ಕೆನರಾ ಬ್ಯಾಂಕ್ಗೆ ಸಂಬಂಧಿಸಿದ ₹ 538 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೆಟ್ ಏರ್ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ ಎಂದು ಮೂಲಗಳು ತಿಳಿಸಿವೆ.
ಈ ವರ್ಷದ ಸೆಪ್ಟೆಂಬರ್ನೊಳಗೆ ವಾಣಿಜ್ಯ ಸೇವೆಗಳನ್ನು ಪುನರಾರಂಭಿಸುವ ಗುರಿಯನ್ನು ಹೊಂದಿರುವ ಜೆಟ್ ಏರ್ವೇಸ್ ಬಹು ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿದೆ.ಈ ಹಿನ್ನೆಲೆಯಲ್ಲಿ ಎಲ್ಲಾ ಅಭ್ಯರ್ಥಿಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ.ಇದೆ ವೇಳೆ ವಿಮಾನಯಾನವು ಈ ಹಿಂದಿನ ಜೆಟ್ ಏರ್ವೇಸ್ ಉದ್ಯೋಗಿಗಳಿಗೂ ಸಹ ಅರ್ಜಿ ಸಲ್ಲಿಸಲು ಪ್ರೋತ್ಸಾಹಿಸುತ್ತದೆ.
ವಿದೇಶಿ ವಿನಿಮಯ ಕಾನೂನನ್ನು ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಟ್ ಏರ್ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಅವರ ಆವರಣದಲ್ಲಿ ಜಾರಿ ನಿರ್ದೇಶನಾಲಯ ಶುಕ್ರವಾರ ಶೋಧ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜೆಟ್ ಏರ್ವೇಸ್ ಉಪ ಮುಖ್ಯ ಕಾರ್ಯನಿರ್ವಾಹಕ ಮತ್ತು ಮುಖ್ಯ ಹಣಕಾಸು ಅಧಿಕಾರಿ ಅಮಿತ್ ಅಗರ್ವಾಲ್ ವೈಯಕ್ತಿಕ ಕಾರಣಗಳಿಂದಾಗಿ ರಾಜಿನಾಮೆ ನೀಡಿದ್ದಾರೆ ಎಂದು ಜೆಟ್ ಏರ್ವೇಸ್ ಮಂಗಳವಾರ ತಿಳಿಸಿದೆ.
ಜೆಟ್ ಏರ್ವೇಸ್ ನ ಪ್ರವರ್ತಕ ಮತ್ತು ಮಾಜಿ ಅಧ್ಯಕ್ಷ ನರೇಶ್ ಗೋಯಲ್ ಬುಧವಾರದಂದು ಏರ್ಲೈನ್ ನಿಗದಿತ ಬಿಡುಗಡೆ ಹಣವನ್ನು ಖಾತ್ರಿಪಡಿಸಿಕೊಳ್ಳಲು ಲೇವಾದೇವಿದಾರರಿಂದ ಒಪ್ಪಂದ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ. ಇದರಿಂದ ಬಿಕ್ಕಟ್ಟಿನ ಹಿಡಿತದ ಋಣಭಾರ ಪರಿಹಾರಕ್ಕೆ ಒಳಗಾಗುತ್ತದೆ ಮತ್ತು1,500 ಕೋಟಿ ರೂಪಾಯಿಗಳ ಹಣವನ್ನು ಮರುಪಾವತಿ ಮಾಡಬಹುದು ಎನ್ನಲಾಗಿದೆ.
ಭಾನುವಾರದಂದು ಇಥಿಯೋಪಿಯನ್ ಏರ್ಲೈನ್ಸ್ ಅಪಘಾತದ ನಂತರ ಬೋಯಿಂಗ್ 737 MAX 8 ವಿಮಾನವನ್ನು ಬಳಸಿಕೊಳ್ಳುವ ಬಗ್ಗೆ ಭಾರತ ವಾಯುಯಾನದ ಡಿ.ಜಿ.ಸಿ.ಎ. ಮರುಪರಿಶೀಲನೆ ನಡೆಸಲು ಮುಂದಾಗಿದೆ.ಈ ಹಿನ್ನಲೆಯಲ್ಲಿ ಅದು ಬೋಯಿಂಗ್ ಮತ್ತು ಜೆಟ್ ಏರ್ವೇಸ್ ಮತ್ತು ಸ್ಪೈಸ್ ಜೆಟ್ನಂತಹ ಏರ್ ಲೈನ್ಸ್ ಗಳ ಜೊತೆ ಚರ್ಚೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಜೆಟ್ ಏರ್ವೇಸ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಓರ್ವ ವ್ಯಕ್ತಿಯೋಬ್ಬನು ವಿಮಾನವನ್ನು ಸ್ಫೋಟಿಸುವಂತೆ ಬೆದರಿಕೆ ಹಾಕಿದ್ದಕ್ಕಾಗಿ ಬಂಧಿಸಲಾಗಿದೆ.ಎಎನ್ಐ ಪ್ರಕಾರ ಆ ವ್ಯಕ್ತಿ ಫೋನ್ನಲ್ಲಿ ಮಾತನಾಡುತ್ತಿದ್ದ ವೇಳೆ ವಿಮಾನವನ್ನು ಸ್ಫೋಟಿಸುವ ಬೆದರಿಕೆ ಹಾಕಿದ್ದರು ಎಂದು ವರದಿ ಮಾಡಿದೆ.ಈ ವಿಮಾನವು ಕೊಲ್ಕತ್ತಾದಿಂದ ಮುಂಬೈಗೆ ಹೊರಟಿತ್ತು ಎಂದು ತಿಳಿದು ಬಂದಿದೆ.
ಈ ಅಪಘಾತವನ್ನು ಉಲ್ಲೇಖಿಸಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮತ್ತೊಬ್ಬ ಪ್ರಯಾಣಿಕ ರಕ್ಷಣಾ ಸಿಬ್ಬಂದಿಗಳನ್ನು ಹೊಗಳಿ ಜೆಟ್ ಏರ್ವೇಸ್ ಅಧ್ಯಕ್ಷ ನರೇಶ್ ಗೋಯಲ್ ರಿಗೆ ಪತ್ರ ಬರೆದಿದ್ದಾರೆ.
ಜೆಟ್ ಏರ್ವೇಸ್ ಕಂಪೆನಿಯ ಮಾಲೀಕನ ಆಜ್ಞೆಯ ಮೇರೆಗೆ ಕಳೆದ ಎರಡು ತಿಂಗಳುಗಳಲ್ಲಿ ಜೆಟ್ ಏರ್ವೇಸ್ನ ಏರ್ ಹೊಸ್ಟೆಸ್ ಹಾಂಗ್ ಕಾಂಗ್ಗೆ ಏಳು ಪ್ರವಾಸಗಳಲ್ಲಿ $ 10 ಲಕ್ಷ ಡಾಲರ್ಗಳನ್ನು ಕಳ್ಳಸಾಗಾಣಿಕೆ ಮಾಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.