ನವದೆಹಲಿ: ಜೆಎನ್ಯು ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಗೆ ಭೂಗತ ಪಾತಕಿ ರವಿ ಪೂಜಾರಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಕುರಿತಾಗಿ ತಮ್ಮ ಟ್ವಿಟ್ಟರ್ ನಲ್ಲಿ ತಿಳಿಸಿರುವ ಉಮರ್ ಖಾಲಿದ್ " ಕಳೆದ ಮೂರು ದಿನಗಳಲ್ಲಿ ಜಿಗ್ನೇಶ್ ನಿಗೆ ಮೂರನೇ ಬಾರಿಗೆ ಜೀವ ಬೆದರಿಕೆಯನ್ನು ಒಡ್ಡಲಾಗಿದೆ. ಈ ಬಾರಿ ಜಿಗ್ನೇಶ್ ನನ್ನು ಕೊಲ್ಲಲು ಯತ್ನಿಸುತ್ತಿರುವ ವ್ಯಕ್ತಿ ನನ್ನ ಹೆಸರನ್ನು ಸಹಿತ ಹಿಟ್ ಲಿಸ್ಟ್ ನಲ್ಲಿ ಪ್ರಸ್ತಾಪಿಸಿದ್ದಾನೆ" ಎಂದು ಉಮರ್ ಖಾಲಿದ್ ತಿಳಿಸಿದ್ದಾರೆ.
"ಈ ವಿಚಾರವಾಗಿ ಜಿಗ್ನೇಶ್ ಮೆವಾನಿ ನನಗೆ ತಿಳಿಸಿದ ಈ ಹಿನ್ನಲೆಯಲ್ಲಿ ನಾನು ಪೊಲೀಸರಿಗೆ ದೂರು ನೀಡಿದ್ದೇನೆ.ಈಗಾಗಲೇ ದೂರು ದಾಖಲಾಗಿದ್ದು ಜೀವ ಭಯವಿರುವುದರ ಕುರಿತಾಗಿ ತನಿಖೆಗೆ ಒಳಪಡಿಸಿ ರಕ್ಷಣೆ ಒದಗಿಸಲಿದ್ದಾರೆ" ಎಂದು ಖಾಲಿದ್ ತಿಳಿಸಿದ್ದಾರೆ.
Third death threat to Jignesh in the last 3 days. This time, the person threatening to kill Jignesh mentions that I am also on his list. Death threats to journalist, activist & any critic of the govt is now becoming the norm. This is sinister. https://t.co/snjJoGCy68
— Umar Khalid (@UmarKhalidJNU) June 8, 2018
ಶುಕ್ರವಾರದಂದು ಜಿಗ್ನೇಶ್ ಮವಾಣಿಗೆ ಗ್ಯಾಂಗ್ ಸ್ಟಾರ್ ರವಿ ಪೂಜಾರಿ ಎನ್ನುವ ವ್ಯಕ್ತಿ ಕರೆ ಜೀವ ಬೆದರಿಕೆ ಒಡ್ಡಿದ್ದರು ಎಂದು ಅವರು ಆರೋಪಿಸಿದರು.