ನವದೆಹಲಿ: 'ನನಗೆ ಗುಜರಾತ್ ಪೋಲಿಸರಿಂದ ಜೀವ ಬೆದರಿಕೆ ಇದೆ. ಅವರು ನನ್ನನ್ನು ಎನ್ಕೌಂಟರ್'ನಲ್ಲಿ ಕೊಲ್ಲಲು ಯೋಜಿಸಿದ್ದಾರೆ ಎಂದು ದಲಿತ ಕಾರ್ಯಕರ್ತ ಜಿಗ್ನೇಶ್ ಮೇವಾನಿ ಆರೋಪಿಸಿದ್ದಾರೆ.
'ಎಡಿಆರ್ ಪೊಲೀಸ್ ಮತ್ತು ಮಾಧ್ಯಮ' ಎಂಬ WhatsApp ಗುಂಪಿನ ಕುರಿತು ಚರ್ಚೆಯು ಶುಕ್ರವಾರ ವೈರಲ್ ಆದ ನಂತರ ಗುಜರಾತ್ ದಲಿತ ನಾಯಕ ಮೇವಾನಿ ಟ್ವಿಟ್ಟರ್ನಲ್ಲಿ ಈ ಆರೋಪವನ್ನು ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಜಿಗ್ನೇಶ್ ಮೇವಾನಿ, "ಎನ್ಕೌಂಟರ್? ಹೌದು; ನನ್ನನ್ನು ಎನ್ಕೌಂಟರ್ನಲ್ಲಿ ಹೇಗೆ ಕೊಂದು ಮುಗಿಸಬಹುದು ಎಂಬ ಬಗ್ಗೆ ಇಬ್ಬರು ಉನ್ನತ ಪೊಲೀಸ್ ಅಧಿಕಾರಿಗಳು ವಾಟ್ಸಾಪ್ ನಲ್ಲಿ ಸಂವಹನ ಮಾಡಿರುವುದನ್ನು ಬಹಿರಂಗಪಡಿಸುವ ವೆಬ್ ಪೋರ್ಟಲ್ ಲಿಂಕ್ ಇಲ್ಲಿದೆ. ಇದನ್ನು ನಂಬುತ್ತೀರಾ? ಎಂದು ಕೇಳಿದ್ದಾರೆ.
Jignesh mevani's encounter?
Here is the link of gujarati web portal which exposes a WhatsApp communication where two top cops are discussing how I could be killed in an encounter. Can you believe this ?https://t.co/qdS8e4iHCe— Jignesh Mevani (@jigneshmevani80) February 23, 2018
ಅಲ್ಲದೆ, ಮೇವಾನಿ ಅವರು ತಮಗೆ ಪ್ರಾಣ ಬೆದರಿಕೆ ಇರುವ ಬಗ್ಗೆ ಗುಜರಾತ್ ಡಿಜಿಪಿ, ರಾಜ್ಯ ಗೃಹ ಸಚಿವರು ಮತ್ತು ಗೃಹ ಕಾರ್ಯದರ್ಶಿಗೆ ದೂರು ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ.