗ್ಗೆ ತನಿಖಾ ಬ್ಯೂರೋ (AAIb) ತನಿಖೆ ಪ್ರಾರಂಭಿಸಿದೆ.