5 ತಿಂಗಳ ಅವಧಿಗೆ ಉಚಿತ ಡೇಟಾ, ಉಚಿತ ಕಾಲಿಂಗ್...Jio ನಿಂದ Independence Day Offer

ರಿಲಯನ್ಸ್ ಜಿಯೋ ವತಿಯಿಂದ JioFi WiFi ಹಾಟ್ ಸ್ಪಾಟ್ ಖರೀದಿಸುವ ಗ್ರಾಹಕರಿಗೆ ವಿಶೇಷ ಸ್ವಾತಂತ್ರ್ಯ ದಿನೋತ್ಸವದ ಆಫರ್ ನೀಡಲಾಗುತ್ತಿದೆ. JioFi ಡಿವೈಸ್ ಆಕ್ಟಿವೇಟ್ ಮಾಡಿ ಯಾವುದಾದರೊಂದು ಪ್ಲಾನ್ ರಿಚಾರ್ಜ್ ಮಾಡಿದವರಿಗೆ ಐದು ತಿಂಗಳ ಉಚಿತ ಡೇಟಾ ಹಾಗೂ ಜಿಯೋನಿಂದ ಜಿಯೋಗೆ ಐದು ತಿಂಗಳ ಉಚಿತ ಅನಿಯಮಿತ ಕರೆ ಸೌಲಭ್ಯ ನೀಡಲಾಗುತ್ತಿದ್ದು, ಇತರೆ ಲಾಭಗಳೂ ಕೂಡ ಸಿಗಲಿವೆ.

Updated: Aug 14, 2020 , 09:34 PM IST
5 ತಿಂಗಳ ಅವಧಿಗೆ ಉಚಿತ ಡೇಟಾ, ಉಚಿತ ಕಾಲಿಂಗ್...Jio ನಿಂದ Independence Day Offer

ನವದೆಹಲಿ: ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ರಿಲಯನ್ಸ್ ಜಿಯೋ ವಿಶೇಷ ಕೊಡುಗೆ ನೀಡುತ್ತಿದೆ. ಈ ಆಫರ್ ಅಡಿ  ಜಿಯೋಫೈ(JioFi)  4 ಜಿ ವೈರ್‌ಲೆಸ್ ಹಾಟ್‌ಸ್ಪಾಟ್ ಖರೀದಿದಾರರಿಗೆ ಐದು ತಿಂಗಳವರೆಗೆ ಉಚಿತ ಡೇಟಾ ಮತ್ತು ಜಿಯೋದಿಂದ ಜಿಯೋ ಅನ್ಲಿಮಿಟೆಡ್ ಉಚಿತ ಕರೆ ನೀಡಲಾಗುತ್ತಿದೆ. ಜಿಯೋಫೈ ಬೆಲೆಯನ್ನು 1,999 ರೂ. ನಿಗದಿಪಡಿಸಲಾಗಿದೆ. ಈ ಕೊಡುಗೆಯ ಲಾಭ ಪಡೆಯಲು, ಖರೀದಿದಾರರು ಮೊದಲು ಅಸ್ತಿತ್ವದಲ್ಲಿರುವ ಜಿಯೋಫೈ ಪ್ಲಾನ್ ತೆಗೆದುಕೊಳ್ಳಬೇಕಾಗುತ್ತದೆ.

ರಿಲಯನ್ಸ್ ಡಿಜಿಟಲ್ ಅಂಗಡಿಯಿಂದ ಜಿಯೋಫೈ ಹಾಟ್‌ಸ್ಪಾಟ್ ಖರೀದಿಸಿದ ನಂತರ ಮತ್ತು ಜಿಯೋ ಸಿಮ್ ಅನ್ನು ಸಕ್ರಿಯಗೊಳಿಸಿದ ನಂತರ, ಗ್ರಾಹಕರು JioFi ಉಪಕರಣವನ್ನು ಸಕ್ರೀಯಗೊಳಿಸಲು ಮೂರು ಯೋಜನೆಗಳಲ್ಲಿ ಒಂದನ್ನು ಆಯ್ಕೆ ಮಾದಬೇಕಾಗಲಿದೆ. ಜಿಯೋಫೈ ಸಾಧನದಲ್ಲಿ ಸಿಮ್ ಅನ್ನು ಸಕ್ರಿಯಗೊಳಿಸಿದ ನಂತರ, ಕೆಲವೇ ಸಮಯದಲ್ಲಿ ಪ್ಲಾನ್ ಗಳ ಬೆನಿಫಿಟ್ ಗಳು ನಿಮಗೆ ಸಿಗಲು ಆರಂಭಿಸಲಿವೆ. ಆಕ್ಟಿವೆಶನ್ ಸ್ಟೇಟಸ್ ಅನ್ನು ನೀವು ನಿಮ್ಮ MyJio ಆಪ್ ಮೇಲೆ ಪರಿಶೀಲಿಸಬಹುದಾಗಿದೆ. ಗ್ರಾಹಕರು ಈ ಕೊಡುಗೆಯನ್ನು ಕಂಪನಿಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಕೂಡ ಪಡೆಯಬಹುದಾಗಿದೆ.

ರೂ.199 ಅತಿ ಅಗ್ಗದ ಬೆಲೆಯ ಪ್ಲಾನ್ ಆಗಿದೆ
ಜಿಯೋ ಫೈ ನಲ್ಲಿ ರೂ.199 ಅಗ್ಗದ ಬೆಲೆಯ ಪ್ಲಾನ್ ಆಗಿದ್ದು, ಇದರಲ್ಲಿ ನಿತ್ಯ 1.5 ಜಿಬಿ ಡೇಟಾ ಸಿಗಲಿದೆ. ಈ ಪ್ಲಾನ್ 28 ದಿನಗಳ ಸಿಂಧುತ್ವ ಹೊಂದಿದೆ. ಈ ಪ್ಲಾನ್ ಖರೀದಿಸಿದ ಬಳಿಕ ಗ್ರಾಹಕರು ರೂ.99 ಪಾವತಿಸಿ JioPrime ಮೆಂಬರ್ ಷಿಪ್ ಆಕ್ಟಿವೇಟ್ ಮಾಡಿಕೊಳ್ಳಬೇಕು. ಡೆಲಿ ಡೇಟಾ ಹೊರತುಪಡಿಸಿ ಜಿಯೋ ನೆಟ್ವರ್ಕ್ ಮೇಲೆ ಅನಿಯಮಿತ ಕಾಲಿಂಗ್ ಹಾಗೂ ಇತರ ನೆಟ್ವರ್ಕ್ ಗಾಗಿ 1000 ನಿಮಿಷ ಕಾಲಿಂಗ್ ಜೊತೆಗೆ ನಿತ್ಯ 100 ಉಚಿತ SMSಗಳು ಸಿಗಲಿವೆ.

5 ತಿಂಗಳ ಉಚಿತ ಡೇಟಾ ಆಫರ್
ಜಿಯೋ ಫೈನ ರೂ.249 ಪ್ಲಾನ್ ಅಡಿ ನಿತ್ಯ 2 ಜಿಬಿ ಡೇಟಾ ಸಿಗುತ್ತದೆ ಹಾಗೂ ಇದರ ಸಿಂಧುತ್ವ ಕೂಡ 28 ದಿನಗಳು ಇರಲಿದೆ. ಹಿಂದಿನ ಪ್ಲಾನ್ ನಂತೆಯೇ ಇತರ ಲಾಭಗಳೂ ಕೂಡ ಇರಲಿವೆ. ರೂ.349  ಬೆಲೆಯ ಪ್ಲಾನ್ ಅಡಿ ನಿತ್ಯ 3ಜಿಬಿ ಡೇಟಾ, 28 ದಿನಗಳ ಅವಧಿಗೆ ಸಿಗಲಿದೆ. ಈ ಪ್ಲಾನ್ ಅಡಿಯಲ್ಲಿ ಜಿಯೋ ಐದು ತಿಂಗಳ ಅವಧಿಗೆ ಅನ್ ಲಿಮಿಟೆಡ್ ಕಾಲಿಂಗ್ ಹಾಗೂ ಡೇಟಾ ತನ್ನ ಬಳಕೆದಾರರಿಗೆ ನೀಡಲಿದೆ.